Sania Mirza Shoib Malik : ಸ್ಟಾರ್ ದಂಪತಿಗಳ ಡಿವೋರ್ಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸ್ನೇಹಿತ!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik )ಅವರ 12 ವರ್ಷಗಳ ದಾಂಪತ್ಯ ಜೀವನ (Sania Mirza-Shoaib Malik )ಅಂತ್ಯಗೊಂಡಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಈ ಮೊದಲು ಸಾನಿಯಾ ಮತ್ತು ಶೋಯೆಬ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಸದ್ಯದಲ್ಲೇ ಡಿವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥದ ಪೋಸ್ಟ್ ಅನ್ನು ಕೂಡ ಹಾಕಿದ್ದರು.


Ad Widget

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010ರ ಏಪ್ರಿಲ್ 12ರಂದು ಹೈದರಾಬಾದ್’ನಲ್ಲಿ ವಿವಾಹವಾಗಿದ್ದು, ಈ ಜೋಡಿಗೆ ಇಝ್ಹಾನ್ ಮಿರ್ಜಾ ಮಲಿಕ್(Izhaan Mirza Malik ) ಎಂಬ 4 ವರ್ಷದ ಮಗನಿದ್ದಾನೆ. ವಿವಾಹದ ನಂತರ ಶೋಯೆಬ್ ಮಲಿಕ್ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ಸರಿಯಾದ ದಾರಿಯಲ್ಲೇ ಸಾಗುತ್ತಿದ್ದ ಸಾನಿಯಾ-ಶೋಯೆಬ್ ಮಧ್ಯೆ ಪಾಕಿಸ್ತಾನದ ನಟಿಯೊಬ್ಬಳು ಬಂದಿರುವುದೆ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ.

ಈಗ ಇಬ್ಬರೂ ಡಿವೋರ್ಸ್ ಪಡೆದಿರುವುದು ಖಚಿತವಾಗಿದೆ. ಈ ಬಗ್ಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ ಆಪ್ತ ಸ್ನೇಹಿತರೊಬ್ಬರು ಮಾಹಿತಿ ಬಹಿರಂಗ ಪಡಿಸಿದ್ದಾರೆ. “ಹೌದು, ಅವರಿಬ್ಬರೂ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆ. ಇದಕ್ಕಿಂತ ಹೆಚ್ಚಿನದ್ದನ್ನು ನಾನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಆದರೆ ಅವರಿಬ್ಬರೂ ಬೇರೆ ಬೇರೆಯಾಗಿರುವುದನ್ನು ಖಚಿತ ಪಡಿಸುತ್ತಿದ್ದೇನೆ” ಎಂದು ಸಾನಿಯಾ ಮತ್ತು ಶೋಯೆಬ್ ಮಲಿಕ್ ಇಬ್ಬರಿಗೂ ಹತ್ತಿರವಾಗಿರುವ ಆಪ್ತ ಸ್ನೇಹಿತರೊಬ್ಬರು ವಿಚ್ಛೇದನದ ಮಾಹಿತಿ ದೃಢ ಪಡಿಸಿದ್ದಾರೆ.

ಪಾಕಿಸ್ತಾನದ ನಟಿಯೊಬ್ಬಳ ಜೊತೆ ಶೋಯೆಬ್ ಮಲಿಕ್ ಅಫೇರ್ ಹೊಂದಿರುವ ಬಗ್ಗೆ ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು . ಶೋಯೆಬ್ ಮಲಿಕ್ ಅವರು ಮಾಡಿರುವ ಮೋಸದ ಕಾರಣದಿಂದ ಸಾನಿಯಾ ಮಿರ್ಜಾ ದೂರವಾಗುತ್ತಿದ್ದಾರೆ ಎನ್ನಲಾಗಿದೆ.

ಶೋಯೆಬ್ ಮಲಿಕ್ ಮತ್ತು ಆ ಪಾಕಿಸ್ತಾನ ನಟಿಯ ನಡುವಿನ ಅಫೇರ್ ಬಗ್ಗೆ ತಿಳಿಯುತ್ತಿದ್ದಂತೆ ಸಾನಿಯಾ ಮಿರ್ಜಾ ತೀವ್ರ ಬೇಸರಗೊಂಡಿದ್ದಾರೆ. ಶೋಯೆಬ್ ಮಲಿಕ್ ಜೊತೆ ಕೆಲ ತಿಂಗಳುಗಳಿಂದ ಮಾತು ಬಿಟ್ಟಿದ್ದ ಸಾನಿಯಾ, ಇದೀಗ ಪಾಕಿಸ್ತಾನ ಮೂಲದ ತನ್ನ ಪತಿಗೆ ವಿಚ್ಛೇದನ ನೀಡಿದ್ದಾರೆ.

error: Content is protected !!
Scroll to Top
%d bloggers like this: