BPL’ ಕಾರ್ಡ್ ಹೊಂದಿರುವ `SC-ST’ ಸಮುದಾಯದವರಿಗೆ ಮುಖ್ಯ ಮಾಹಿತಿ : ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಈ ದಾಖಲೆ ಸಲ್ಲಿಸಿ

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಮುಂದಾಗಿದೆ.

ಹೌದು!!. ಅಮೃತ ಜ್ಯೋತಿ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡತನ ರೇಖೆಗಿಂತ ಕೆಳಗೆ ಇರುವಂತಹ ಬಿಪಿಎಲ್ ಎಲ್ಲ ಕುಟುಂಬಕ್ಕೆ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

ಈ ಯೋಜನೆ ಬಳಸಿಕೊಳ್ಳಲು ಬಿಪಿಎಲ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ (ಆರ್ ಡಿ ಸಂಖ್ಯೆ ಸಹಿತ) ದಾಖಲೆ ನೀಡಬೇಕಾಗುತ್ತದೆ. 75 ಯೂನಿಟ್‍ಗಳವರೆಗೆ ಬಳಕೆಯ ವಿದ್ಯುತ್ ಶುಲ್ಕವನ್ನು ಡಿಬಿಟಿ ಮುಖಾಂತರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಗಳು ಕೆಲ ಮಾನದಂಡಗಳನ್ನು ಅನುಸರಿಸಬೇಕಾಗಿದೆ. ಮಾಸಿಕ ವಿದ್ಯುತ್ ಬಳಕೆ ಗರಿಷ್ಟ 250 ಯುನಿಟ್‍ಗಳನ್ನು ಮೀರಬಾರದು. ಮಾಪಕ ಅಳವಡಿಕೆ ಮತ್ತು ಮಾಪಕವನ್ನು ಕಡ್ಡಾಯವಾಗಿ ಗಮನಿಸಲಾಗುತ್ತದೆ. ಜೊತೆಗೆ ದಿನಾಂಕ 30-04-2022 ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡಿರಬೇಕಾಗುತ್ತದೆ.

ಈ ಯೋಜನೆಗೆ ಅರ್ಹರಾದ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ‘ಸುವಿಧಾ’ ಪೋರ್ಟಲ್ ಮೂಲಕ ಸೌಲಭ್ಯ ಪಡೆಯಬಹುದು. ಇಲ್ಲವೇ ಇದಕ್ಕೆ ಸಂಬಂಧಿಸಿದGoof ಮೆಸ್ಕಾಂ ಉಪವಿಭಾಗ/ಶಾಖಾ ಕಚೇರಿಗೆ ಭೇಟಿ ನೀಡಿ ಆನ್‍ಲೈನ್‍ನಲ್ಲಿ ನೋಂದಾಯಿಸಿ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಈ ಕುರಿತಾದ ಮಾಹಿತಿಯನ್ನು ವೀರೇಂದ್ರ ಹೆಚ್.ಆರ್ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ಕಾರ್ಯ ಮತ್ತು ಪಾಲನೆ ವಿಭಾಗ, ಮೆಸ್ಕಾಂ ಶಿವಮೊಗ್ಗ ದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

2 Comments
  1. sklep online says

    Wow, fantastic weblog format! How lengthy have you been blogging for?

    you make blogging look easy. The full glance of your web site is wonderful,
    let alone the content! You can see similar here sklep online

  2. hitman.agency says

    Hey there! Do you know if they make any plugins to
    assist with SEO? I’m trying to get my site to rank for some targeted keywords
    but I’m not seeing very good success. If you know of any please share.

    Many thanks! You can read similar article here: Backlinks List

Leave A Reply

Your email address will not be published.