Asus Zenbook Fold OLED : ಅಚ್ಚರಿಯ ಬೆಳವಣಿಗೆ | ಫೋಲ್ಡೇಬಲ್ ಲ್ಯಾಪ್ ಟಾಪ್ ಬಿಡುಗಡೆ | ಜನರನ್ನು ಹುಬ್ಬೇರಿಸುವಂತೆ ಮಾಡಿದೆ ಈ ತಂತ್ರಜ್ಞಾನ!

ಸಾಮಾನ್ಯವಾಗಿ ಹಲವರಲ್ಲಿ ಕೆಲವರ ಜೊತೆ ಲ್ಯಾಪ್‌ಟಾಪ್‌ ಇದ್ದೆ ಇರುತ್ತದೆ. ಆದರೆ ಇದೀಗ ಆಸಸ್‌ ಕಂಪನಿಯಿಂದ ಹೊಸದಾದ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಬಿಡುಗಡೆಯಾಗುತ್ತಿದೆ. ಇದನ್ನು ಬಳಕೆದಾರರು ತಮಗೆ ಅನುಕೂಲವಾಗುವ ಹಾಗೆ ಫೋಲ್ಡ್‌ ಮಾಡಿ ಬಳಸಬಹುದಾಗಿದೆ. ಇನ್ನೂ, ಆಸಸ್‌ ಬಿಡುಗಡೆ ಮಾಡುತ್ತಿರುವ ಲ್ಯಾಪ್‌ಟಾಪ್‌ನ ಹೆಸರು ಆಸಸ್‌ ಝೆನ್‌ಬುಕ್‌ 17 ಫೋಲ್ಡ್‌ ಒಲ್‌ಇಡಿ ಆಗಿದೆ.

ಇನ್ನೂ, ಈ ತಂತ್ರಜ್ಞಾನ ಜನರನ್ನು ಅಚ್ಚರಿ ಪಡುವಂತೆ ಮಾಡಿದೆ. ಹಾಗೇ ಇದು ಮುಂಬರುವ ತಂತ್ರಜ್ಞಾನಗಳಿಗೆ ಮಾದರಿಯಾಗಲಿದೆ ಎಂದರೆ ತಪ್ಪಾಗಲಾರದು. ಈ ಆಸಸ್‌ ಕಂಪನಿಯು ಬಿಡುಗಡೆ ಮಾಡಿದ ಲ್ಯಾಪ್‌ಟಾಪ್‌ ಅನ್ನು ಖರೀದಿ ಮಾಡಿ, ಮೊದಲು ಅನ್‌ಬಾಕ್ಸಿಂಗ್‌ ಮಾಡಿದ ಕೂಡಲೇ ಇದರ ಬೆಲೆ ಹಾಗೂ ಇದರ ವೈಶಿಷ್ಟ್ಯತೆಗಳನ್ನು ತೋರಿಸಲಾಗುತ್ತದೆ. ಹಾಗಾದ್ರೆ ಇದರ ಬೆಲೆ ಎಷ್ಟಿರಬಹುದು? ಇದರ ಫೀಚರ್ಸ್ ಹೇಗಿದೆ? ಎಂದು ನೋಡೋಣ.

ಆಸಸ್‌ ಝೆನ್‌ಬುಕ್‌ 17 ಫೋಲ್ಡ್‌ ಒಲ್‌ಇಡಿ ಯನ್ನು ಹಲವಾರು ಬಾರಿ ಓಪನ್‌ ಮಾಡಿ ಮುಚ್ಚಬಹುದಾಗಿದೆ. ಡಿಸ್‌ಪ್ಲೇಯ ಸುತ್ತಲೂ ಸ್ವೈಪ್ ಮಾಡಿ ಮತ್ತು ಈ ಲ್ಯಾಪ್‌ಟಾಪ್‌ ಅನ್ನು ಟ್ಯಾಬ್‌ನಂತೆ ಕೂಡ ಬಳಸಬಹುದಾಗಿದೆ. ಯಾವುದಾದರೂ ಕೆಲಸಕಾರ್ಯಗಳಿಗೆ, ಸಮಾರಂಭಗಳಿಗೆ ಹೋಗುವಾಗ ಸಾಮಾನ್ಯ ಲ್ಯಾಪ್‌ಟಾಪ್‌ನಂತೆ 12.5 ಇಂಚಿನಂತೆ ಮಾಡಿ ಬಳಸಬಹುದು. 17-ಇಂಚಿನ ಟಚ್ ಡಿಸ್ಪ್ಲೇ ಯನ್ನು ಹೊಂದಿದೆ. ಅಷ್ಟೇ ಅಲ್ಲದೆ, ಇದು ತನ್ನ ಡಿಸ್‌ಪ್ಲೇಯ ಅರ್ಧದಷ್ಟು ಮಡಚಿಗೊಳ್ಳುತ್ತದೆ. ಹಾಗೂ ಇದು ನೀಡುವಂತಹ ಕೀಬೋರ್ಡ್‌ ಬ್ಲೂಟೂತ್‌ ಕನೆಕ್ಟೆಡ್‌ ಆಗಿರುತ್ತದೆ.

