ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ !

ಭಾರತ ಹಾಗೂ ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎನಿಸಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಮೊದಲು ಒಂದೇ ಟರ್ಮಿನಲ್ ಇದ್ದು, ಆದರೆ, ನಿಲ್ದಾಣ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎರಡನೇ ಟರ್ಮಿನಲ್ ನಿರ್ಮಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2ರ ಮೊದಲನೇ ಹಂತವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದಾರೆ.

ಎರಡನೇ ಟರ್ಮಿನಲ್ ಹಾಗೂ ಅದಕ್ಕೆ ಅಗತ್ಯವಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು 2018ರಿಂದ ಆರಂಭಿಸಲಾಗಿದೆ. ಒಂದನೇ ಟರ್ಮಿನಲ್‌ಗೆ ಹೋಲಿಸಿದರೆ ಎರಡನೇ ಟರ್ಮಿನಲ್‌ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಪ್ರವೇಶ (ಚೆಕ್‌–ಇನ್‌) ಕೌಂಟರ್‌ಗಳು ಹಾಗೂ ನಿರ್ಗಮನ ಪ್ರದೇಶಗಳು ದೊಡ್ಡದಾಗಿವೆ.

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ ಭಾಗದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(KIAL) ಟರ್ಮಿನಲ್ -2ರ ಮೊದಲನೇ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದು, ಟರ್ಮಿನಲ್-2ರ ಒಳಾಂಗಣವನ್ನು ಹಚ್ಚ ಹಸಿರಿನ ಉದ್ಯಾನವನ ಪರಿಕಲ್ಪನೆಯಲ್ಲಿ ನಿರ್ಮಿಸಿದ್ದು, ವಿದೇಶಿ ವಿಮಾನ ನಿಲ್ದಾಣಗಳನ್ನು ಮೀರಿಸುವಂಥ ಹೈಟೆಕ್​ ವ್ಯವಸ್ಥೆಯನ್ನು ಒಳಗೊಂಡಿದೆ.

ಎರಡನೇ ಟರ್ಮಿನಲ್ ಬಳಕೆಗೆ ಮುಕ್ತವಾದರೆ ಇಡೀ ವಿಶ್ವದಲ್ಲೇ ಸುಸಜ್ಜಿತ ಟರ್ಮಿನಲ್ ಎನಿಸಿಕೊಳ್ಳಲಿದೆ.

Leave A Reply

Your email address will not be published.