Nokia X30 5G : ಬಾಡಿಗೆಗೆ ದೊರೆಯುತ್ತೆ ನೋಕಿಯಾ X30 5G ಸ್ಮಾರ್ಟ್ಫೋನ್ | ಕಂಡೀಷನ್ಸ್ ಅಪ್ಲೈ!!!

ಇಂದು ದಿನಕ್ಕೊಂದು ನವೀನ ಮಾದರಿಯ ವೈಶಿಷ್ಟ್ಯದ ಮೊಬೈಲ್ ಗಳು ಲಗ್ಗೆ ಇಡುತ್ತಿವೆ. ಆದರೆ, ಈ ಮೊದಲು ತನ್ನದೇ ಛಾಪು ಮೂಡಿಸಿ ಎಲ್ಲ ಜನರು ಬಳಸುತ್ತಿದ್ದ ಏಕೈಕ ಬ್ರಾಂಡ್ ಆಗಿದ್ದ ನೋಕಿಯಾ ಫೋನ್‌ ಮತ್ತೆ ತನ್ನ ಪಾರುಪತ್ಯ ಹಿಡಿಯಲು ಮುಂದಾಗಿದೆ.

ಸ್ಮಾರ್ಟ್‌ಫೋನ್‌ (Smartphone), ಐಫೋನ್‌ (Iphone) ಬರುವ ಮೊದಲು ಹವಾ ಮಾಡಿದ್ದ (Nokia Phone) ಈಗ ಮತ್ತೆ ತನ್ನ ಜನಪ್ರಿಯತೆಯ ಖಾತೆ ತೆರೆಯುತ್ತಿದೆ. ನೋಕಿಯಾ ಫೋನ್‌ ಬ್ರ್ಯಾಂಡ್‌ಗೆ (Brand) ಈಗಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ.ಇತ್ತೀಚೆಗಷ್ಟೇ ಜನರು ಕೌತುಕದಿಂದ ಎದುರು ನೋಡುತ್ತಿದ್ದ ನೋಕಿಯಾದ ಮೊಟ್ಟ ಮೊದಲ 5G ಸ್ಮಾರ್ಟ್‌ಫೋನ್ (5G Smartphone) ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನೋಕಿಯಾ ತನ್ನ ಮೊದಲ 5G ಸ್ಮಾರ್ಟ್‌ಫೋನ್ ನೋಕಿಯಾ ಜಿ60 5ಜಿ (Nokia G60 5G) ಸಾಧನವನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಹೀಗೆ ಹಂತಹಂತವಾಗಿ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಹಳೇ ವರಸೆ ತೋರಲು ಮುಂದಾಗಿದ್ದು, ಹಾಗಾಗಿ, ನೋಕಿಯಾ ಫೋನ್‌ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ನೋಕಿಯಾದ 5ಜಿ ಬೆಳವಣಿಗೆ ಮೊಬೈಲ್‌ ಜಗತ್ತಿನಲ್ಲಿ ಹೊಸ ಆವಿಷ್ಕಾರದ ಮುನ್ನುಡಿ ಬರೆಯಲು ಇದೀಗ ಹೊಸ ತಂತ್ರ ಬಳಸಲು ನೋಕಿಯಾ ಯೋಜನೆ ರೂಪಿಸಿದೆ. ಇನ್ನು ಮುಂದೆ ನೋಕಿಯಾದ ಸ್ಮಾರ್ಟ್‌ಫೋನ್‌ಅನ್ನು ಗ್ರಾಹಕರು ಬಾಡಿಗೆಗೂ ಪಡೆಯಬಹುದಾಗಿದೆ. ಹಾಗಿದ್ರೆ ಇದರ ಬಾಡಿಗೆ ಬೆಲೆ ಎಷ್ಟು, ಫೀಚರ್ಸ್‌ ಹೇಗೆ ಎಂಬ ಪ್ರಶ್ನೆಯ ಜೊತೆಗೆ ಕುತೂಹಲ ಮೂಡಿರಬಹುದು.

ನೋಕಿಯಾ ಬ್ರ್ಯಾಂಡ್‌ನಿಂದ ವಿಶೇಷ ಆಪರ್‌ ಇದಾಗಿದ್ದು, ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ:

ನೋಕಿಯಾ ಬ್ರ್ಯಾಂಡ್‌ ಮತ್ತೊಂದು ವಿಶೇಷ ಆಪರ್‌ ಅನ್ನು ಘೋಷಣೆ ಮಾಡಿದ್ದು, ಕಂಪನಿಯ ಪರಿಸರ ಸ್ನೇಹಿ ಸ್ಮಾರ್ಟ್‌ಫೋನ್, ನೋಕಿಯಾ X30 5G ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಮಾಸಿಕ ಬಾಡಿಗೆಗೆ ನೀಡಲು ತೀರ್ಮಾನ ಕೈಗೊಂಡಿದೆ. ಅರೆ ಬಾಡಿಗೆ ಬೆಲೆಗಾ?. ಎಂದು ನೀವು ಅಚ್ಚರಿಪಟ್ಟರು ಕೂಡ ಇದು ನಿಜ!!.

