ದೇವರ ಫೋಟೋ, ದೇವಾಲಯ ಆಕಾರದ ಕೇಕ್ ಕತ್ತರಿಸಿ ಕೈ ನಾಯಕನ ಭರ್ಜರಿ ಬರ್ತ್ ಡೇ ಸೆಲೆಬ್ರೇಶನ್!

ಗುರುವಾರ ಕಮಲ್‍ನಾಥ್ ಅವರು 76ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆ ಕಮಲ್‍ನಾಥ್ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರ ಛಿಂದ್ವಾರಾ ಜಿಲ್ಲೆಯಲ್ಲಿರುವ ಅವರ ನಿವಾಸದಲ್ಲಿ ಹುಟ್ಟುಹಬ್ಬವನ್ನು ಮುಂಚಿತವಾಗಿಯೇ ಆಚರಿಸಿದ್ದಾರೆ.

ಈ ನಡುವೆ ಕೇಸರಿ ಧ್ವಜ ಮತ್ತು ಹನುಮಂತನ ಫೋಟೋವಿರುವ ನಾಲ್ಕು ಸ್ಟೆಪ್ಸ್‍ನ ದೇವಾಲಯದ ಆಕಾರವಿರುವ ಕೇಕ್ ಅನ್ನು ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‍ನಾಥ್ ಅವರು, ಕತ್ತರಿಸುವ ಮೂಲಕ ಹೊಸ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಧಾರ್ಮಿಕ ಚಿಹ್ನೆಗಳಿರುವ ಕೇಕ್ ಕತ್ತರಿಸುವ ಮೂಲಕ ಕಮಲ್ ನಾಥ್ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.

ಇದರ ಜೊತೆಗೆ ಕಮಲ್‍ನಾಥ್ ಮತ್ತು ಅವರ ಪಕ್ಷದವರು ದೇವರ ಮೇಲೆ ಯಾವುದೇ ಭಕ್ತಿಯನ್ನು ಹೊಂದಿಲ್ಲ ಜೊತೆಗೆ ಅವರೆಲ್ಲಾ ಕಪಟ ಭಕ್ತರಾಗಿದ್ದು, ರಾಮ ಮಂದಿರ ನಿರ್ಮಿಸುವಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಆದರೆ ಈ ವಿಚಾರವಾಗಿ, ಚುನಾವಣೆ ಸಮಯದಲ್ಲಿ ತೊಂದರೆಯಾಗಬಹುದು ಎಂಬ ಭಯದಿಂದ, ಇದೀಗ ಹನುಮಂತನ ಭಕ್ತರಾಗಿ ಬದಲಾಗಿದ್ದಾರೆ ಎಂದು ಚೌಹಾಣ್ ಅವರು ಕಿಡಿ ಕಾರಿದ್ದಾರೆ.

ಯಾರಾದರೂ ಹುಟ್ಟುಹಬ್ಬಕ್ಕೆ ಹನುಮಂತನ ಫೋಟೋವಿರುವ ಕೇಕ್ ಅನ್ನು ತಯಾರಿಸುತ್ತಾರಾ? ಹನುಂತನ ಫೋಟೋವಿರುವ ಕೇಕ್ ಕತ್ತರಿಸುತ್ತಾರಾ? ಇದು ಸನಾತನ ಧರ್ಮ ಮತ್ತು ಇದರಿಂದ ಹನುಮಂತನ ಭಕ್ತರಿಗೆ ಅಪಮಾನವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಪ್ರಶ್ನಿಸಿದ್ದಾರೆ.

Leave A Reply

Your email address will not be published.