ಹಿತ್ತಲಲ್ಲೇ ಸಿಗುವ ಸೀಬೆಕಾಯಿ ಎಲೆಯ ಜ್ಯೂಸ್ ಕುಡಿಯಿರಿ ಈ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ

“ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ”. ಹಾಗಾಗಿ, ನೀವೂ ಹೇಗೆ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ. ಒಬ್ಬನು ತನ್ನ ಆರೋಗ್ಯವನ್ನು ಕಳೆದುಕೊಂಡರೆ, ಅವನು ಜೀವನದ ಎಲ್ಲಾ ಆಕರ್ಷಣೆಯನ್ನು ಕಳೆದುಕೊಳ್ಳುತ್ತಾನೆ. ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ.

ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಅದರಂತೆ ನಾವು ಸೀಬೆಕಾಯಿ ಎಲೆಯ ಉಪಯೋಗದ ಕುರಿತು ನಿಮಗೆ ತಿಳಿಸುತ್ತೇವೆ. ಸೀಬೆ ಹಣ್ಣಿನಿಂದ ಹಲವು ಆರೋಗ್ಯಕರ ಪ್ರಯೋಜನವಿದೆ. ಅದರಂತೆ ಸೀಬೆ ಗಿಡದ ಎಲೆಯಿಂದಲೂ ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಸೀಬೆ ಗಿಡದ ಎಲೆಗಳಲ್ಲಿ ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ಪೋಷಕಾಂಶ ಇರುವುದರಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ಅದರಲ್ಲೂ ಮುಖ್ಯವಾಗಿ ಡಯಾಬಿಟಿಸ್ ನಿಂದ ಮುಕ್ತಿ ಪಡೆಯಲು ಬಹಳ ಪ್ರಯೋಜನಕಾರಿ.

ಸೀಬೆ ಗಿಡದ ಎಲೆಯನ್ನು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮಧುಮೇಹ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಶೀತ ಮತ್ತು ಕೆಮ್ಮನ್ನು ಗುಣ ಪಡಿಸುವಂತಹ ಶಕ್ತಿ ಸೀಬೆಗಿಡದ ಎಲೆಗಿದೆ. ಇದನ್ನು ಪೇಸ್ಟ್‌ ಮಾಡಿಕೊಂಡು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.

ಹಾಗಿದ್ರೆ ಬನ್ನಿ ಸೀಬೆ ಗಿಡದ ಎಲೆಯಿಂದ ಹೇಗೆ ಜ್ಯೂಸ್‌ ತಯಾರಿ ಮಾಡೋದು ಅನ್ನೋದನ್ನ ನೋಡೋಣ.

ಬೇಕಾಗುವ ಸಾಮಗ್ರಿಗಳು:
ಸೀಬೆ ಗಿಡದ ಎಲೆ(ಪೇರಲೆ)
ನೆಲ್ಲಿಕಾಯಿ
ಜೇನುತುಪ್ಪ
ಏಲಕ್ಕಿ ಪುಡಿ

ಮಾಡುವ ವಿಧಾನ:
ಮಿಕ್ಸಿ ಜಾರಿನಲ್ಲಿ ನೆಲ್ಲಿಕಾಯಿ ಮತ್ತು ನಾಲ್ಕು ಸೀಬೆ ಹಣ್ಣಿನ ಏಸಳುಗಳನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಇದರಿಂದ ರಸವನ್ನು ಶೋಧಿಸಿಕೊಳ್ಳಬೇಕು. ಶೋಧಿಸಿದ ರಸಕ್ಕೆ ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Leave A Reply

Your email address will not be published.