ಈ ಒಪ್ಪಂದದ ಅಡಿಯಲ್ಲಿ ಬಾಡಿಗೆಗೆ ಲಭ್ಯವಿರುವ ನೋಕಿಯಾ ಫೋನ್‌ನ (ನೋಕಿಯಾ X30 5G) ಆರಂಭಿಕ ಬೆಲೆ $520 (ಸುಮಾರು ಭಾರತದಲ್ಲಿ ₹42,300), ಆದರೆ ಗ್ರಾಹಕರು $ 25 (ಸುಮಾರು ₹ 2,033) ನೀಡಿ ಬಾಡಿಗೆಗೆ ತೆಗೆದುಕೊಳ್ಳಬಹುದಾಗಿದೆ. ಅಂದರೆ ಈ ಫೋನ್‌ ಅನ್ನು ನೀವು ಮಾಸಿಕ ಬಾಡಿಗೆಯನ್ನು ಪಾವತಿಸುವ ಮೂಲಕ ಸಹ ಬಳಸಬಹುದು.

ಕನಿಷ್ಠ ಮೂರು ತಿಂಗಳ ಕಾಲ ನೋಕಿಯಾದ ಬಾಡಿಗೆ ಸೇವೆಯನ್ನು ಬಳಸಬೇಕಾಗುತ್ತದೆ ಎಂದು ಕಂಪನಿಯ ವರದಿಗಳು ತಿಳಿಸಿದ್ದು, ಹೆಚ್ಚುವರಿಯಾಗಿ, ಕಂಪನಿಯು ತನ್ನ ಬಾಡಿಗೆ ಸೇವೆಯ ಮೂಲಕ ಕಳೆದುಹೋದ ಅಥವಾ ಮುರಿದ ಉಪಕರಣಗಳಿಗೆ ಬದಲಿ ವ್ಯವಸ್ಥೆಗಳನ್ನು ಒದಗಿಸುತ್ತದೆ. ಅಲ್ಲದೆ, ಶೀಘ್ರದಲ್ಲೇ, ಈ ಕಂಪನಿಯ ಫೋನ್ ಭಾರತದಲ್ಲಿಯೂ ಲಗ್ಗೆ ಇಡಲಿದೆ.

ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ

ನೋಕಿಯಾ X30 5G ಪ್ರೀಮಿಯಂ ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.43-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಒಳಗೊಂಡಿದೆ. 20:9 ಆಕಾರ ಅನುಪಾತದೊಂದಿಗೆ, ಈ ಪ್ರದರ್ಶನವು 90Hz ರಿಫ್ರೆಶ್ ದರವನ್ನು ನೀಡುತ್ತದೆ. ಡಿಸ್ಪ್ಲೇಯ ಗರಿಷ್ಠ ಹೊಳಪು 700 ನಿಟ್ಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ಈ ಸ್ಮಾರ್ಟ್ ಫೋನ್ ಪ್ರಸ್ತುತ ಗ್ರಾಹರಿಗೆ ನೀಲಿ ಬಣ್ಣದಲ್ಲಿ ಲಭ್ಯವಿದ್ದು, ಪರಿಸರ ಸ್ನೇಹಿ ಫೋನ್‌ ಅನ್ನು 100% ಮರುಬಳಕೆಯ ಅಲ್ಯೂಮಿನಿಯಂ ಮತ್ತು 65% ಮರುಬಳಕೆಯ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ.ಈ ಫೋನಿನ ಕ್ಯಾಮೆರಾ ನೋಡುವುದಾದರೆ, ಸ್ಮಾರ್ಟ್‌ಫೋನ್‌ನ ಹಿಂಭಾಗವು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್ ಸೆಟಪ್ ಅನ್ನು ಹೊಂದಿದೆ.

ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 16-ಮೆಗಾಪಿಕ್ಸೆಲ್ ಒಳಗೊಂಡಿದೆ. ನೋಕಿಯಾ X30 5G 256 GB ಆಂತರಿಕ ಸಂಗ್ರಹಣೆ ಮತ್ತು 8 GB RAM ಅನ್ನು ಹೊಂದಿದೆ. ಕಂಪನಿಯು ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್ ಅನ್ನು ಪ್ರೊಸೆಸರ್ ಆಗಿ ಸಂಯೋಜಿಸುತ್ತದೆ.ಈ ಫೋನಿನ ಹಿಂದೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಇದ್ದು, ಫೇಸ್‌ ಅನ್‌ಲಾಕ್‌ ಕೂಡ ಇದೆ.ಈ ಫೋನ್‌ 5G ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ. ಜೊತೆಗೆ 4G, 3G, 2Gಗೂ ಸಪೋರ್ಟ್‌ ಮಾಡುತ್ತದೆ. ಬ್ಯಾಟರಿ 4200 mAh ಇದ್ದು, 2 ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. 33W ವೇಗದ ಚಾರ್ಜಿಂಗ್ ಅನ್ನು (QC3.0, PD3.0, PPS) ಬೆಂಬಲಿಸುತ್ತದೆ.

ವಿಶೇಷ ವೈಶಿಷ್ಟ್ಯದ ಮೂಲಕ ಜನರ ಗಮನ ಸೆಳೆಯಲು ಮುಂದಾಗಿರುವ ನೋಕಿಯಾ X30 5G ಭಾರತಕ್ಕೆ ಲಗ್ಗೆ ಇಟ್ಟ ಬಳಿಕ ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದು ನೋಡಬೇಕಾಗಿದೆ.
Leave A Reply

Your email address will not be published.