Jio Offers : ಫುಟ್ಬಾಲ್ ವಿಶ್ವಕಪ್ ಆರಂಭಕ್ಕೂ ಮುನ್ನ ಜಿಯೋ ನೀಡ್ತಾ ಇದೆ ಗ್ರಾಹಕರಿಗೆ ಧಮಾಕಾ ಆಫರ್!!!

ಟೆಲಿಕಾಮ್ ದೈತ್ಯ ಕಂಪನಿ ಜಿಯೋ ಜನರನ್ನು ಸೆಳೆಯಲು ನಾನಾ ತಂತ್ರ ಬಳಸುತ್ತಿದ್ದು, ಇದೀಗ ಹೊಸ ಯೋಜನೆಯ ಮೂಲಕ ಜನ ಮನ ಗೆಲ್ಲಲು ಅಣಿಯಾಗಿದೆ. ಅದೇನು ಅಂತ ಯೋಚಿಸುತ್ತಿದ್ದೀರಾ??

ಬಹುನಿರೀಕ್ಷಿತ ಫಿಫಾ ವಿಶ್ವಕಪ್‌ 2022 (FIFA World Cup 2022) ಪಂದ್ಯಾವಳಿಗೆ ಕೇವಲ ಎರಡು ದಿನವಷ್ಟೆ ಬಾಕಿ ಉಳಿದಿದೆ. ಫುಟ್​​ಬಾಲ್‌ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಕತಾರ್ ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗಿ ನಿಂತಿದೆ. ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಟೂರ್ನಿಗೆ ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದೆ.ಈ ನಡುವೆ ದೇಶದಲ್ಲಿ ಟೆಲಿಕಾಮ್ ಕಂಪನಿಗಳ ಮೂಲಕ ತನ್ನದೇ ಪಾರುಪತ್ಯ ಕಾಯ್ದು ಕೊಂಡಿರುವ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ, FIFA World Cup 2022: ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅನ್ನು ವೀಕ್ಷಿಸಲು ಬಯಸುವ ಅಭಿಮಾನಿಗಳಿಗಾಗಿ (Reliance JIO) ಐದು ಹೊಸ ಇಂಟರ್‌ ನ್ಯಾಷನಲ್‌ ರೋಮಿಂಗ್‌ ಪ್ಲಾನ್‌ಗಳನ್ನು ಪರಿಚಯಿಸಿದೆ.

ಜಿಯೋದ ಈ ಹೊಸ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಡೇಟಾ, ಧ್ವನಿ ಮತ್ತು ಎಎಸ್​ಎಮ್​ಎಸ್ ಹಾಗೂ ಡೇಟಾ ಪ್ಯಾಕ್‌ಗಳು ಮಾತ್ರ ಎಂಬ ಎರಡು ಯೋಜನೆ ಇದೆ. ಗ್ರಾಹಕರು ಯಾವುದೇ ಮಾರ್ಗದಿಂದ ಪ್ರಯಾಣಿಸುತ್ತಿದ್ದರೂ ಅವರ ತಡೆರಹಿತ ಸಂಪರ್ಕ ಖಚಿತಪಡಿಸಿಕೊಳ್ಳಲು ಕತಾರ್, ಯುಎಇ ಮತ್ತು ಸೌದಿ ಅರೇಬಿಯಾ ಮೂರು ದೇಶಗಳಲ್ಲಿ ಈ ಯೋಜನೆಗಳು ಲಭ್ಯವಿದೆ ಎಂದು ಜಿಯೋ ಹೇಳಿಕೊಂಡಿದೆ.

ಅಂತರರಾಷ್ಟ್ರೀಯ ರೋಮಿಂಗ್ ಪ್ಲಾನ್‌ಗಳು jio.com ನಲ್ಲಿ ಅಥವಾ ಕಂಪನಿಯ ಮೈಜಿಯೋ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದ್ದು,ಈ ಯೋಜನೆಗಳು ಬಳಕೆದಾರರಿಗೆ ಕತಾರ್, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಬಲವಾದ ಸಂಪರ್ಕವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ.

ಭಾರತದಲ್ಲಿ ಸ್ಪೋರ್ಟ್ಸ್18 ಮತ್ತು ಜಿಯೋ ಸಿನಿಮಾದಲ್ಲಿ ಫಿಫಾ ವಿಶ್ವಕಪ್ ಕತಾರ್ 2022 ಪಂದ್ಯಗಳು ನೇರಪ್ರಸಾರ ಕಾಣುವ ವೇಳೆ ಫುಟ್ಬಾಲ್ ಪ್ರಿಯರು ಈ ದಿಗ್ಗಜರ ವಿಶ್ಲೇಷಣೆಗಳನ್ನು ನೋಡಬಹುದಾಗಿದೆ. ಜಿಯೋ ಸಿನಿಮಾ ಈಗ ಜಿಯೋ, ವಿ, ಏರ್‌ಟೆಲ್‌ ಮತ್ತು ಬಿಎಸ್‌ಎನ್‌ಎಲ್ ಸಬ್‌ಸ್ಕ್ರೈಬ್‌ ಆದವರಿಗೆ ಫಿಫಾ ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಲೈವ್-ಸ್ಟ್ರೀಮ್ ಮೂಲಕ ಲಭ್ಯವಿದ್ದು, ಐದು ಭಾಷೆಗಳಾದ ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿಯಲ್ಲಿ ವಿಶ್ಲೇಷಣೆ ಮತ್ತು ವೀಕ್ಷಕ ವಿವರಣೆಗಳನ್ನು ಒದಗಿಸಲಿದೆ.

ಜಿಯೋ ಟೆಲಿಕಾಂನ ಹೊಸ 1,122ರೂ. IR ರೋಮಿಂಗ್ ಪ್ಲಾನ್‌ ಐದು ದಿನಗಳ ಮಾನ್ಯತೆಯನ್ನು ಪಡೆದಿದ್ದು, 1GB ಡೇಟಾವನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ನೀವು ಒಮ್ಮೆ ಎಲ್ಲಾ ಡೇಟಾವನ್ನು ಬಳಸಿದ ನಂತರ PayGo ದರಗಳು ಅನ್ವಯವಾಗಲಿವೆ. ಅದೆ ರೀತಿ, 1,599ರೂ. IR ರೋಮಿಂಗ್ ಪ್ಲಾನ್‌ 15 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದರಲ್ಲಿ ಲೋಕಲ್‌ ಕಾಲ್‌, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 150 ನಿಮಿಷಗಳ ವಾಯ್ಸ್‌ ಕಾಲ್‌ಗಳನ್ನು ನೀಡುತ್ತದೆ. ಇದರಲ್ಲಿಯು ಕೂಡ 1GB ಡೇಟಾ ಮತ್ತು 100 SMS ಗಳನ್ನು ಪಡೆಯಬಹುದು. ಇದರಲ್ಲಿ ವೈಫೈ ಕರೆಗಳ ಮೂಲಕ ಒಳಬರುವ ಕರೆಗಳಿಗೆ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಜಿಯೋ ದ 5,122ರೂ. IR ರೋಮಿಂಗ್ ಪ್ಲಾನ್​ನಲ್ಲಿ ಜಿಯೋ ಬಳಕೆದಾರರು , 5GB ಡೇಟಾ ಪ್ರಯೋಜನ ಪಡೆಯಬಹುದಾಗಿದ್ದು, ಇದು 21 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಎಲ್ಲಾ ಡೇಟಾವನ್ನು ಬಳಸಿದ ನಂತರ ಪ್ರಮಾಣಿತ PayGo ರೇಟ್‌ಗಳು ಅನ್ವಯವಾಗುತ್ತವೆ. ಕೊನೆಯದಾಗಿ 6,799ರೂ. IR ರೋಮಿಂಗ್ ಪ್ಲಾನ್‌ 500 ನಿಮಿಷಗಳ ವಾಯ್ಸ್‌, 100 SMS ಮತ್ತು 5GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ Wi-Fi ಕಾಲ್‌ಗಳ ಮೂಲಕ ಇನ್ಕಮಿಂಗ್ ಕರೆಗಳಿಗೆ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಜಿಯೋದ 3,999ರೂ. IR ರೋಮಿಂಗ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದು 250 ನಿಮಿಷಗಳ ಲೋಕಲ್‌ ವಾಯ್ಸ್‌ ಕಾಲ್‌ ಮತ್ತು ಹೆಚ್ಚುವರಿ 250 ನಿಮಿಷಗಳ ಇನ್‌ಕಮಿಂಗ್‌ ಕಾಲ್‌ಗಳು, ಭಾರತಕ್ಕೆ ರಿಟರ್ನ್‌ ಕಾಲ್‌ಗಳ ಪ್ರಯೋಜನ ಪಡೆದುಕೊಳ್ಳಬಹುದು. ಇದು 3GB ಡೇಟಾ ಮತ್ತು 100 SMS ಗಳನ್ನು ಪಡೆಯಬಹುದಾಗಿದ್ದು, ಇದರಲ್ಲಿ ವೈಫೈ ಕಾಲ್‌ಗಳ ಮೂಲಕ ಇನ್‌ಕಮಿಂಗ್‌ ಕಾಲ್‌ಗಳ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

Leave A Reply

Your email address will not be published.