Maruti Suzuki : 1 ಲೀಟರ್ ಪೆಟ್ರೋಲ್ ಗೆ 40 ಕಿ.ಮೀ.ಮೈಲೇಜ್ ನೀಡುತ್ತೆ ಈ ಕಾರುಗಳು!

ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಈ ವಿಚಾರವನ್ನು ತಿಳಿದಿರಬೇಕು. ಮುಂಬರುವ ಅವಧಿಯಲ್ಲಿ ಮಾರುಕಟ್ಟೆಗೆ ನೂತನ ಕಾರುಗಳು ಎಂಟ್ರಿಯಾಗಲಿದ್ದು ಜೊತೆಗೆ ಹೊಸ ಕಾರುಗಳು ಸೂಪರ್ ಮೈಲೇಜ್​ನೊಂದಿಗೆ ರಸ್ತೆಗೆ ಇಳಿಯಲಿವೆ.

ಹಾಗಾದ್ರೆ, ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಾರುಗಳು ಯಾವುವು ಎಂದು ಯೋಚಿಸುತ್ತಿದ್ದೀರಾ?? ಇಲ್ಲಿದೆ ನೋಡಿ ಅದರ ಡೀಟೇಲ್ಸ್:

ಮಾರುತಿ ಸುಜುಕಿ ಕಂಪನಿಯು ಎರಡೂ ಮಾದರಿಗಳನ್ನು 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಜ್ಜುಗೊಳಿಸಲಿದೆ ಎಂದು ಅಂದಾಜಿಸಲಾಗಿದ್ದು, ಈ ಎಂಜಿನ್ ಗಳನ್ನು ಟೊಯೊಟಾ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದಿಂದ ತಯಾರಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಮಾರುತಿ ಸುಜುಕಿ ಹೆಚ್ಚಿನ ಮೈಲೇಜ್ ಕಾರುಗಳನ್ನು ತರುವ ವ್ಯವಹಾರದಲ್ಲಿ ತೊಡಗಿದೆ ಎನ್ನಲಾಗುತ್ತಿದೆ. ಮಾರುತಿ ಸುಜುಕಿ ಸ್ವಿಫ್ಟ್ ಪ್ರತಿ ಲೀಟರ್‌ಗೆ 22.56 ಕಿಮೀ ಮೈಲೇಜ್ ನೀಡಲಿದ್ದು, ಡಿಜೈರ್ ಮಾದರಿಯ ವಿಷಯಕ್ಕೆ ಬಂದರೆ, ಮೈಲೇಜ್ ಪ್ರತಿ ಲೀಟರ್‌ಗೆ 24.1 ಕಿಲೋಮೀಟರ್ ಆಗಿದೆ. ಇಷ್ಟಾದರೂ ಕೂಡ , ಮಾರುತಿ ಸುಜುಕಿ ಈ ಹೊಸ ಪ್ರಬಲ ಹೈಬ್ರಿಡ್ ಮಾದರಿಗಳ ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ ಎಂಬುದನ್ನು ಗಮನಿಸಬೇಕು.

ಇದರ ಜೊತೆಗೆ ಎಲ್ಲಾ-ಹೊಸ ವಿಟಾರಾ ಬ್ರೆಜ್ಜಾದ ಪ್ರಬಲ ಹೈಬ್ರಿಡ್ ರೂಪಾಂತರವು 27.97 kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಬಹುದಾಗಿದ್ದು, ಅಂದರೆ ಕಂಪನಿಯು ಅದೇ ತಂತ್ರಜ್ಞಾನದೊಂದಿಗೆ ಸ್ವಿಫ್ಟ್ ಮತ್ತು ಡಿಜೈರ್ ಮಾದರಿಗಳ ಹೊಸ ರೂಪಾಂತರಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದೆ. ಮಾರುತಿ ಸುಜುಕಿ ಕಾರುಗಳು ಹಲವು ಉತ್ತಮ ಮಾರಾಟದ ಮಾದರಿಗಳನ್ನು ಹೊಂದಿದ್ದು, ನಾವು ಟಾಪ್ 10 ಬೆಸ್ಟ್ ಸೆಲ್ಲಿಂಗ್ ಕಾರುಗಳ ಪಟ್ಟಿ ಮಾಡಲು ಹೊರಟರೆ, ಅವುಗಳಲ್ಲಿ 7 ಮಾರುತಿ ಸುಜುಕಿ ಕಾರುಗಳೆ ಇವೆ.

ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಕಾರು ಆಲ್ಟೊ ಅತಿ ಹೆಚ್ಚು ಮಾರಾಟವಾಗುವ ಕಾರ್ ಆಗಿ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ, ಎಸ್‌ಯುವಿಗಳು ಹೆಚ್ಚು ಗಮನ ಸೆಳೆಯುತ್ತಿವೆ.

ಮಹೀಂದ್ರಾ XUV700 ಮತ್ತು ಹೊಸ ಸ್ಕಾರ್ಪಿಯೊದಂತಹ ಮಾದರಿಗಳು ಪೂರ್ಣ ಬೇಡಿಕೆಯಲ್ಲಿವೆ. ವಿಟಾರಾ ಬ್ರೆಝಾ ಬುಕ್ಕಿಂಗ್‌ಗಳು ಕೂಡ ಒಂದೇ ಆಗಿವೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಮಾರುತಿ ಸುಜುಕಿ ಇತ್ತೀಚಿನ ದಿನಗಳಲ್ಲಿ ಮಧ್ಯಮ ಎಸ್‌ಯುವಿ ವಿಭಾಗದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.

1 Comment
  1. sklep online says

    Wow, amazing blog layout! How lengthy have you ever been blogging for?
    you made blogging look easy. The overall glance of your web site is fantastic, as neatly as the content material!

    You can see similar here sklep internetowy

Leave A Reply

Your email address will not be published.