ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವು ಕೆಲವರಿಗೆ ಇರುತ್ತದೆ. ಕೆಲವರು ಚಹಾ ಸೇವನೆಯು ಆರೊಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬುತ್ತಾರೆ. ಚಹಾ ಕುಡಿಯುವಾಗ ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ರುಚಿಯಾದ ಚಹಾವು ಹೊರಗಿನ ತಂಪು ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ ಹಾಗೂ ಮನಸ್ಸನ್ನು ಉಲ್ಲಾಸ ಮಾಡುತ್ತದೆ. ಆದ್ದರಿಂದ ಬೆಳಗಿನ ಅಥವಾ ಸಂಜೆಯ ಹೊತ್ತಿಗೆ ಈ ವಿವಿಧ ಬಗೆಯ ಚಹಾವನ್ನು ಸವಿಯಿರಿ.
ಮಸಾಲಾ ಚಹಾ:- ಚಳಿಗಾಲದಲ್ಲಿ ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಲವಂಗ, ಏಲಕ್ಕಿ, ದಾಲ್ಚಿನ್ನಿ ಮತ್ತು ಸ್ಟಾರ್ ಸೋಂಪುಗಳ ಮಿಶ್ರಣದೊಂದಿಗೆ ತಯಾರಿಸಲಾಗುವ ಈ ಚಹಾ ಶೀತ, ಕೆಮ್ಮುಗಳಿಗೂ ಉತ್ತಮ ಔಷಧಿಯಾಗಿದೆ.
ಶುಂಠಿ ಹಾಗೂ ಲಿಂಬೆ ಚಹಾ:- ಶುಂಠಿ ಹಾಗೂ ಲಿಂಬೆರಸದ ಜೊತೆಗೆ ಸಿಹಿಗಾಗಿ ಹಾಗೂ ರುಚಿಗಾಗಿ ಜೇನುತುಪ್ಪವನ್ನು ಬೇರಿಸಿದ ಈ ಚಹಾ ಚಳಿಗಾಲದಲ್ಲಿ ರುಚಿಯ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ.
ಶುಂಠಿ ಮತ್ತು ಮೂಲೇತಿ ಚಹಾ:- ಈ ಚಹಾಕ್ಕೆ ನೀವು ಹಾಲು ಕೂಡ ಸೇರಿಸಿದರೆ ಸ್ವಾದಿಷ್ಟವಾಗಿರುತ್ತದೆ. ಚಳಿಗಾಲದಲ್ಲಿ ಪೌಷ್ಟಿಕಾಂಶವನ್ನು ಒದಗಿಸಲು ಸಹಾಯಕವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಧಾ ಚಹಾ:- ಈ ಚಹಾವು ನಿಂಬೆ, ಅರಿಶಿನದ ಬೇರು ಮತ್ತು ಶುಂಠಿ ಜೊತೆಗೆ ಭಾರತೀಯ ಸಂಪೂರ್ಣ ಮಸಾಲೆಗಳ ಪರಿಮಳಗಳಿಂದ ತುಂಬಿದೆ. ಜೊತೆಗೆ ಜೇನುತುಪ್ಪವನ್ನು ಸೇರಿಸಿ ಸವಿದರೆ ಉತ್ತಮ ರುಚಿ ನೀಡುತ್ತದೆ.
ಕಾಶ್ಮೀರದ ಸಾಂಪ್ರದಾಯಿಕ ಚಹಾ:- ಈ ಪಾಕವಿಧಾನವು ಗುಲಾಬಿ ದಳಗಳು, ಮಸಾಲೆ ಪದಾರ್ಥಗಳು, ಬಾದಾಮಿ, ಪಿಸ್ತಾ ಮತ್ತು ಅಡಿಗೆ ಸೋಡಾವನ್ನು ಬಳಸಿ ತಯಾರಿಸಲಾಗುತ್ತದೆ.