ಈ ಯೋಜನೆಯಲ್ಲಿ ನಿಮಗೆ ಮಾಸಿಕ ರೂ.36,000 ದೊರೆಯುತ್ತೆ!

ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹೌದು ನಮ್ಮ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗಬಾರದಂತೆ ನೋಡಲು ನಾವು ಈಗಲೇ ಉಳಿತಾಯ ಮಾಡುವುದು ಉತ್ತಮ. ಅಧಿಕ ರಿಟರ್ನ್ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ನಿವೃತ್ತಿ ಜೀವನದಲ್ಲಿ ಸಹಾಯವಾಗಲಿದೆ. ಅದರಲ್ಲೂ ಮುಖ್ಯವಾಗಿ ನಮಗೆ ಪಿಂಚಣಿ ಯೋಜನೆ ಇದ್ದರೆ ಒಳಿತು. ಮಾಸಿಕವಾಗಿ ಮೊತ್ತ ಲಭ್ಯವಾಗುವುದರಿಂದಾಗಿ ನಾವು ನಮ್ಮ ಉಳಿತಾಯವನ್ನು ಮಿತವಾಗಿ ಬಳಕೆ ಮಾಡಿದಂತೆ ಆಗುತ್ತದೆ.

ಹೂಡಿಕೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಅದಕ್ಕಿಂತ ಹೆಚ್ಚು ರಿಟರ್ನ್ ಎಷ್ಟಿದೆ ಎಂಬ ಕಡೆ ಗಮನಹರಿಸುತ್ತೇವೆ. ರಿಸ್ಕ್ ಇರುವ ಮಾರುಕಟ್ಟಯಲ್ಲಿ ಹೂಡಿಕೆ ಮಾಡುವ ಅದೆಷ್ಟೋ ಹೂಡಿಕೆದಾರರು ಇದ್ದಾರೆ.

ಪ್ರಸ್ತುತ ಎಲ್‌ಐಸಿಯು ತನ್ನ ಎಲ್‌ಐಸಿ ಜೀವನ ಅಕ್ಷಯ ಪಾಲಿಸಿ ಯೋಜನೆಯಲ್ಲಿ ಮತ್ತೆ ಆರಂಭ ಮಾಡಿದೆ. ಈ ಯೋಜನೆಯಲ್ಲಿ ನೀವು ಒಂದು ಬಾರಿ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ನೀವು ಒಂದು ಬಾರಿ ಮಾಡಿದ ಹೂಡಿಕೆಯಿಂದ ಜೀವನ ಪೂರ್ತಿ ಹಲವಾರು ಪ್ರಯೋಜನವನ್ನು ಪಡೆಯಬಹುದು. ಜೀವನ ಅಕ್ಷಯ ಪಾಲಿಸಿ ವೈಯಕ್ತಿಕ, ಸಿಂಗಲ್ ಪ್ರೀಮಿಯಂ, ನಾನ್‌ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ವಾರ್ಷಿಕ ಯೋಜನೆ ಆಗಿದೆ.

ಮುಖ್ಯವಾಗಿ ಎಲ್‌ಐಸಿಯ ಈ ಒಂದು ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ವೃದ್ಧಾಪ್ಯದಲ್ಲಿ ಮಾಸಿಕ 36,000 ರೂ ಪಡೆಯಲು ಸಾಧ್ಯವಾಗುತ್ತದೆ

ಎಲ್‌ಐಸಿ ಜೀವನ ಅಕ್ಷಯ ಪಾಲಿಸಿ ಯೋಜನೆಯ ಸಂಕ್ಷಿಪ್ತ ವರದಿ ಪ್ರಕಾರ :
ಈ ಯೋಜನೆಯಲ್ಲಿ ನಿಮಗೆ ಮಾಸಿಕವಾಗಿ ಪಿಂಚಣಿ ಲಭ್ಯವಾಗಲಿದೆ. ನೀವು ಮಾಸಿಕವಾಗಿ ಪಿಂಚಣಿ ರೂಪದಲ್ಲಿ 36 ಸಾವಿರ ರೂಪಾಯಿ ಪಡೆಯಬೇಕಾದರೆ, ನೀವು ವಾರ್ಷಿಕ ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ. ನೀವು 45 ವರ್ಷದವರಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಅಧಿಕ ಮೊತ್ತವನ್ನು ಪ್ರೀಮಿಯಂ ರೂಪದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ನೀವು 70 ಲಕ್ಷದ ಹೂಡಿಕೆ ಆಯ್ಕೆ ಮಾಡಿಕೊಂಡು 71,26,000 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ನಿಮಗೆ ನಿವೃತ್ತಿಯಾದ ಬಳಿಕ ಮಾಸಿಕವಾಗಿ 36429 ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ವ್ಯಕ್ತಿಯು ಮೃತರಾದರೆ ಪಿಂಚಣಿ ಬರುವುದು ಸ್ಥಗಿತವಾಗಲಿದೆ.

