ಉಡುಪಿಯ ಮಹಾಲಕ್ಷ್ಮಿ ಕಾರ್ಪೊರೇಟಿವ್ ಬ್ಯಾಂಕ್ ನಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ., ಪಿಯುಸಿ ಹಾಗೂ ಡಿಗ್ರಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಜೊತೆಗೆ ಚಹಾ ಕುಡಿಯುವ ಕಪ್ಪನ್ನು ನೀಡಿದ್ದಾರೆ. ಆದರೆ ಆ ಚಾ ಕಪ್ನಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಫೋಟೋವನ್ನು ಅಳವಡಿಸಿದ್ದಾರೆ. ಇದು ಸದ್ಭಕ್ತರಲ್ಲಿ ಬೇಸರವನ್ನು ತರಿಸಿದೆ.
ಚಹಾ ಕುಡಿಯುವಾಗ ಆ ಕಪ್ ನ ಭಾಗದಲ್ಲಿಯೇ ಚಹಾ ಸಿಪ್ ಮಾಡುವ ಬಾಯಿಯ ಎಂಜಲು ದೇವಿಯ ಫೋಟೋಗೆ ತಾಗುತ್ತದೆ. ಹಾಗಾಗಿ ಬ್ಯಾಂಕಿನ ಜಾಹೀರಾತಿನೊಂದಿಗೆ ದೇವರ ಫೋಟೋ ಅಳವಡಿಸಿರುವುದು ಸರಿಯಲ್ಲ. ಇದು ತಪ್ಪು, ದೇವಿಯ ಫೋಟೋವನ್ನು ಚಾ ಕಪ್ನಲ್ಲಿ ಅಳವಡಿಸಬಾರದಿತ್ತು. ಇದರಿಂದಾಗಿ ಸದ್ಭಕ್ತರಲ್ಲಿ ಸಂಕೋಚ ಮೂಡಿರುತ್ತದೆ, ಅವರಿಗೆ ಬೇಸರವಾಗಿರುತ್ತದೆ.
ಇನ್ನೂ, ಈ ಚಹಾ ಕಪ್ಪ್ ಉಪಯೋಗಕ್ಕೆ ಬಾರದಂತಾಗಿದೆ. ಏಕೆಂದರೆ, ತುಳುನಾಡಿನಲ್ಲಿ ಮೋಗವೀರ ಜನಾಂಗದ ಆರಾಧ್ಯ ದೇವತೆ ಶ್ರೀ ಉಚ್ಚಿಲ ಮಹಾಲಕ್ಷ್ಮಿ ಅಮ್ಮನವರ ಭಕ್ತರ ಸಂಖ್ಯೆ ಹೆಚ್ಚು ಇದೆ. ಚಹಾದ ಕಪ್ಪಿನಲ್ಲಿ ದೇವಿಯ ಫೋಟೋ ಅಳವಡಿಸಿರುವುದು ಸದ್ಭಕ್ತರಿಗೆ ನೋವನ್ನುಂಟು ಮಾಡುತ್ತದೆ ಎಂದು ಬ್ಯಾಂಕಿನ ಶೇರ್ ಹೋಲ್ಡರ್ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಫಲಾನುಭವಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.