ATM ನಿಂದ ಹರಿದ ನೋಟ್ ಬಂದರೆ ಏನು ಮಾಡೋದು? RBI ಹೇಳೋದೇನು ನೋಡಿ!

ಈಗಂತೂ ಎಲ್ಲಾ ವ್ಯವಹಾರಗಳು ಎಟಿಎಂ ಅಲ್ಲಿಯೇ ಆಗುತ್ತಿದೆ. ಎಟಿಎಂ ಎನ್ನುವುದು ದಿನ ನಿತ್ಯದ ವ್ಯವಹಾರಗಳಿಗೆ ಬೇಕೇ ಬೇಕು ಎನ್ನುವಷ್ಟು ಹತ್ತಿರವಾಗಿದೆ. ಎಮರ್ಜೆನ್ಸಿ ಸಂದರ್ಭದಲ್ಲಿ ಆಪತ್‌ಬಾಂಧವರಂತೆ ನಮಗೆ ಹಣದ ಸಹಾಯವನ್ನು ಯಾವುದೇ ಸಮಯದಲ್ಲಿ ನೀಡುವುದ ಎಟಿಂ. ಆದರೆ ಈ ಎಟಿಎಂಗಳಿಂದ ಹಣ ತೆಗೆಯುವಾಗ ಹರಿದ ನೋಟುಗಳು ಬಂದ್ರೆ ಗ್ರಾಹಕರಿಗೆ ಚಿಂತೆಯಾಗುವುದು ಸಾಮಾನ್ಯ. ಹರಿದ ನೋಟುಗಳು ಅಮಾನ್ಯವಾಗಿದ್ದು, ಅವುಗಳನ್ನ ಹೇಗೆ ಬದಲಾಯಿಸಿಕೊಳ್ಳುವುದು? ಎಂಬ ಚಿಂತೆ ಅವ್ರನ್ನ ಕಾಡುತ್ತೆ. ನೀವೆನಾದರೂ ಇಂತಹ ಪರಿಸ್ಥಿತಿಯನ್ನು ಅನುಭವಿಸಿದ್ರೆ ಟೆನ್ಷನ್ ಬೇಡಾ. ಇದೀಗಾ ಕೇಂದ್ರ ಬ್ಯಾಂಕ್ (RBI) ಈ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ಮಾರ್ಗಗಳನ್ನ ಸೂಚಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಟಿಎಂಗಳಿಂದ ಹರಿದ ಕರೆನ್ಸಿ ನೋಟುಗಳನ್ನ ಬದಲಾಯಿಸಲು ನಿಯಮಾವಳಿಗಳನ್ನ ಮಾಡಿದೆ. ನೋಟು ವಿನಿಮಯ ಪ್ರಕ್ರಿಯೆ ತುಂಬಾ ಸರಳವಾಗಿದೆ. ಈ ನಿಯಮದ ಪ್ರಕಾರ ಹರಿದ ನೋಟುಗಳು ಬ್ಯಾಂಕಿನ ಎಟಿಎಂನಿಂದ ಬಂದರೆ ಅದನ್ನ ಬದಲಾಯಿಸಿಕೊಳ್ಳಲು ಬ್ಯಾಂಕ್ ನಿರಾಕರಿಸುವುದಿಲ್ಲ. ಬ್ಯಾಂಕ್ ಗಳಲ್ಲಿ ಜಮಾ ಮಾಡಿ ಹೊಸ ನೋಟುಗಳನ್ನ ಪಡೆಯಬಹುದು. ಇದಕ್ಕೆ ನೀವು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಬ್ಯಾಂಕಿನ ಎಟಿಎಂನಿಂದ ಹರಿದ ನೋಟುಗಳು ಬರುತ್ತಿದ್ದರೆ, ಅದರ ಜವಾಬ್ದಾರಿ ಬ್ಯಾಂಕಿನ ಮೇಲಿರುತ್ತದೆ. ಅಂತಹ ನೋಟುಗಳನ್ನ ಬದಲಾಯಿಸುವ ಜವಾಬ್ದಾರಿ ಬ್ಯಾಂಕಿನದ್ದೇ ಆಗಿರುತ್ತದೆ. ಹಾಗಾಗಿ, ಎಟಿಎಂನಲ್ಲಿ ನೋಟುಗಳನ್ನ ಹಾಕುವಾಗ ಪರಿಶೀಲಿಸುವುದು ಬ್ಯಾಂಕಿನ ಕೆಲಸವಾಗಿದೆ. ನೋಟಿನ ಮೇಲೆ ಕ್ರಮಸಂಖ್ಯೆ, ಮಹಾತ್ಮಗಾಂಧಿ ವಾಟರ್ ಮಾರ್ಕ್ ಹಾಗೂ ರಾಜ್ಯಪಾಲರ ಸಹಿ ಕಾಣಿಸದೇ ಇದ್ದರೆ ಅದನ್ನ ನಕಲಿ ನೋಟು ಎಂದು ಗುರುತಿಸಿ ನೋಟು ವಿನಿಮಯ ಮಾಡಿಕೊಳ್ಳಬೇಕು.

RBI ನಿಯಮಾನುಸಾರ, ಒಬ್ಬ ವ್ಯಕ್ತಿ ಗರಿಷ್ಠ 20 ನೋಟುಗಳನ್ನ ಮಾತ್ರ ಬದಲಾಯಿಸಿಕೊಳ್ಳಬಹುದು. ಅವುಗಳ ಮೌಲ್ಯ 5,000 ರೂ. ಮೀರಬಾರದು. ನೋಟುಗಳನ್ನ ವಿನಿಮಯ ಮಾಡಿಕೊಳ್ಳಲು ವ್ಯಕ್ತಿಯು ಅರ್ಜಿಯನ್ನು ಬರೆದು, ಅದರಲ್ಲಿ ನೀವು ಎಟಿಎಂ ಹಿಂಪಡೆಯುವಿಕೆಯ ದಿನಾಂಕ, ಸಮಯ ಮತ್ತು ಒಟ್ಟು ವಿವರಗಳನ್ನು ನಮೂದಿಸಬೇಕು. ಅಲ್ಲದೇ, ಯಾವುದೇ ನೋಟು ಹರಿದಿದ್ದರೆ, ಎಟಿಎಂ ಸ್ಲಿಪ್ ಲಗತ್ತಿಸಬೇಕು.

RBI ಜುಲೈ 2016ರಲ್ಲಿಯೇ ಇಂತಹ ನೋಟುಗಳನ್ನ ಪರಿವರ್ತಿಸಲು ಸುತ್ತೋಲೆ ಹೊರಡಿಸಿದ್ದೂ, ಬ್ಯಾಂಕ್ ಗಳು ನೋಟುಗಳನ್ನ ಬದಲಾಯಿಸಿಕೊಳ್ಳಲು ನಿರಾಕರಿಸಿದರೆ, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರ್ಬಿಐ ಎಚ್ಚರಿಕೆ ನೀಡಿದೆ. ಅಂತಹ ಬ್ಯಾಂಕ್ಕೆ 10 ಸಾವಿರ ರೂಪಾಯಿಗಳವರೆಗೂ ದಂಡ ವಿಧಿಸುತ್ತಾರೆ.

Leave A Reply

Your email address will not be published.