ಕರ್ನಾಟಕದಲ್ಲಿ ಕೀಟವಾಗಿ ಪತ್ತೆಯಾದ ಹಿಟ್ಲರ್!!

ಪ್ರಪಂಚ ಅನ್ನೋದು ಅದೆಷ್ಟು ವಿಶಾಲವಾಗಿದೆಯೋ, ಅದರಂತೆ ನಾವು ಯಾವ ರೀತಿಲಿ ವೀಕ್ಷಿಸುತ್ತೇವೆ ಎಂಬುದು ಸುಂದರವಾದ ಪರಿಸರವನ್ನು ವರ್ಣಿಸುತ್ತದೆ. ಇಲ್ಲಿ ನಮ್ಮ ಕಣ್ಣು ತೃಪ್ತಿ ಪಡುವಂತಹ ಅದೆಷ್ಟೋ ಜೀವ ರಾಶಿಗಳೇ ಇವೆ. ಕೆಲವೊಂದು ಮಾಮೂಲಾಗಿದ್ದಾರೆ. ಇನ್ನೂ ಕೆಲವು ವಿಚಿತ್ರವಾಗಿರುತ್ತೆ. ಅದೆಷ್ಟೋ ಜನರು ನೋಡದೆ ಇರುವಂತಹ ಜೀವಿಗಳು ಕೂಡ ಇವೆ ಈ ಭೂಮಿ ಮೇಲೆ. ಅಂತಹ ವಿಶೇಷ ಅದೆಷ್ಟೋ ಜೀವ ರಾಶಿಗಳ ನಡುವೆ ಇಲ್ಲೊಂದು ಕಡೆ ವಿಭಿನ್ನವಾದ ಕೀಟ ಪತ್ತೆಯಾಗಿದೆ.

ಹೌದು. ಮಿಲಿಯನ್ ಗಟ್ಟಲೆ ಜನರಿಗೆ ಕಾಟ ಕೊಟ್ಟು ಹಿಂಸಿಸಿ ಸಾಯಿಸಿದ ಹಿಟ್ಲರ್ ಈಗ ಕೀಟವಾಗಿ ಪತ್ತೆಯಾಗಿದ್ದಾರೆ. ಅಂದಿನ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನನ್ನೇ ಹೋಲುವ ಕೀಟವೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಇಂತಹ ಹಿಟ್ಲರ್ ಪ್ರತಿರೂಪದ ಕೀಟದ ವಿಶೇಷತೆ ಏನು, ಎಲ್ಲಿ ಪತ್ತೆಯಾಯ್ತು ಅನ್ನೋದನ್ನ ಮುಂದೆ ಓದಿ.

ಈ ಕೀಟ ತುಂಬಾ ಸುಂದರವಾಗಿದ್ದು, ಎರಡು ಕಣ್ಣುಗಳಿಂದ ವರ್ಣಿಸಲೇ ಅಸಾಧ್ಯವಾಗಿದೆ. ಇದರ ಮೈ ಬಣ್ಣ ಹಳದಿಯಾಗಿದ್ದು, ಈ ಕೀಟವನ್ನು ವೈಜ್ಞಾನಿಕವಾಗಿ “ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್”ಎಂದು ಕರೆಯುತ್ತಾರೆ. ಇದು ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮಾನವ ಮುಖ ಹೋಲುವ ಅಪರೂಪದ ಕೀಟವಾಗಿದೆ. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಅಂತಾ ಕರೆಯುತ್ತಾರೆ. ಈ ವಿಶೇಷ ಕೀಟ ಪತ್ತೆಯಾಗಿದ್ದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ.

ಇಕ್ಸೋರಾ, ಗೋಡಂಬಿ ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆಥಿತೇಯ ಸಸ್ಯಗಳಾಗಿವೆ. ಆಥಿತೇಯ ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150ರಿಂದ 200 ಮೊಟ್ಟೆಗಳನ್ನಿಡುತ್ತದೆ. ಹಿಟ್ಲರ್ ಕೀಟವು 7 ರಿಂದ 9 ತಿಂಗಳ ಜೀವಿತಾ ಅವಧಿ ಹೊಂದಿದ್ದು ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ.

ಮಂಜುನಾಥ ಎಸ್. ನಾಯಕ, ಜೀವ ವೈವಿಧ್ಯ ಸಂಶೋಧಕರು, ಸಂಗಮೇಶ ಕಡಗದ, ಶರಣು ಗೌಡರ ಈ ಕೀಟವನ್ನು ಗುರುತಿಸಿದ್ದು, ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ ಭಾರತ, ಮಡಗಾಸ್ಕರ್, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಇಂಡೋನೇಷ್ಯಾ ಮಲೇಷ್ಯಾ, ಫಿಲಿಫೈನ್ಸ್, ಪಾಪುವಾ ನ್ಯೂ ಗಿನಿಯಾ , ಜಪಾನ್, ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಸಾಮಾನ್ಯವಾಗಿ ಹಂಚಿಕೆಯಾಗಿವೆ.

ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪುಗುಂಪಾಗಿ ( ಅಗ್ರಿಗೇಶನ್) ಆಥಿತೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣಾ ತಂತ್ರವು ಸಂತಾನೋತ್ಪತ್ತಿಗೆ ಕೂಡಾ ಸಹಾಯವಾಗಿದೆ. ಇವು ಆಥಿತೇಯ ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ.

Leave A Reply

Your email address will not be published.