ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಆಫ್ತಾಬ್ ಗೆ ನಾರ್ಕೋ ( ಮಂಪರು) ಪರೀಕ್ಷೆಗೆ ಕೋರ್ಟ್‌ ಅನುಮತಿ

ದೆಹಲಿಯ ಶ್ರದ್ಧಾ ವಾಕರ್ ಕೊಲೆ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದು ನೂರು ಪ್ರತಿಶತಃ ನಿಜ. ಪ್ರೀತಿಸಿ ಮೋಹಿಸಿ ಮದುವೆಯಾಗು ಎಂದಾಗ ನಡೆದಿರುವ ಈ ಕೊಲೆ ಪ್ರಕರಣ ಅದರಲ್ಲೂ ತಾನು ಪ್ರೀತಿಸಿದವಳ ದೇಹವನ್ನು ಕರುಣೆ ಇಲ್ಲದೆ 35 ಭಾಗ ಮಾಡಿ ಎಲ್ಲೆಂದರಲ್ಲಿ ಬಿಸಾಡಿದ ಘಟನೆ ನಿಜಕ್ಕೂ ಯಾರೇ ಕ್ಷಮಿಸುವಂಥದ್ದಲ್ಲ. ನಂತರದ ಘಟನೆಯಲ್ಲಿ ಈ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ನನ್ನು ಪೊಲೀಸರು ಸೆರೆ ಹಿಡಿದು ತನಿಖೆ ಮುಂದುವರಿಸುತ್ತಿದ್ದಾರೆ.

ಈಗಿನ ಮಾಹಿತಿ ಪ್ರಕಾರ, ಶ್ರದ್ಧಾ ವಾಕರ್ (Shraddha Walkar) ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಗೆ ಕೋರ್ಟ್ 5 ದಿನ ಪೊಲೀಸ್ ಕಸ್ಟಡಿ ವಿಧಿಸಿದೆ. ಬಂಧಿತ ಪ್ರಿಯಕರ ಅಫ್ಲಾಬ್‌ಗೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ನವದೆಹಲಿಯ ಸಾಕೇತ್ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಿದೆ.

ಶ್ರದ್ಧಾ ವಾಕರ್ ಪ್ರಿಯಕರ ಅಫ್ತಾಬ್‌ನನ್ನು ಪೊಲೀಸರು ವರ್ಚುವಲ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿದ್ದು, ವಿಚಾರಣೆ ವೇಳೆ ಅಫ್ತಾಬ್ ಕೊಲೆ ಬಗ್ಗೆ ಒಂದೊಂದೇ ಮಾಹಿತಿ ಹೊರ ಹಾಕುತ್ತಿದ್ದಾನೆ. ಹಾಗಾಗಿ ರಹಸ್ಯ ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಇನ್ನಷ್ಟು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಅದರಂತೆ ಸಾಕೇತ್ ಕೋರ್ಟ್, ಅಫ್ಲಾಬ್‌ಗೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ ತನ್ನೊಂದಿಗೆ ವಾಸವಾಗಿದ್ದ ಲಿವ್-ಇನ್ ಪಾರ್ಟನರ್ ಶ್ರದ್ಧಾ ವಾಕರ್ ಎಂಬ 26 ವರ್ಷದ ಯುವತಿಯನ್ನು ಅಫ್ತಾಬ್ ಎಂಬ ಯುವಕ ಕತ್ತು ಹಿಸುಕಿ ಕೊಂದು, ನಂತರ ಆಕೆಯ ದೇಹವನ್ನು 35 ಭಾಗಗಳಾಗಿ ತುಂಡು ಮಾಡಿ, ದೆಹಲಿ ಹಾಗೂ ಸುತ್ತಮುತ್ತ ಬಿಸಾಡಿದ್ದ. ಅಫ್ತಾಬ್ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡ ಬಳಿಕ ಪೊಲೀಸರು ಶ್ರದ್ಧಾ ಶವದ (Shraddha Murder) 35 ಭಾಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈಗಾಗಲೇ ಆಕೆಯ ದೇಹದ 13 ಭಾಗಗಳು ಪತ್ತೆಯಾಗಿವೆ. ಈ ಕೃತ್ಯ 6 ತಿಂಗಳ ಹಿಂದೆ ಅಂದರೆ ಕಳೆದ ಮೇನಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Leave A Reply

Your email address will not be published.