ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಕುರಿತು ನೀವರಿಯದ ವಿಷಯಗಳು ಇವು!

ನಾಡಕಟ್ಟಿರುವ ಕೆಂಪೇಗೌಡರ ಸುಮಾರು 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದಾರೆ. ಈ 108 ಅಡಿ ಎತ್ತರದ ಕಂಚಿನ ಪ್ರತಿಮೆ ‘ವಿಶ್ವ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ. ಹೀಗಾಗಿ ಈ ಕಂಚಿನ ಪ್ರತಿಮೆ “ಅಭಿವೃದ್ಧಿಯ ಪ್ರತಿಮೆ” ಎಂದು ಕರೆಯಲ್ಪಟ್ಟಿದೆ. ಇದನ್ನು ಬೆಂಗಳೂರಿನ ಬೆಳವಣಿಗೆಗೆ, ನಗರದ ಸಂಸ್ಥಾಪಕರಾದ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ನಿರ್ಮಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ಈ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ಪಾಂಜಿ ಸುತಾ‌ರ್ ವಿನ್ಯಾಸಗೊಳಿಸಿದ್ದಾರೆ. ಸುತಾರ್ ಅವರು ಗುಜರಾತ್‌ನಲ್ಲಿ ಏಕತೆಯ ಪ್ರತಿಮೆ ಮತ್ತು ಬೆಂಗಳೂರಿನ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ನಿರ್ಮಿಸಿ ಹೆಗ್ಗಳಿಕೆ ಪಾತ್ರರಾಗಿದ್ದಾರೆ.


Ad Widget

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537ರಲ್ಲಿ ಬೆಂಗಳೂರು ನಗರವನ್ನು ಕಟ್ಟಿದರು. ಈ ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವಾಗಿಸುವುದು ಕೆಂಪೇಗೌಡರ ಮಹದಾಸೆಯಾಗಿತ್ತು. ಹಾಗಾಗಿ ತಾವು ಕಟ್ಟಿದ ಈ ಕೋಟೆಯಲ್ಲಿ ಆಯಾ, ಕುಲ, ಕುಸಬುದಾರರಿಗೆ ಬೇಕಾಗುವಂತೆ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟುಗಳಿಗೆ ಅನುವು ಮಾಡಿಕೊಟ್ಟಿದ್ದರು.

Ad Widget

Ad Widget

Ad Widget

ಆ ದಿನದಿಂದ ಇಂದಿನವರೆಗೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಹೆಸರು ಮಾಡಿದೆ. ವಿಶ್ವದಾದ್ಯಂತ ಇರುವಂತಹ ಪ್ರಮುಖವಾದ ಐಟಿ-ಬಿಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿವೆ. ಕೋಟ್ಯಾಂತರ ಜನರು ತಮ್ಮ ಬದುಕನ್ನು ಈ ನಗರದಲ್ಲಿ ಕಟ್ಟುಕೊಂಡಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗವನ್ನು ನೀಡಿರುವ ನಗರವಾಗಿದೆ. ಇವರೆಲ್ಲರ ಬದುಕು ಹಸನಾಗಲು ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡರ ಸ್ಮರಣೆಗಾಗಿ 108 ಅಡಿ ಎತ್ತರದ ಪ್ರತಿಮೆ ತಲೆಯೆತ್ತಲಿದೆ.

ಇನ್ನೂ, ಈ ಕಂಚಿನ ಪ್ರತಿಮೆಯ ವಿಶೇಷತೆ ಏನೆಂದರೆ, ಇದರ ತೂಕ ಬರೋಬ್ಬರಿ 220 ಟನ್ ಇದ್ದು, ಅದರಲ್ಲಿ ಕಂಚು 98 ಕೆಜಿ, ಅಡಿಪಾಯಕ್ಕಾಗಿ ಬಳಸಲಾದ ಕಬ್ಬಿಣ 120 ಟನ್. ಮತ್ತು 18 ಅಡಿ ವಿಸ್ತಾರವಾದ ಕಟ್ಟೆಯನ್ನು ಪ್ರತಿಮೆಯ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನು ವರ್ಣಿಸುವ ನಾಲ್ಕು ಉಬ್ಬು ಶಿಲ್ಪಗಳ ರಚನೆ, ಕಂಚಿನಲ್ಲಿಯೇ ತಯಾರಾದ ಉಬ್ಬು ಶಿಲ್ಪಗಳನ್ನು ನಾಲ್ಕು ಕಡೆ ಅಂಟಿಸಲಾಗಿದೆ. ಕೆಂಪೇಗೌಡರ ಕೈಯಲ್ಲಿರುವ ಖಡ್ಗದ ತೂಕ 4ಟನ್ ಆಗಿದೆ. ಹಾಗೂ ಸುಮಾರು 18ತಿಂಗಳುಗಳ ಸಮಯದಲ್ಲಿ ಇದರ ನಿರ್ಮಾಣವಾಗಿದೆ.

ಅನಾವರಣಕ್ಕೆ ಪೂರ್ವಭಾವಿಯಾಗಿ ರಾಜ್ಯದಾದ್ಯಂತ 22,000ಕ್ಕೂ ಹೆಚ್ಚು ಸ್ಥಳಗಳಿಂದ ‘ಮೃತ್ತಿಕೆ’ (ಪವಿತ್ರ ಮಣ್ಣು) ಸಂಗ್ರಹಣೆಯಾಗಿದೆ ಹಾಗೇ ಪ್ರತಿಮೆಯ ಬಳಿ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್‌ ನಿರ್ಮಾಣವಾಗಿದೆ. ಈ ಥೀಮ್ ಪಾರ್ಕ್, ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಸುಮಾರು ₹84 ಕೋಟಿ ವೆಚ್ಚ ಭರಿಸಿದೆ.

error: Content is protected !!
Scroll to Top
%d bloggers like this: