Lava Blaze 5G : ಲಾವಾದಿಂದ ಧಮಾಕಾ ಆಫರ್ | ಕೇವಲ 9,999 ರೂ.ಗೆ ಲಾವ ಬ್ಲೇಜ್ 5G ಸ್ಮಾರ್ಟ್ಫೋನ್ ಬಿಡುಗಡೆ!

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ.
ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಅದರಲ್ಲೂ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸೀರಿಸ್‌ ನಲ್ಲಿ ಕಂಪನಿಗಳು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ.


Ad Widget

Ad Widget

Ad Widget

Ad Widget
Ad Widget

Ad Widget

ಜನಪ್ರಿಯವಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ ದೇಶದಲ್ಲಿ ಇತ್ತೀಚಿಗಷ್ಟೇ ʻಮೀಡಿಯಾಟೆಕ್ ಡೈಮೆನ್ಸಿಟಿ 700ʼ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಲಾವ ಬ್ಲಾಜ್ 5G(Lava Blaze 5G) ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿತ್ತು. ಇದೀಗ ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ ಕಂಪನಿಯು ಇದೀಗ ಈ ಹೊಸ Lava Blaze 5G ಸ್ಮಾರ್ಟ್‌ಫೋನ್ ನ್ನು ಪರಿಚಯಿಸಲಿದೆ. ಮತ್ತು ನವೆಂಬರ್ 15ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಮುಖ ಇ-ಕಾಮರ್ಸ್ ತಾಣ Amazon.in ನಲ್ಲಿ 9,999 ರೂ.ಗಳ ವಿಶೇಷ ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ಲಾವಾ ಕಂಪೆನಿ ತಿಳಿಸಿದೆ.


Ad Widget

ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ ಕಂಪನಿಯು ಜನರಿಗೆ ತನ್ನ 5G ಸ್ಮಾರ್ಟ್‌ಫೋನ್‌ ‘Lava Blaze 5G’ ಸಾಧನದ ಬೆಲೆ ಹಾಗೂ ಮಾರಾಟದ ದಿನಾಂಕವನ್ನು ಘೋಷಿಸಿದೆ. ಅಲ್ಲದೆ ಈ ಕೊಡುಗೆಯ ಬೆಲೆಯು ಸೀಮಿತ ಸ್ಟಾಕ್‌ಗೆ ಮಾತ್ರ ಇರಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ನವೆಂಬರ್‌ 15 ರಿಂದ ಆರಂವಾಗುತ್ತಿರುವ Lava Blaze 5G ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗಾಗಿ ‘ಮನೆಯಲ್ಲೇ ಉಚಿತ ಸೇವೆ’ ಒದಗಿಸಲಾಗುವುದು ಎಂದು ಲಾವಾ ಕಂಪೆನಿ ತಿಳಿಸಿದೆ.

ಗ್ರಾಹಕರು Lava Blaze 5G ಸ್ಮಾರ್ಟ್‌ಫೋನ್‌ನ ವಾರಂಟಿ ಅವಧಿಯೊಳಗೆ ಉಚಿತವಾಗಿ ಮನೆಯಲ್ಲೇ ಕುಳಿತು ಸರ್ವಿಸ್ ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್‌ʼನ ಉತ್ಪನ್ನ ವಿಭಾಗದ ಮುಖ್ಯಸ್ಥರಾದ ತೇಜಿಂದರ್ ಸಿಂಗ್ ಅವರು, “ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್ ಮುಂದಿನ ಪೀಳಿಗೆಯ 5G ತಂತ್ರಜ್ಞಾನವನ್ನು ಭಾರತೀಯರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಲಿದೆ” ಎಂದು ಮಾಹಿತಿ ನೀಡಿದ್ದಾರೆ.

Lava Blaze 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು:
• ನೂತನ Lava Blaze 5G ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.51-ಇಂಚಿನ HD+ (720×1,600 ಪಿಕ್ಸೆಲ್‌ಗಳು) LCD IPS 2.5D ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ.
• ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ನಲ್ಲಿ ಚಾಲಿತವಾಗಿರುವ Lava Blaze 5G ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ Android 12 ನಲ್ಲಿ ಕಾರ್ಯನಿರ್ವಹಿಸಲಿದೆ
• 4GB ಆನ್‌ಬೋರ್ಡ್ RAM ಮತ್ತು 128GB ಆಂತರಿಕ ಮೆಮೊರಿ ಹೊಂದಿದ್ದು, 3GB ವರೆಗೆ ವರ್ಚುವಲ್ RAM ಹೆಚ್ಚಿಸಿಕೊಳ್ಳುವ ‘RAM ಪ್ಲಸ್’ ವೈಶಿಷ್ಟ್ಯವಿದೆ.
• Lava Blaze 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಸೆಟಪ್ ಹೊಂದಿರುವ 50-ಮೆಗಾಪಿಕ್ಸೆಲ್ AI ಪ್ರಾಥಮಿಕ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
• 5G ಬಹು 5G ಬ್ಯಾಂಡ್‌ಗಳು, 4G VoLTE, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.1 ವೈರ್‌ಲೆಸ್ ಸಂಪರ್ಕ ವೈಶಿಷ್ಟ್ಯಗಳನ್ನು ಬೆಂಬಲಿಸುವ ಈ ಸ್ಮಾರ್ಟ್‌ಫೋನ್ . 5,000mAh ಬ್ಯಾಟರಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.
• ʻಲಾವಾ ಬ್ಲೇಜ್ 5Gʼ ವಿಶೇಷ ವೈಶಿಷ್ಟ್ಯದೊಂದಿಗೆ ಬರುತ್ತಿದ್ದು, ಇದರಲ್ಲಿ ʻಯೂಟ್ಯೂಬ್ʼ ಅಪ್ಲಿಕೇಶನ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ.
• ಇದು ಬಳಕೆದಾರರಿಗೆ ಮಲ್ಟಿ-ಟಾಸ್ಕಿಂಗ್ ಮಾಡುವಾಗ ತಮ್ಮ ನೆಚ್ಚಿನ ವೀಡಿಯೊಗಳನ್ನು ಪ್ಲೇ ಮಾಡಲು ಅನುವು ಮಾಡಿಕೊಡುತ್ತದೆ.
• ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ನೊಂದಿಗೆ ಭದ್ರತಾ ವೈಶಿಷ್ಟ್ಯ, ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಎಲ್ಲಾ ಪ್ರಮುಖ ʻ1/3/5/8/28/41/77/78ʼ 5G ಬ್ಯಾಂಡ್ ಬೆಂಬಲ ಸೇರಿದಂತಹ ಹಲವು ಪ್ರಮುಖ ವೈಶಿಷ್ಟ್ಯಗಳಿವೆ.

ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಯೋಜನೆ ಇದ್ದರೆ ಜನರಿಗೆ ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ ಕಂಪನಿಯು ಸುವರ್ಣ ಅವಕಾಶ ನೀಡಿದೆ.

error: Content is protected !!
Scroll to Top
%d bloggers like this: