ಮಡಿಕೇರಿ : ಶವಾಗಾರದಲ್ಲೇ ಈತನ ಸೆಕ್ಸ್ | ಮೃತ ಮಹಿಳೆಯರ ಫೋಟೋ ತೆಗೆಯೋ ಖಯಾಲಿ | ಈ ವಿಕೃತ ಕಾಮಿಯ ಅಸಲಿ ಮುಖ ಬಯಲು

ಹೆಣಗಳನ್ನು ಇಡೋ‌ ಜಾಗದಲ್ಲಿ ವ್ಯಕ್ತಿಯೋರ್ವ ಕಾಮದಾಟ ನಡೆಸಿದ ಘಟನೆಯೊಂದು ನಡೆದಿದ್ದು, ನಿಜಕ್ಕೂ ಇದು ಜನರನ್ನು ಬೆಚ್ಚಿಬೀಳಿಸಿದೆ. ಹೌದು ಇಂತಹ ಒಂದು ಹೇಯ ಘಟನೆ ಕೊಡಗಿನಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರನ್ನು ಕರೆಸಿ ಕಾಮದಾಟ ಅಲ್ಲದೆ ಶವಗಾರದಲ್ಲಿದ್ದ ಮೃತ ಮಹಿಳೆಯರ ನಗ್ನ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದು ವಿಕೃತಿ ಮೆರೆದಿದ್ದಾನೆ. ಸೈಯ್ಯದ್ ಎಂಬಾತನೇ ಈ ಹೇಯ ಕೃತ್ಯವನ್ನು ಎಸಗಿದ ವ್ಯಕ್ತಿ. ಸಯ್ಯದ್ 2021ರ ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ಆಧಾರದಲ್ಲಿ ಶವಾಗಾರದ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದ. ಕೋವಿಡ್ ಸಂದರ್ಭದಲ್ಲಿ ಈತ ತುಂಬಾ ಶ್ರಮಪಟ್ಟು ಕೆಲಸ ಮಾಡಿದ್ದಾನೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಸನ್ಮಾನ ಕೂಡಾ ಮಾಡಿದ್ದರು.

ಹೊರಪ್ರಪಂಚಕ್ಕೆ ಗೊತ್ತಾಗದ ರೀತಿಯಲ್ಲಿ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಸೈಯದ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರನ್ನು ಫೋನ್ ಕರೆಮಾಡಿ ಶವಾಗಾರಕ್ಕೆ ಕರೆಸಿಕೊಳ್ಳುತ್ತಿದ್ದ. ಶವಗಾರದಲ್ಲೇ ಹಲವು ಮಹಿಳೆಯರ ಜೊತೆ ಸೆಕ್ಸ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಅಪಘಾತ ಸೇರಿದಂತೆ ನಾನಾ ರೀತಿಯಲ್ಲಿ ಸತ್ತು ಶವಾಗಾರಕ್ಕೆ ಸೇರುತ್ತಿದ್ದ ಮಹಿಳೆಯರ ನಗ್ನ ಫೋಟೋಗಳನ್ನು ತೆಗೆದು ತನ್ನ ಮೊಬೈಲ್‍ನಲ್ಲೂ ಇಟ್ಟುಕೊಂಡಿದ್ದ.

ಸೈಯದ್ ತಿಂಗಳ ಹಿಂದೆ ಮಡಿಕೇರಿ ನಗರದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಜನರಿಗೆ ಸಿಕ್ಕಿಬಿದ್ದಿದ್ದ ಈತ ನಂತರ, ಸ್ಥಳೀಯರು ಫೋನ್ ಅನ್ನು ಪೊಲೀಸ್ ವಶಕ್ಕೆ ನೀಡಿದ್ದರು. ಆತನ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಆತನ ಯಾರೊಂದಿಗೆಲ್ಲಾ, ಏನೆಲ್ಲಾ ಮಾತನಾಡಿದ್ದಾನೆ ಎಂಬುವುದು ತಿಳಿದು ಬಂದಿದೆ.

ಯಾರಾದರೂ ಮಹಿಳೆಯರು, ಹೆಣ್ಣುಮಕ್ಕಳು ಸತ್ತು ಅವರ ಮೃತದೇಹಗಳನ್ನು ಶವಾಗಾರಕ್ಕೆ ಹಾಕಿದರೆ, ಪೋಸ್ಟ್ ಮಾರ್ಟಂಗೂ ಮೊದಲೇ ಈ ಕಿರಾತಕ ಆ ಸತ್ತ ಮಹಿಳೆಯರ, ಹೆಣ್ಣುಮಕ್ಕಳ ಬೆತ್ತಲೇ ಮೃತದೇಹಗಳ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದುದಿಟ್ಟುಕೊಳ್ಳುತ್ತಿದ್ದ ಎನ್ನುವ ಘೋರ ವಿಷಯವೂ ಗೊತ್ತಾಗಿದೆ. ಅಷ್ಟೇ ಅಲ್ಲದೇ ಸಾಕಷ್ಟು ಹೆಣ್ಣು ಮಕ್ಕಳು, ಮಹಿಳೆಯರನ್ನು ಸಯ್ಯದ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನುವುದು ಗೊತ್ತಾಗಿದೆ.

ಹಿಂದೂ ಜಾಗರಣಾ ವೇದಿಕೆಯು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್‍ಗೆ ಈತನ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಕಾರಿಯಪ್ಪ ಅವರು ಸಯ್ಯದ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಮಡಿಕೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top
%d bloggers like this: