ಭಾರತದಲ್ಲಿ ಟ್ವಿಟ್ಟರ್ ಬ್ಲೂ ಸೇವೆ ಪ್ರಾರಂಭ | ಬೆಲೆ ಎಷ್ಟು ಗೊತ್ತೇ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಟ್ವಿಟರ್ ಖರೀದಿಸಿದ ಸುದ್ದಿ ಈಗಾಗಲೇ ತಿಳಿದಿರುವ ವಿಚಾರ. ಮತ್ತು ಮಸ್ಕ್ ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿ ಪ್ರಕಾರ ತಿಳಿಸಲಾಗಿತ್ತು .

ವಿಶ್ವದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ‘ಟ್ವಿಟ್ಟರ್ ಬ್ಲೂ’ ಶುಲ್ಕ ಚಂದಾದಾರಿಕೆಯು ಇದೀಗ ಭಾರತಕ್ಕೂ ಬಂದಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕಾ, ಬ್ರಿಟನ್ ಮತ್ತು ಕೆನಡಾದಲ್ಲಿ ಪರಿಚಯಿಸಲಾಗಿರುವ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯನ್ನು ಇದೀಗ ಭಾರತೀಯರು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

ಎಲಾನ್ ಮಸ್ಕ್ ಅವರ ಪ್ರಕಾರ ತಾನು ಖರೀದಿ ಮಾಡಿದ ಟ್ವಿಟ್ಟರ್ ನ ಮೊತ್ತದ ಖರೀದಿ ಸಾಮರ್ಥ್ಯದ ಅನುಗುಣವಾಗಿ ಆಯಾ ದೇಶದಲ್ಲಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯ ಬೆಲೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಈ ಮೊದಲು ತಿಳಿಸಿದ್ದರು.

ಪ್ರಸ್ತುತ ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯು ನವೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಮುಂದಿನ ಒಂದು ತಿಂಗಳಿನ ಒಂಗಾಗಿ ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ತರುವುದಾಗಿ ಟ್ವಿಟ್ಟರ್ ಸಂಸ್ಥೆಯ ಹೊಸ ಸಿಇಒ ಎಲಾನ್ ಮಸ್ಕ್ ಅವರು ಖಚಿತ ಪಡಿಸಿದ್ದಾರೆ.

ಎಲಾನ್ ಮಸ್ಕ್ ಅವರ ನಿರ್ಧಾರದಂತೆ ಪ್ರತಿ ತಿಂಗಳು 719 ರೂ. ಪಾವತಿಸುವ ಮೂಲಕ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ಪಡೆಯಬಹುದು ಎಂದು ತಿಳಿಸಲಾಗಿದೆ.

ನಮ್ಮ ದೇಶದಲ್ಲಿ ಗೌರವ್ ಅಗರ್ವಾಲ್ ಎಂಬುವವರು 719 ರೂ. ಹಣ ಪಾವತಿಸುವ ಮೂಲಕ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ಜೊತೆಗೆ ‘ಬ್ಲೂ ಟಿಕ್’ ಪಡೆದಿದ್ದಾರೆ. ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯಲ್ಲಿ ಟ್ವೀಟ್‌ಗಳನ್ನು ಎಡಿಟ್ ಮಾಡಬಹುದಾದಂತಹ ಪ್ರೀಮಿಯಂ ವೈಶಿಷ್ಟ್ಯಗಳು ಸಹ ಇವೆ ಎಂದು ಟ್ವೀಟ್ ಮಾಡುವ ಮೂಲಕ ಅವರು ತಿಳಿಸಿದ್ದಾರೆ.

ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಖರೀದಿಸಿದ ಗ್ರಾಹಕರು ‘ಬ್ಲೂ ಟಿಕ್’ ಚಿಹ್ನೆ ಮಾತ್ರವಲ್ಲದೇ, 42 ನಿಮಿಷಗಳವರೆಗೆ ದೊಡ್ಡ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆದ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ. ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರಲಿದೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್ ಚಂದಾದಾರಿಕೆಯ ಸಂಪೂರ್ಣ ವಿವರಗಳು : ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಯಾರು ಬೇಕಾದರೂ ಖರೀದಿಸಬಹುದು. ಸೆಲೆಬ್ರಿಟಿಗಳು, ಕಂಪನಿಗಳು ಮತ್ತು ರಾಜಕಾರಣಿಗಳಂತೆ ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವರು ಅವಕಾಶ ನೀಡಲಿದ್ದಾರೆ. ಹೀಗೆ ಟ್ವಿಟ್ಟರ್ ಬ್ಲೂ ಚಂದಾದಾರಿಕೆಗೆ ಗ್ರಾಹಕರಾದ ಪ್ರತಿಯೋರ್ವರಿಗೂ ‘ಬ್ಲೂ ಟಿಕ್’ ಚಿಹ್ನೆಯ ಜೊತೆಗೆ ಕೆಲವು ಪ್ರಿಮೀಯಂ ವೈಶಿಷ್ಟ್ಯಗಳು ಲಭ್ಯವಾಗುತ್ತದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ ಅದಲ್ಲದೆ ಇದನ್ನೇ ಎಲಾನ್ ಮಸ್ಕ್ ಅವರು ‘ಪವರ್ ಟು ಪೀಪಲ್’ ಎಂದು ಕರೆದಿದ್ದಾರೆ.

ಪ್ರಸ್ತುತ ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಆರಂಭವಾದ ನಂತರ ಪ್ರತಿಯೋರ್ವರೂ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆಯಲು ಹಣ ಪಾವತಿಸಬೇಕಾಗುತ್ತದೆ ಎಂದು ಟ್ವಿಟ್ಟರ್ ಖಚಿತಪಡಿಸಿದೆ. ನೀವು ಹೊಸದಾಗಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಪಡೆಯದಿದ್ದರೆ ಈಗಾಗಲೇ ಪರಿಶೀಲಿಸಲಾದ ಟ್ವಿಟ್ಟರ್ ‘ಬ್ಲೂ ಟಿಕ್’ ಚಿಹ್ನೆಯನ್ನು ಕಳೆದುಕೊಳ್ಳುತ್ತೀರಾ. ಆದರೆ, ಈಗಾಗಲೇ ಬ್ಲೂ ಟಿಕ್ ಚಿಹ್ನೆಯನ್ನು ಹೊಂದಿರುವ ಗ್ರಾಹಕರಿಗೆ 90 ದಿನಗಳ ಕಾಲ ವಿನಾಯಿತಿ ಇರಲಿದೆ.

ವಿಶೇಷವೆಂದರೆ ಟ್ವಿಟ್ಟರ್ ತರುವ ಎಲ್ಲಾ ಹೊಸ ಅಪ್‌ಡೇಟ್‌ಗಳು ಟ್ವಿಟ್ಟರ್ ಬ್ಲೂ ಗ್ರಾಹಕರಿಗೆ ಮೊದಲು ಲಭ್ಯವಿರುತ್ತವೆ ಎಂದು ತಿಳಿಸಲಾಗಿದೆ.

Leave A Reply

Your email address will not be published.