BIGG BREAKING NEWS : ನಂದಿನಿ ಹಾಲು, ಮೊಸರಿನ ದರ ಲೀಟರ್ ಗೆ 3 ರೂ ಹೆಚ್ಚಳ ; ನಾಳೆಯಿಂದ ಪರಿಷ್ಕೃತ ದರ ಜಾರಿಗೆ

ಕೆಲ ತಿಂಗಳುಗಳ ಹಿಂದಷ್ಟೇ ಅಮೂಲ್ ಹಾಲಿನ ದರ ಏರಿಕೆಯ ಬಿಸಿ ತಟ್ಟಿದ ನಡುವೆ ತೈಲ ದರವು ಏರಿಕೆ ಕಂಡಿತ್ತು. ಇದೀಗ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ದಿನಂಪ್ರತಿ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡ ನಡುವೆ ಹಾಲಿನ ದರ ಏರಿಕೆ ಸಾಮಾನ್ಯ ಜನತೆಗೆ ದೊಡ್ದ ಹೊಡೆತ ನೀಡಲಿದೆ. ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ, ನಾಳೆಯಿಂದ ಹಾಲಿನ ಪರಿಷ್ಕ್ರತ ದರ ಜಾರಿಯಾಗಲಿದೆ.

ಟೋನ್ಡ್ ಹಾಲಿನ ದರ ಕೆಜಿಗೆ 37 ರಿಂದ 40 ರೂಗೆ ಹೆಚ್ಚಳವಾಗಲಿದ್ದು, ಸಮೃದ್ದಿ ಹಾಲಿನ ದರ ಕೆಜಿಗೆ 48 ರಿಂದ 51 ರೂ ಗೆ ಹೆಚ್ಚಳವಾಗಿದೆ. ಸ್ಪೆಷಲ್ ಹಾಲಿನ ದರ ಕೆಜಿಗೆ 43 ರಿಂದ 46 ರೂಗೆ ಹೆಚ್ಚಳ ಮಾಡಲಾಗಿದೆ ಹಾಗೂ ಮೊಸರಿನ ಬೆಲೆ ಕೆಜಿಗೆ 45 ರಿಂದ 48 ರೂ ಹೆಚ್ಚಳವಾಗಿದೆ. ಈ ಹಣವನ್ನು ನೇರವಾಗಿ ರೈತರಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.ನಂದಿನಿ 37 ರೂ,ದೊಡ್ಲ 44 ರೂ, ಜೆರ್ಸಿ 44 ರೂ, ಹೆರಿಟೇಜ್ 48 ರೂ, ತಿರುಮಲ 48 ರೂ, ಗೋವರ್ಧನ್ 46 ರೂ,ಆರೋಗ್ಯ 50 ರೂ. ಸದ್ಯ ಇರುವ ದರಗಳಾಗಿವೆ.

ಹೋಮೋಜಿನೈಸ್ಡ್ ಹಾಲು 38 ರೂ ರಿಂದ 41 ರೂಗೆ ಏರಿಕೆಯಾದರೆ, ಹೋಮೋಜಿನೈಸ್ಡ್ ಹಸುವಿನ ಹಾಲು 42 ರೂ ರಿಂದ 45 ರೂಗೆ ಏರಿಕೆ ಯಾಗಲಿದೆ. ಸ್ಪೆಷಲ್ ಹಾಲು 43 ರೂ ರಿಂದ 46 ರೂಗೆ ಏರಿಕೆ ಕಂಡರೆ ಶುಭಂ ಹಾಲು 43 ರೂ ರಿಂದ 46 ರೂಗೆ ಏರಿಕೆಯಾದರೆ ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ ರಿಂದ 47 ರೂಗೆ ಏರಿಕೆಯಾಗಿದೆ.

ಸಮೃದ್ಧಿ ಹಾಲು 48 ರೂ ರಿಂದ 51 ರೂಗೆ ಏರಿಕೆ, ಸಂತೃಪ್ತಿ ಹಾಲು 50 ರೂ ರಿಂದ 53 ರೂಗೆ ಏರಿಕೆ, ಡಬಲ್ ಟೋನ್ಡ್ ಹಾಲು 36 ರೂ ರಿಂದ 39 ರೂಗೆ ಏರಿಕೆ,ಮೊಸರು ಪ್ರತಿ ಕೆಜಿಗೆ 45 ರೂ ರಿಂದ 48 ರೂಗೆ ಏರಿಕೆಯಾಗಲಿವೆ.

ನಂದಿನಿ ಹಾಲಿನ ದರವನ್ನು ಶೀಘ್ರವೇ ಲೀಟರ್ ಗೆ 3 ರೂ. ಹೆಚ್ಚಳ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇತ್ತೀಚೆಗೆ ತಿಳಿಸಿದಂತೆಯೆ ದರ ಹೆಚ್ಚಳವಾಗಿದೆ. ನಂದಿನಿ ಹಾಲಿನ ದರ ಪರಿಷ್ಕರಣೆ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ ಎನ್ನಲಾಗುತ್ತಿದ್ದು, ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ ಗೆ ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯ ಎನ್ನಲಾಗುತ್ತಿದೆ.

Leave A Reply