Raj B Shetty : ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕಂಪ್ಲೀಟ್, ಶಾರ್ಟ್ ಮೂವೀನಾ ಅಂತ ಕನಫ್ಯೂಸ್ ಆದ ನೆಟ್ಟಿಗರು!

ಕನ್ನಡ ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಅಲ್ಲದೆ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು.

ಈಗಾಗಲೇ ಗರುಡ ಗಮನ ವೃಷಭ ವಾಹನ ಸಿನಿಮಾ ಮಾಡಿದ ನಂತರ ಈಗ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಈ ಸಿನಿಮಾದ ಶೂಟಿಂಗ್ ಸಿಂಗಲ್ ಶೆಡ್ಯೂಲ್​​ನಲ್ಲಿ ಮುಗಿಯಲಿದೆ ಎಂದು ಈ ಹಿಂದೆಯೇ ಚಿತ್ರತಂಡ ಹೇಳಿತ್ತು. ಅದರಂತೆಯೇ ಈಗ ಶೂಟಿಂಗ್ ಕೂಡಾ ಕಂಪ್ಲೀಟ್ ಆಗಿದೆ.

ಸಿರಿ ರವಿಕುಮಾರ್ ಹೀರೋಯಿನ್ ಆಗಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಇನ್ನು ಮೋಹಕತಾರೆ ರಮ್ಯಾ ಮೊದಲ ಬಾರಿ ಪ್ರೊಡ್ಯೂಸರ್ ಆಗಿ ಮೊದಲ ಸಿನಿಮಾ ಮಾಡಿದ್ದು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ನಟಿ ಸಿರಿ ರವಿಕುಮಾರ್ ಅವರು ಈ ಹಿಂದೆ ಸಕುಟುಂಬ ಸಮೇತ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಅವರು ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದ ಸಿರಿ ಅವರು ನಟಿ ಮಾತ್ರವಲ್ಲದೆ ಖ್ಯಾತ ಮಾಡೆಲ್ ಕೂಡಾ ಹೌದು. ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ನಟಿ 41 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿರಿ ಅವರು ಫೋಟೋಸ್ ಹಾಗೂ ವಿಡಿಯೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇನ್ನು ಮೋಹಕ ತಾರೆ ರಮ್ಯಾ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಎಂದು ಗಾಂಧಿನಗರದ ಸಿನಿ ಪ್ರೇಮಿಗಳು ಸಂಭ್ರಮಿಸಿದ್ರು .ರಮ್ಯಾ ಅವರ ಮೊದಲ ಪ್ರೊಡಕ್ಷನ್ ಸಿನಿಮಾ ಸಿದ್ಧವಾಗುತ್ತಿದ್ದು ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ಡಬಲ್ ಖುಷಿಯಾಗಿತ್ತು.

ಆದರೆ ಈ ಸಿನಿಮಾವನ್ನು ರಾಜ್​ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯದಶಮಿ ದಿನವೇ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಅಲ್ಲದೆ ನಟಿ ಇತ್ತೀಚೆಗಷ್ಟೇ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಅನೌನ್ಸ್ ಮಾಡಿದ್ದರು. ಈಗ ಅದರಲ್ಲಿಯೇ ಮೊದಲ ಸಿನಿಮಾ ಸೆಟ್ಟೇರಿದೆ. ಆದರೆ ನಂತರದ ದಿನಗಳಲ್ಲಿ ನಟಿ ರಮ್ಯಾ ಸಿನಿಮಾದಿಂದ ಹೊರ ಬರುತ್ತಿರುವುದಾಗಿ ಹೇಳಿ ತಂಡಕ್ಕೆ ಹೊಸ ನಟಿ ಸಿರಿ ರವಿಕುಮಾರ್ ಅವರನ್ನು ಸ್ವಾಗತ ಮಾಡಿದ್ದರು.

ಸದ್ಯ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು ಈಗ ಸಿನಿಮಾ ರಿಲೀಸ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಆದರೆ ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ ಎನ್ನುವುದನ್ನು ಇನ್ನೂ ದಿನಾಂಕ ರಿಲೀಸ್ ಮಾಡಿಲ್ಲ. ಪ್ರೇಕ್ಷಕರು ನಿರೀಕ್ಷೆಯಲ್ಲಿ ಈ ಸಿನಿಮಾ ಕ್ಕಾಗಿ ಕಾಯುತ್ತಿದ್ದಾರೆ.

Leave A Reply

Your email address will not be published.