ಅಬ್ಬಾ | ಒಂದು ಪ್ಲೇಟ್ ಊಟಕ್ಕೆ ಬರೋಬ್ಬರಿ ರೂ.19,000/- | ಅಷ್ಟಕ್ಕೂ ಯಾಕಿಷ್ಟು ಬೆಲೆ?

ಒಂದು ಊಟಕ್ಕೆ 19,000ರೂ. ಅಂದ್ರೆ ಆಶ್ಚರ್ಯವೇ ಸರಿ. ಹೌದು, ಬ್ರಿಟನ್‌ನ ಹೋಟೆಲೊಂದರಲ್ಲಿ ಊಟಕ್ಕೆ ಇಷ್ಟೊಂದು ದುಬಾರಿ ಬೆಲೆಯಿದೆ.

ಬೆಕ್ಸಿಟ್‌ನಿಂದ ಬ್ರಿಟನ್ ಹೊರಬಂದ ನಂತರ ಹಣದುಬ್ಬರ ಏರಿಕೆಯಾಗಿದೆ. ಹಾಗೇ ಜೀವನದ ಖರ್ಚು ಕೂಡ ದುಪ್ಪಟ್ಟಾಗಿದೆ. ಇದಕ್ಕೆ ಸರಿಯಾಗಿ ಈ ಹಿಂದೆ ಬ್ರಿಟನ್‌ನ ಟಾಪ್ ರೆಸ್ಟೋರೆಂಟ್‌ಗಳಲ್ಲಿ ಒಂದು ಊಟಕ್ಕೆ 100 ಪೌಂಡ್(9,000 ರೂ.) ಪಡೆಯಲಾಗುತ್ತಿತ್ತು. ಆದರೆ ಈಗ ಆ ಒಂದು ಊಟದ ಬೆಲೆ ದುಪ್ಪಟ್ಟಾಗಿದೆ. ಒಂದು ಊಟಕ್ಕೆ 200 ಪೌಂಡ್ ಅಂದರೆ ಸುಮಾರು 19,000 ರೂ. ಆಗಿದೆ.

5 ವರ್ಷಗಳ ಹಿಂದೆ 100 ಪೌಂಡ್ ಇದ್ದ ಒಂದು ಊಟದ ಬೆಲೆ ಇದೀಗ 200 ಪೌಂಡ್‌ಗೆ ತಲುಪಿದೆ. ಹಲವಾರು ಉತ್ತಮವಾದ ರೆಸ್ಟೋರೆಂಟ್‌ಗಳಲ್ಲಿ ಈ ಬೆಲೆಯನ್ನೇ ನಿಗದಿಪಡಿಸಲಾಗಿದೆ.

ಬ್ರಿಟನ್‌ನ ಅತ್ಯಂತ ದುಬಾರಿ ಹೋಟೆಲ್ ಆದ ವೇಲ್ಸ್‌ ನ ಸೆರೆಡಿಜಿಯನ್‌ನಲ್ಲಿರುವ ಯನಿಶಿರ್ ಹಾಲ್ ರೆಸ್ಟೋರೆಂಟ್‌ನಲ್ಲಿ ಒಂದು ಊಟಕ್ಕೆ 410 ಪೌಂಡ್ ಅನ್ನು ನಿಗದಿ ಮಾಡಲಾಗಿದೆ ಎಂದು ಹಾರ್ಡೆನ್ಸ್ ಲಂಡನ್ ರೆಸ್ಟೋರೆಂಟ್ ಗೈಡ್‌ನ ಸಂಪಾದಕ ಪೀಟರ್ ಹಾರ್ಡೆನ್ ತಿಳಿಸಿದ್ದಾರೆ.

Leave A Reply

Your email address will not be published.