ನೋಡಿ ಡ್ರೋನ್ ಪ್ರತಾಪನ ಹೊಸ ಪ್ರತಾಪ | ಹೊಸ ಬ್ಯುಸಿನೆಸ್ ಘೋಷಣೆ ಮಾಡಿದ ಪ್ರತಾಪ್!!!

ಮಂಡ್ಯ ಮೂಲದ ಯುವಕ​ ಪ್ರತಾಪ್ ಡ್ರೋನ್​ ಪ್ರತಾಪ್ ಎಂದೇ ಖ್ಯಾತಿಪಡೆದಿದ್ದು ‘ನಾನೊಬ್ಬ ಯುವ ವಿಜ್ಞಾನಿ ಅಲ್ಲದೆ, ಡ್ರೋನ್​ ತಯಾರಿಸಿದ್ದೇನೆ’ ಎಂದು ಹೇಳಿ ಕನ್ನಡಿಗರನ್ನು ದೇಶ-ವಿದೇಶಿಗರನ್ನೂ ಮಾತ್ರವಲ್ಲದೇ, ದೊಡ್ಡ ದೊಡ್ಡ ರಾಜಕಾರಣಿಗಳನ್ನು ಯಾಮಾರಿಸಿ ಎಲ್ಲರಿಗೂ ಕಾಗೆ ಹಾರಿಸಿದ್ದ.ಈ ಪ್ರಕರಣದ ಕುರಿತಾಗಿ ಈತನ ವಿರುದ್ಧ ಹಲವು ಕೇಸ್​ಗಳೂ ಕೂಡ ದಾಖಲಾಗಿದ್ದವು. ಹಾಗಾಗಿ, ಕೆಲಕಾಲ ತಲೆ ಮರೆಸಿಕೊಂಡಿದ್ದ ಪ್ರತಾಪ್​, ಕೊನೆಗೆ ಪೊಲೀಸರಿಂದ ವಿಚಾರಣೆಯನ್ನೂ ಎದುರಿಸಿದ್ದ. ಈ ಬಳಿಕ ಎರಡು ವರ್ಷಗಳ ಕಾಲ ಸದ್ದಿಲ್ಲದಂತೆ ಮಾಯವಾಗಿದ್ದ ಪ್ರತಾಪ್​, ಇದೀಗ ಪ್ರತ್ಯಕ್ಷವಾಗಿದ್ದು, ತಾನೊಂದು ಕಂಪನಿ ಸ್ಟಾರ್ಟ್​ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ.

ವಾರದ ಹಿಂದೆಯೇ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷವಾಗಿದ್ದ ಪ್ರತಾಪ್​, ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಫೋಟೋವೊಂದನ್ನು ಹಾಕಿ ಮುನ್ಸೂಚನೆ ನೀಡಿದ್ದರು. ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ’ ಎಂದು ಅಡಿಬರಹ ಹಾಕಿ ಫೋಟೋ ಅಪ್​ಲೋಡ್​ ಮಾಡಿದ್ದರು. ಟೇಬಲ್​ ಮೇಲೊಂದು ಲ್ಯಾಪ್​ಲಾಪ್​ ಇಟ್ಟು, ಅದಕ್ಕೆ ಡಾಟಾ ಕೇಬಲ್​ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಮಷಿನ್​​ ಹಿಡಿದು ನಗುತ್ತಾ ಕ್ಯಾಮರಾಗೆ ಪೋಸ್​ ನೀಡಿದ ವಿಚಾರ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿತ್ತು. ಈ ಫೋಟೋ ನೋಡಿದ ನೆಟ್ಟಿಗರು, ಇನ್​ಸ್ಟಾಗ್ರಾಂ ಖಾತೆಯಲ್ಲಿ ಬಗೆಬಗೆಯ ಕಮೆಂಟ್​ಗಳೊಂದಿಗೆ ಕಾಲೆಳೆಯುತ್ತಲೇ ಇದ್ದರು.

ಇದೀಗ, ಮತ್ತೊಮ್ಮೆ ನ.10 ರಂದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಲೈವ್​ ಬಂದ ಪ್ರತಾಪ್​, ‘ನಾನು ಡ್ರೋನ್​ ಕಂಡು ಹಿಡಿಯಲ್ಲ ಎಂದು ಎಲ್ಲರೂ ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಆಡಿಕೊಳ್ಳೋರು ಆಡಿಕೊಳ್ಳಲಿ ಜೊತೆಗೆ ಕಮೆಂಟ್​ ಮಾಡೋರು ಮಾಡಲಿ ಎಂದು ಹೇಳಿದ್ದು, ಇದರ ಜೊತೆಗೆ ನೀವು ಟ್ರೋಲ್​ ಅನ್ನು ಕಂಟಿನ್ಯೂ ಮಾಡಿ ಎಂದಿದ್ದಾರೆ. ನಾನು ನನ್ನ ಕೆಲಸ ಮುಂದುವರೆಸುತ್ತೇನೆ. ಟ್ರೋಲಿಗರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ. ಗೇಲಿ ಮಾಡುವವರಿಗೆ ನಾನು ನನ್ನ ಕೆಲಸ ಮೂಲಕವೇ ಉತ್ತರ ನೀಡುತ್ತೇನೆ’ ಎಂದು ಶಪಥ ಮಾಡುತ್ತಲೇ ಹೊಸ ಕಂಪನಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್​ಸ್ಟಾಗ್ರಾಂ ಲೈವ್​ನಲ್ಲಿ ಪ್ರತಾಪ್​ ಹೇಳಿದ್ದೇನು? ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.