ಇನ್ನೂ ಈ ಝೆನ್‌ಬುಕ್ ಫೋಲ್ಡ್ ಒಂದು ಗುಣಮಟ್ಟದ ತಂತ್ರಜ್ಞಾನವಾಗಿದೆ. ‌ಈ ಫೋಲ್ಡೇಬಲ್ ಲ್ಯಾಪ್ ಟಾಪ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಇದು ಫಾಕ್ಸ್ ಲೆದರ್ ಕವರ್‌ನೊಂದಿಗೆ ಗ್ರಾಹಕರನ್ನು ಬಹುಬೇಗನೆ ಆಕರ್ಷಿಸುತ್ತದೆ. ಅದರ ವಿನ್ಯಾಸ ಮತ್ತು ಸೌಂದರ್ಯಕ್ಕೆ ಒಗ್ಗುವಂತೆ ಲ್ಯಾಪ್ ಟಾಪ್ ಅನ್ನು ಫೋಲ್ಡ್‌ ಮಾಡಿದಾಗ ಇದು ಪುಸ್ತಕದಂತೆ ಕಾಣುವ ಹಾಗೆ ವಿನ್ಯಾಸಗೊಳಿಸಿದ್ದಾರೆ.

ಈ ಲ್ಯಾಪ್‌ಟಾಪ್ 1.5 ಕೆಜಿಯನ್ನು ಹೊಂದಿದ್ದು, 14 ಇಂಚಿನ ಮ್ಯಾಕ್‌ಬುಕ್ ಪ್ರೊಗಿಂತ ಹಗುರವಾಗಿದೆ. ಆದರೆ ಕೀಬೋರ್ಡ್ ಅನ್ನು ಈ ಝೆನ್‌ಬುಕ್ ಫೋಲ್ಡ್‌ಗೆ ಇಟ್ಟಾಗ ಇದು ಸ್ವಲ್ಪ ಭಾರವಾಗುತ್ತದೆ. Asus ಕೇವಲ ಎರಡು Thunderbolt 4 USB-C ಯನ್ನು ಹೊಂದಿದೆ. ಹಾಗೂ 3.5mm ಆಡಿಯೊ ಕಾಂಬೊ ಜ್ಯಾಕ್ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ವೆಬ್‌ಕ್ಯಾಮ್ ಅನ್ನು ಸಹ ಇದರ ಜೊತೆಗೆ ಸೇರಿಸಲಾಗಿದೆ. ಇದು 12 ನೇ-ತಲೆಮಾರಿನ ಇಂಟೆಲ್ ಕೋರ್ i7-1250U ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇನ್ನೂ, ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳಬೇಕೆಂದರೆ, ಝೆನ್‌ಬುಕ್‌ ಫೋಲ್ಡ್‌ನಲ್ಲಿರುವ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 6 ರಿಂದ 7 ಗಂಟೆಗಳವರೆಗೆ ಬಳಕೆ ಮಾಡಬಹುದು. ಆಸಸ್‌ ಜೆನ್‌ಬುಕ್‌ 17 ಫೋಲ್ಡ್ OLED ಲ್ಯಾಪ್‌ಟಾಪ್‌ ಭಾರತದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 329,990 ರೂಪಾಯಿಗೆ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್‌ ಕಳೆದ ಕೆಲವು ವಾರಗಳಿಂದ 2,84,290ರೂ. ಬೆಲೆಗೆ ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇದರ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.

ಇದು ಈ ಬಾರಿ ಆಸಸ್‌ ಕಂಪನಿ ಪರಿಚಯಿಸುತ್ತಿರುವ ಹೊಸದಾದ ಫೋಲ್ಡೇಬಲ್ ಲ್ಯಾಪ್‌ಟಾಪ್‌ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಗ್ರಾಹಕರನ್ನು ಬೇಗನೆ ಆಕರ್ಷಿಸುವುದರಲ್ಲಿ ಸಂಶಯವೇ ಇಲ್ಲ. ಉತ್ತಮ ಫೀಚರ್ಸ್‌ ಕೂಡ ಇದ್ದು, ಒಳ್ಳೆಯ ಗುಣಮಟ್ಟದ ಲ್ಯಾಪ್‌ಟಾಪ್‌ ಆಗಿದೆ. ಹಾಗೇ ಗ್ರಾಹಕರಿಗೆ ಬೇಕಾದ ಬೆಲೆಯಲ್ಲಿ ಲಭ್ಯವಿದೆ.

Leave A Reply

Your email address will not be published.