ಶೃದ್ಧೆಯಿಂದ ನಾಯಿಯೊಂದು ದೇವಸ್ಥಾನದೊಳಗೆ ಗಂಟೆ ಬಾರಿಸುವ ದೃಶ್ಯ | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಇತ್ತೀಚೆಗೆ ಪ್ರಾಣಿಗಳು ಮನುಷ್ಯನ ಜೊತೆ ತುಂಬಾ ಒಡನಾಟದಿಂದ ಇರುತ್ತದೆ. ಅದರಲ್ಲೂ ನಾಯಿಗಳಂತೂ ಕೇಳಬೇಕಿಲ್ಲ. ಮನುಷ್ಯನಿಗೆ ತುಂಬಾ ಪ್ರೀತಿ ಪಾತ್ರವಾದದ್ದಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳೇ ಇವೆ. ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಾಯಿಯ ತುಂಟಾಟಗಳನ್ನು ಪೋಸ್ಟ್ ಮಾಡಿ ಎಲ್ಲರ ಜೊತೆ ಹಂಚಿಕೊಳ್ಳುವವರಿದ್ದಾರೆ. ಹಾಗೆಯೇ ಇಲ್ಲೊಂದು ನಾಯಿಯು ದೇವಸ್ಥಾನದೊಳಗೆ ಗಂಟೆ ಬಾರಿಸುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಇಂದಿನ ದಿನಗಳಲ್ಲಿ ಏನೇ ಘಟನೆಗಳು ನಡೆದರೂ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಅಪ್ಲೋಡ್ ಮಾಡುತ್ತಾರೆ. ಹಾಗೇ ಇದೀಗ ಆಶ್ಚರ್ಯಕರ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ದೇವಸ್ಥಾನದೊಳಗೆ ಗಂಟೆ ಬಾರಿಸುತ್ತಿರುವುದು ಕಂಡುಬಂದಿದೆ.


Ad Widget

ಇನ್ನೂ, ಈ ವೀಡಿಯೋವನ್ನು ಬ್ಯುಟೆಂಗೆಬೀಡೆನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ದೇವಸ್ಥಾನದ ಆವರಣದೊಳಗೆ ಜರ್ಮನ್ ಶೆಫರ್ಡ್ ನಾಯಿಯನ್ನು ನೋಡಬಹುದು. ಅದಕ್ಕೆ ಹಗ್ಗಗಳನ್ನು ಕಟ್ಟಲಾಗಿದೆ. ನಾಯಿಯು ತನ್ನ ಬಾಯಿಂದ ಹಗ್ಗವನ್ನು ಹಿಡಿದಿಟ್ಟುಕೊಳ್ಳುವುದನ್ನು ಮತ್ತು ಲಯದಲ್ಲಿ ಬಾಲವನ್ನು ಅಲ್ಲಾಡಿಸುತ್ತ ದೇವಸ್ಥಾನದ ಗಂಟೆಗಳನ್ನು ಬಾರಿಸುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಈ ವೀಡಿಯೋ ನೋಡಿದ ನೆಟ್ಟಿಗರು ನಾಯಿಯ ಸ್ಮಾರ್ಟ್ ನೆಸ್ ಗೆ ಫಿದಾ ಆಗಿದ್ದಾರೆ. ಹಾಗೇ ಈ ವೀಡಿಯೋ ಸುಮಾರು 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ವೀಕ್ಷಕರು ನಾಯಿಯನ್ನು ಮೆಚ್ಚಿ ಕಾಮೆಂಟ್ ಗಳ ಮಳೆ ಸುರಿಸುತ್ತಿದ್ದಾರೆ.

error: Content is protected !!
Scroll to Top
%d bloggers like this: