Kantara : ಟಾಲಿವುಡ್ ನಿಂದ ಹೊಸ ನಿಯಮ ಜಾರಿಗೆ | ಇದು ಕಾಂತಾರ ಎಫೆಕ್ಟ್ !

ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಎಲ್ಲಾ ಕಡೆ ಭರ್ಜರಿ ಸದ್ದು ಮಾಡುತ್ತಿದೆ. ಎಲ್ಲಾ ಹೊರ ರಾಜ್ಯದಲ್ಲೂ ಕೂಡಾ ಕಾಂತಾರ ಸಿನಿಮಾ ನೋಡೋಕೆ ಜನ ಕುತೂಹಲ ಹೊಂದಿದ್ದಾರೆ ಎಂದೇ ಹೇಳಬಹುದು. ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸದ್ದು ಹೆಚ್ಚಾಗಿದೆ. ತೆಲುಗು ರಾಜ್ಯಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಬೇರೆ ಭಾಷೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ತೆಲುಗು ಸಿನಿಮಾಗಳಿಗೆ (Telugu Film) ಮೊದಲ ಆದ್ಯತೆ ಆಂಧ್ರಪ್ರದೇಶದಲ್ಲಿ ಸಿಗಬೇಕು ಎಂದು ಹೊಸ ಚರ್ಚೆಯೊಂದು ಒಂದು ಶುರುವಾಗಿದೆ.

ಹಾಗಾಗಿ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಈಗಾಗಲೇ ಪ್ರೆಸ್ ನೋಟ್ ಒಂದನ್ನು ಶೇರ್ ಮಾಡಿಕೊಂಡಿದೆ. ಆಂಧ್ರದಲ್ಲಿ ಸಂಕ್ರಾಂತಿ ಮತ್ತು ದಸರಾ, ದೀಪಾವಳಿಗೆ ಮುಖ್ಯವಾಗಿ ತೆಲುಗು ಸಿನಿಮಾಗಳಿಗೆ ಆದ್ಯತೆ ನೀಡಬೇಕು ಎನ್ನುವ ಮಾತು ಕೇಳಿಬಂದಿರುವುದರಿಂದ, ಆಂಧ್ರದಲ್ಲಿ ಸಂಕ್ರಾಂತಿ ಮತ್ತು ದೀಪಾವಳಿ ದೊಡ್ಡ ಹಬ್ಬ. ಆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ರಜೆಗಳು ಸಿಗುವುದರಿಂದ ಚಿತ್ರಮಂದಿರಕ್ಕೆ ಬರುತ್ತಾರೆ. ಅಷ್ಟು ಮಾತ್ರವಲ್ಲದೇ, ಹಬ್ಬಗಳ ಸಂದರ್ಭದಲ್ಲಿ ಸಿನಿಮಾಗಳನ್ನು ಹೆಚ್ಚಾಗಿ ಆಂಧ್ರದಲ್ಲಿ ಬಿಡುಗಡೆ ಮಾಡುತ್ತಾರೆ. ಇದೀಗ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

“ಐದು ವರ್ಷಗಳ ಹಿಂದೆಯೇ ಸಕ್ರಾಂತಿ, ದಸರಾ ಸಂದರ್ಭದಲ್ಲಿ ಆಂಧ್ರದಲ್ಲಿ ತೆಲುಗು ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೆಲುಗು ನಿರ್ಮಾಪಕರ ಸಂಘ ತೀರ್ಮಾನ ಕೈಗೊಂಡಿತ್ತು. ನಿರ್ಮಾಪಕ ದಿಲ್ ರಾಜು ಅವರು ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ಅವರ ಹೇಳಿಕೆ ಮುಂದಿಟ್ಟುಕೊಂಡು ಈ ಬಾರಿ ಸಂಕ್ರಾಂತಿಗೆ ಈ ನಿಯಮ ಜಾರಿಗೆ ತರಬೇಕು”ಎಂದು ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಪ್ರೆಸ್‌ನೋಟ್ ಬಿಡುಗಡೆಗೊಳಿಸಿದೆ.

ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ಕಾಂತಾರ ಸಿನಿಮಾದಿಂದಾಗಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಾಂತಾರ ಸಿನಿಮಾ ಹಲವು ತೆಲುಗು ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಹಾಗಾಗಿ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಈ ನಿಯಮ ಜಾರಿಗೆ ತಂದಿದೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.