“ಹಾಯ್​.. ಹಾಯ್​.. ಎಲ್ರಿಗೂ ನಮಸ್ಕಾರ, ಎಲ್ರೂ ಹೇಗಿದ್ದೀರಾ? ಕನ್ನಡಿಗರಿಗೆ ನಮಸ್ಕಾರ. ನಾನಿವತ್ತು ಇಂಪಾರ್ಟೆಂಟ್​ ವಿಷ್ಯ ಅನೌನ್ಸ್​ ಮಾಡ್ತಿದ್ದೀನಿ. ‘ಟುನಾರ್ಕ್​ ಏರೋಸ್ಪೇಸ್’ ಎಂಬ​ ಕಂಪನಿ ಶುರು ಮಾಡುತ್ತ ಇದ್ದೀನಿ. ಬೆಂಗಳೂರು, ಪುಣೆ, ನಾಸಿಕ್​, ಸೇರಿದಂತೆ ನಾಲ್ಕು ಸ್ಥಳಗಳನ್ನೂ ಕೇಂದ್ರೀಕರಿಸಿದ್ದೇವೆ. ಅಗ್ರಿಕಲ್ಚರಲ್​ ಡ್ರೋನ್​ ತಯಾರಿಸಲು ನಮಗೆ ಆಗಲೇ ಆರ್ಡರ್ಸ್​​ ಬಂದಿದೆ.

ಡ್ರೋನ್​ ಇಂಡಸ್ರ್ಟಿಯಲ್ಲಿ ಕೆಲಸ ಮಾಡುತ್ತಿರುವವರನ್ನ ನಮ್ಮ ಕಂಪನಿಗೆ ಸೇರಿಸಿ ಕೊಳ್ಳುತ್ತಿದ್ದೇವೆ. ಆಸಕ್ತಿ ಇರುವ ಅಭ್ಯರ್ಥಿಗಳು ಅಗ್ರಿಕಲ್ಚರ್​ ಡ್ರೋನ್​ ಬಗ್ಗೆ ಅವರೆಲ್ಲರೂ ನಮ್ಮ ಕಂಪನಿಯನ್ನ ಸಂಪರ್ಕಿಸಬಹುದು ಎಂಬ ಆಫರ್ ಕೂಡ ನೀಡಿದ್ದಾರೆ. ಆಸಕ್ತಿವುಳ್ಳವರು ಡ್ರೋನ್​ ಅನ್ನು ಖರೀದಿಸಬಹುದು ಮತ್ತು ಬಾಡಿಗೆಗೆ ಪಡೆಯಬಹುದು’ ಎಂದು ಪ್ರತಾಪ್​ ಹೇಳಿದ್ದು, ಇನ್ನೂ ತಮ್ಮ ಡ್ರೋನ್ ಕಾನ್ಸೆಪ್ಟ್ ನಿಂದ ಹೊರ ಬಂದಂತೆ ಕಂಡು ಬರುತ್ತಿಲ್ಲ.

