Snake video : ಹಾವಿನ ಚರ್ಮ ಈ ರೀತಿ ಬದಲಾಗುತ್ತದೆ | ಹಾವು ಪೊರೆಬಿಡುವ ಈ ವೀಡಿಯೊ ವೈರಲ್!

ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಮತ್ತು ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇದೆ . ಹೌದು ಈ ಒಂದು ವೀಡಿಯೋ ದಲ್ಲಿ ಹಾವು ತನ್ನ ಚರ್ಮ ಬದಲಾಯಿಸುವುದನ್ನು ನೀವು ಕಣ್ಣಾರೆ ನೋಡಬಹುದು.

https://www.instagram.com/reel/Cj6CegYDg3-/?utm_source=ig_web_copy_link

ಒಬ್ಬ ವ್ಯಕ್ತಿಯು ಹಾವಿನ ಚರ್ಮವನ್ನು ಹಿಡಿದಿರುವುದನ್ನು ಇಲ್ಲಿ ಕಾಣಬಹುದು. ನಿಧಾನವಾಗಿ ತನ್ನ ಕೈಯಿಂದ ಹಾವಿನ ಚರ್ಮವನ್ನು ಆ ವ್ಯಕ್ತಿ ಎಳೆಯುತ್ತಿರುವುದು ಕಂಡುಬರುತ್ತದೆ. ಅಂತಿಮವಾಗಿ ವ್ಯಕ್ತಿಯು ಹಾವಿನ ಚರ್ಮವನ್ನು ಅದರ ದೇಹದಿಂದ ಹೊದಿಕೆಯಂತೆ ಬೇರ್ಪಡಿಸುತ್ತಾನೆ. ಹಾವಿನ ಹೊಸ ಚರ್ಮವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಪೊರೆಯನ್ನು ತೆಗೆದ ನಂತರ, ಹಾವಿನ ಚರ್ಮವನ್ನು ಸ್ವಚ್ಛಗೊಳಿಸಲಾಗುತ್ತದೆ.

ಅಧ್ಯಯನದ ಪ್ರಕಾರ ಹಾವುಗಳು ವರ್ಷದಲ್ಲಿ 3-4 ಬಾರಿ ತಮ್ಮ ಚರ್ಮವನ್ನು ಬದಲಾಯಿಸುತ್ತವೆ. ಈ ಸಂಗತಿಗೆ ಸಂಬಂಧಿಸಿದ ವಿಡಿಯೋ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು . ಹಾವಿನೊಂದಿಗೆ ಈ ರೀತಿ ಮಾಡಲು, ಹಾವುಗಳನ್ನು ನಿಭಾಯಿಸುವಲ್ಲಿ ಧೈರ್ಯದ ಜೊತೆಗೆ ಅನುಭವವೂ ಬಹಳ ಮುಖ್ಯ. ಈ ದೃಶ್ಯ ನೋಡಲು ಮೈ ಜುಮ್ ಎನ್ನುವುದು ಖಂಡಿತ.

Leave A Reply

Your email address will not be published.