ಅದಲ್ಲದೆ ಕಡಿಮೆ ಹೂಡಿಕೆಯ ಆಯ್ಕೆಯೂ ಇದೆ
ಅದುವೇ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಆಯ್ಕೆಯಾಗಿದೆ. ಅಧಿಕ ಹಣವಿದ್ದರೆ ಬೇರೆ ಆಯ್ಕೆಯನ್ನು ಕೂಡಾ ಮಾಡಬಹುದು. ನೀವು ಬರೀ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ ಒಂದು ಸಾವಿರ ರೂಪಾಯಿ ಪಿಂಚಣಿಯಂತೆ ವಾರ್ಷಿಕ 12 ಸಾವಿರ ಪಡೆಯಬಹುದು. ಮತ್ತು ಈ ಪಾಲಿಸಿಯಲ್ಲಿ ಗರಿಷ್ಠ ಹೂಡಿಕೆಗೆ ಮಿತಿಯನ್ನು ನಿಗಧಿಪಡಿಸಿಲ್ಲ.

ವಯಸ್ಸಿನ ಮಿತಿ :
ಎಲ್‌ಐಸಿಯ ಜೀವನ ಅಕ್ಷಯ ಪಾಲಿಸಿ ಯೋಜನೆಯಲ್ಲಿ 35 ವರ್ಷದಿಂದ 85 ವರ್ಷದವರಿಗೆ ಮಾತ್ರ ಲಭ್ಯವಾಗಲಿದೆ. ಇನ್ನು ವಿಶೇಷ ಚೇತನರು ಕೂಡಾ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಪಿಂಚಣಿಯನ್ನು ಪಡೆಯಲು ಸುಮಾರು 10 ಆಯ್ಕೆಗಳನ್ನು ಹೊಂದಿದ್ದೀರಿ.

ವಯಸ್ಸಿನ ಅನುಗುಣವಾಗಿ ಉದಾಹರಣೆ ಪ್ರಕಾರ :
ನೀವು 75 ವರ್ಷದವರು ಇದ್ದಾಗ ನೀವು 610800 ರೂಪಾಯಿ ಏಕಕಾಲದ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ. ಆಗ ಆರು ಲಕ್ಷ ರೂಪಾಯಿ ನಿಮ್ಮ ಹೂಡಿಕೆ ಎಂದು ಪರಿಗಣನೆಯಾಗುತ್ತದೆ. ಇದರಲ್ಲಿ ವಾರ್ಷಿಕವಾಗಿ ನೀವು 76,650 ರೂಪಾಯಿ ಪಿಂಚಣಿ ಪಡೆಯಬಹುದು. ಅರ್ಧವಾರ್ಷಿಕವಾಗಿ 37-35 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ತ್ರೈಮಾಸಿಕವಾಗಿ 18,225 ರೂಪಾಯಿ ಪಿಂಚಣಿ ಪಡೆಯಬಹುದು. ಪ್ರತಿ ತಿಂಗಳು 6,000 ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ವಾರ್ಷಿಕವಾಗಿ 12000 ರೂಪಾಯಿ ಪಿಂಚಣಿ ಪಡೆಯುವ ಆಯ್ಕೆ ಕೂಡಾ ಇದೆ.

ಈ ರೀತಿ ಜೀವನ ಅಕ್ಷಯ ಪಾಲಿಸಿ ಯೋಜನೆ ಮೂಲಕ ಅಧಿಕ ರಿಟರ್ನ್ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ನಿವೃತ್ತಿ ಜೀವನದಲ್ಲಿ ಸಹಾಯವಾಗಲಿದೆ.

Leave A Reply

Your email address will not be published.