ಇದೀಗ ಹೊಸ ಕಥೆಯನ್ನು ಹೇಳುತ್ತಿದ್ದು, ಕಾರ್ಯ ರೂಪಕ್ಕೆ ಬಂದ ಮೇಲಷ್ಟೇ ಸತ್ಯ ಸತ್ಯತೆ ಬಯಲಾಗಬೇಕಿದೆ.’ ಈಗಾಗಲೇ 2 ರೀತಿಯ ಡ್ರೋನ್​ ತಯಾರಿಸಿದ್ದೇವೆ. ಮೊದಲ ಡ್ರೋನ್​ 10 ಲೀಟರ್ ಸಮಾರ್ಥ್ಯದಾಗಿದ್ದು, ಇನ್ನೊಂದು 16 ಲೀಟರ್​ ಸಾಮಾರ್ಥ್ಯದ ಡ್ರೋನ್​ ಎಂದು ಮಾಹಿತಿ ನೀಡಿದ್ದಾರೆ. ಅತಿ ಶ್ರೀಘ್ರದಲ್ಲೆ 25 ಲೀಟರ್​ ಸಾಮರ್ಥ್ಯದ ಡ್ರೋನ್​ ತಯಾರು ಮಾಡುವ ಯೋಜನೆ ಇದೆ. ನಾನು ಡ್ರೋನ್​ ಕಂಡು ಹಿಡಿಯಲ್ಲ ಅಂತ ಎಲ್ರೂ ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಆಡಿಕೊಳ್ಳೋರು ಆಡಿಕೊಳ್ಳಲಿ. ಕಮೆಂಟ್​ ಮಾಡೋರು ಮಾಡಲಿ. ಗೇಲಿ ಮಾಡೋರು ಗೇಲಿ ಮಾಡಲಿ. ಟ್ರೋಲ್​ ಮಾಡೋರು ಟ್ರೋಲ್​ ಮಾಡೋದನ್ನೇ ಕಂಟಿನ್ಯೂ ಮಾಡಿ. ನಾನು ನನ್ನ ಕೆಲಸ ಕಂಟಿನ್ಯೂ ಮಾಡ್ತೀನಿ. ನಿಮಗೆಲ್ಲಾ ದೇವರು ಒಳ್ಳೇದು ಮಾಡಲಿ. ನಾನು ನನ್ನ ಕೆಲಸದ ಮೂಲಕವೇ ನಿಮಗೆಲ್ಲಾ ಉತ್ತರ ನೀಡುತ್ತೇನೆ.

ನಾನು ಹೊಸ ಕಂಪನಿ ಶುರು ಮಾಡಿದ್ದೀನಿ. ಈ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಕೂಡ ನಾನೇ ಎಂಬ ಹೊಸ ಪ್ರಯೋಗದ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನು ಅನೌನ್ಸ್​ ಮಾಡಬೇಕಿತ್ತು ಹಾಗಾಗಿ, ಇಂದು ಇನ್​ಸ್ಟಾಗ್ರಾಂ ಲೈವ್​ ಬಂದಿದ್ದೇನೆ. ನನ್ನ ಫಾಲೋವರ್ಸ್​ಗಳು ನನಗೆ ಸಹಕರಿಸ್ತಾರೆ’ ಎಂಬ ವಿಶ್ವಾಸವನ್ನು ಡ್ರೋನ್ ಪ್ರತಾಪ್​ ಈ ಸಂದರ್ಭ ವ್ಯಕ್ತ ಪಡಿಸಿದ್ದಾರೆ.

(ಗುರುವಾರ) ಇನ್​ಸ್ಟಾಗ್ರಾಂನಲ್ಲಿ ಹೊಸ ಕಂಪನಿಯ ಪೂಜೆ ಮಾಡಿರುವ ರೀತಿಯಲ್ಲಿ ಫೋಟೋವೊಂದನ್ನು ಹಾಕಿ ಲೈವ್​ಗೆ ಬಂದಿದ್ದ ಪ್ರತಾಪ್, ​ತಾನೊಂದು ಕಂಪನಿ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ತರೇಹವಾರಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಶುಭವಾಗಲಿ ಎಂದರೆ ಹಲವರು ಟೀಕಿಸಿದ್ದಾರೆ. ‘ಅಣ್ಣ ಬಂದ ಅಣ್ಣ ಬಂದ…’. ‘ಕುಕ್ಕರ್​ನ 3 ವಿಸಿಲ್ ಆಯ್ತು ಅನ್ಸುತ್ತೆ, ಹೋಗಿ ಗ್ಯಾಸ್​ ಆಫ್​ ಮಾಡು ಅಣ್ಣ’. ‘ಇಲ್ಲೆಲ್ಲಾದಾರು ಸುಟ್ಟ ವಾಸನೆ ಬರ್ತಿದೀಯಾ’. ‘ಈ ಸಲ ನೀನು ಈ ದೇಶದಲ್ಲಿ ನಿನ್ನ ಹೆಸರು ಅಚ್ಚಳಿಯದ ಹಾಗೆ ಮತ್ತೊಮ್ಮೆ ಬೌನ್ಸ್ ಬ್ಯಾಕ್ ಆಗಿ ಬೆಳೆಯಿರಿ’. ‘ಛಲ ಬಿಡದ ಪ್ರತಾಪ’… ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಏನೇ ಆಗಲಿ… ಏನೋ ಸಾಧಿಸುತ್ತಿರುವ ಛಲ ಬಿಡದ ಸರದಾರ ನಂತೆ ಹೊಸ ಪೋಸ್ಟ್ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿರುವ ಡ್ರೋನ್ ಪ್ರತಾಪ್ ಈ ಬಾರಿ ಏನು ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆತಿದ್ದು, ಅವರ ಹೇಳಿಕೆಯ ನಿಜಾಂಶ ಮುಂದಿನ ದಿನಗಳಲ್ಲಿ ತಿಳಿಯಲಿದೆ.

Leave A Reply

Your email address will not be published.