ಕೋವಿಡ್ ಸೋಂಕು ಪದೇ ಪದೇ ಆಗುವುದರಿಂದ ಈ ಎಲ್ಲಾ ಸಂಭವಗಳು ಜಾಸ್ತಿ !

ಕೊರೋನ ಲಸಿಕೆ ಹಾಕಿದ್ದೇನೆ ಎಂದು ಸುಮ್ಮನಾಗಬೇಡಿ ಯಾಕೆಂದರೆ ಕೊರೋನ ಲಸಿಕೆ ಹಾಕಿದವರಿಗೆ ಕೊರೋನ ಬರಲ್ಲ ಎಂಬ ಭರವಸೆ ಹೊರತಾಗಿ ಅದು ನಿಮ್ಮನ್ನು ರೋಗದ ವಿರುದ್ಧ ರಕ್ಷಣೆ ನೀಡುತ್ತದೆ ಎಂಬುದಾಗಿದೆ.

ಮುಖ್ಯವಾಗಿ ಕೊರೋನಾ ಸೋಂಕು ಹರಡುತ್ತಿದ್ದ ವರ್ಷವನ್ನು ಯಾರು ಕೂಡಾ ಮರೆಯಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತಿದ್ದ ಕಣ್ಣಿಗೆ ಕಾಣದ ಮಹಾಮಾರಿಯಿಂದ ಜನರು ಸೋತು ಹೋಗಿದ್ದರು. ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ. ಕೆಲವರ ಭಯ ಇನ್ನೂ ಹೋಗಿಲ್ಲ. ಮರಣಗಳಿಗೆ ಬೆಲೆ ಇರದ ಆ ಕಾಲ ಮೈ ಜುಮ್ ಎನ್ನಿಸುತ್ತೆ.

ಅದಲ್ಲದೆ ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿತ್ತು. ಸೋಂಕು ಹರಡಿ ಅದೆಷ್ಟೋ ಮಂದಿ ಮೃತಪಟ್ಟರು, ಇನ್ನದೆಷ್ಟೋ ಮಂದಿ ಆಸ್ಪತ್ರೆಗಳಲ್ಲಿ ನರಳಾಡಿದರು. ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಗಿದ್ದರೂ ಜನರಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಹಾಗೆಯೇ ಇದೆ. ಅದೆಷ್ಟೋ ಮಂದಿ ದೀರ್ಘಾವಧಿಯ ಕೋವಿಡ್ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಈಗಲೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜಗತ್ತು ಈಗಾಗಲೇ ರೋಗ ರುಜಿನಗಳಿಂದ ಸೋತು ಹೋಗಿದೆ. ಈಗಾಗಲೇ ಕೊರೋನ ಪರಿಣಾಮವಾಗಿ ಜನರು ಹಲವಾರು ರೀತಿಯ ತೊಂದರೆ ಮತ್ತು ನಷ್ಟಗಳನ್ನು ಅನುಭವಿಸಿಚೇತರಿಕೆ ಕಾಣುತ್ತಿದ್ದಾರೆ.

ಆದರೆ ನೇಚರ್ ಮೆಡಿಸನ್ ಎಂಬ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಾರ ಕೊರೋನ ಸೋಂಕು ಮರುಕಳಿಸಿದರೆ, ಶ್ವಾಸಕೋಶ, ಹೃದಯ, ಮೆದುಳು, ರಕ್ತ, ಮಸ್ಕ್ಯುಲೋಸ್ಕೆಲಿಟಲ್ ಮತ್ತು ಜೀರ್ಣಾಂಗವ್ಯೂಹದ ವ್ಯವಸ್ಥೆಗಳ ಮೇಲೆ ಪರಿಣಾಮ ಉಂಟಾಗಲಿದ್ದು, ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಇದಷ್ಟೇ ಅಲ್ಲದೇ ಸೋಂಕು ಮರುಕಳಿಸಿದರೆ, ಅದರಿಂದ ಮಧುಮೇಹ, ಕಿಡ್ನಿ ಸಮಸ್ಯೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ ಎಂದಿದ್ದಾರೆ.

ಈಗಾಗಲೇ ಕೋವಿಡ್-19 ನ್ನು ಎದುರಿಸುತ್ತಿರುವ ಮಂದಿ ಹಾಗೂ ಕೋವಿಡ್-19 ಗೆ ಲಸಿಕೆ ಪಡೆದುಕೊಳ್ಳುತ್ತಿರುವವರು, ಕೋವಿಡ್-19 ಸೋಂಕು ತಗುಲಿ ನಂತರ ಲಸಿಕೆ ಪಡೆದವರ ಪೈಕಿ ಹಲವು ಮಂದಿಗೆ ತಮಗೇನು ಆಗುವುದಿಲ್ಲ ಎಂಬ ಭಾವನೆ ಇದ್ದು ಇಂಥವರನ್ನು ಸೂಪರ್ ಇಮ್ಯುನಿಟಿ ಹೊಂದಿರುವ ಮಂದಿ ಎಂದು ಜನರೂ ಭಾವಿಸಲು ಆರಂಭಿಸಿದ್ದಾರೆ ಎಂದು ಅಮೇರಿಕಾದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನ ಹಿರಿಯ ಅಧ್ಯಯನ ಲೇಖಕ ಜಿಯಾದ್ ಅಲ್-ಅಲಿ ತಿಳಿಸಿದ್ದಾರೆ.

ಇದರ ಜೊತೆಗೆ ಕೊರೋನಾ ಲಸಿಕೆ ಹಾಕಿದ ವ್ಯಕ್ತಿಗಳು ಮತ್ತೆ ಸೋಂಕನ್ನು ಪಡೆಯಲು ಸಾಧ್ಯವಿಲ್ಲ ಎಂಬ ನಂಬಿಕೆಗೆ ವಿರುದ್ಧವಾಗಿ, ಯುಕೆಯ ZOE COVID ಅಧ್ಯಯನವು ಕೊರೋನಾ ವೈರಸ್ ವಿರುದ್ಧ ಲಸಿಕೆ ಹಾಕಿದ ಜನರಲ್ಲಿ ಕಂಡುಬರುವ ಐದು ಸಾಮಾನ್ಯ ಲಕ್ಷಣಗಳನ್ನು ಸಹ ತಿಳಿಸಿದೆ.

ಒಟ್ಟಿನಲ್ಲಿ ಕೊರೋನ ಸೋಂಕಿನ ಬಿಸಿ ಜನರಲ್ಲಿ ಇನ್ನೂ ತಪ್ಪಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದಲ್ಲಿ ಗಮನ ಇರಿಸುವುದು ಉತ್ತಮ.

Leave A Reply

Your email address will not be published.