BBK9 : ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಲಿದ್ದಾರೆ ಈ ಮಾಜಿ ಸ್ಪರ್ಧಿಗಳು?!

ಕನ್ನಡದ ಮನರಂಜನೆಯ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಕೂಡ ಒಂದಾಗಿದ್ದು, ಕಲರ್ಸ್ ಕನ್ನಡದ ಜನಪ್ರಿಯ ಶೋಗಳಲ್ಲಿ ಒಂದಾಗಿದೆ. ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಈ ಶೋವನ್ನು ಮಿಸ್ ಮಾಡದೇ ನೋಡುವ ಅಭಿಮಾನಿಗಳ ಸಂಖ್ಯೆ ಹೆಚ್ಚೆ ಇದೆ ಎಂದರು ತಪ್ಪಾಗದು.
ಬಿಗ್‌ಬಾಸ್ ಕನ್ನಡ ಸೀಸನ್ 09 ಪ್ರಾರಂಭವಾಗಿ ಈಗಾಗಲೇ ಒಂದೂವರೆ ತಿಂಗಳ ಸನಿಹವೇ ಆಗಿದ್ದು, ಈಗಾಗಲೇ ಆರು ಮಂದಿ ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ.ಸೆಪ್ಟೆಂಬರ್ 24 ರಂದು ಪ್ರಾರಂಭವಾದ ಬಿಗ್‌ಬಾಸ್ ಸೀಸನ್ 09 ರಲ್ಲಿ ಪ್ರಸ್ತುತ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ಆರ್ಯವರ್ಧನ್ ಅವರುಗಳ ಆಟ ಜೋರಾಗಿ ನಡೆಯುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ಇತ್ತೀಚೆಗೆ ಜಗಳ ಮುನಿಸು ಗಳು ಆರಂಭವಾಗಿದ್ದು, ಜಗಳಗಳು ಹೆಚ್ಚಾಗಿ ನಡೆಯುತ್ತಿವೆ.ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತ ಹೋದಂತೆ ಪರಸ್ಪರರ ಮಧ್ಯೆ ಬಿರುಕು ದೊಡ್ಡದಾಗುತ್ತಿದೆ. ಆರಂಭದ ಕೆಲವಾರ ಆತ್ಮೀಯರಾಗಿದ್ದವರು ಈಗ ವೈರಿಗಳ ರೀತಿ ಸಣ್ಣ ಸಣ್ಣ ವಿಷಯಕ್ಕೂ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಸದ್ಯ ಈಗಿರುವ ಸ್ಪರ್ಧಿಗಳ ಜೊತೆಗೆ ಹೊಸದಾಗಿ ಇನ್ನಿಬ್ಬರು ಎಂಟ್ರಿ ಪಡೆದುಕೊಳ್ಳಲಿದ್ದಾರೆ ಎಂಬ ಯೋಜನೆಯಿದೆ ಎಂದು ಹೇಳಲಾಗುತ್ತಿದೆ. ಹೊಸದಾಗಿ ಮನೆ ಒಳಗಡೆ ಪ್ರವೇಶ ಪಡೆಯುತ್ತಿರುವ ಇಬ್ಬರು ಸ್ಪರ್ಧಿಗಳು ಮನೆಯೊಳಗಿನ ಈಗಿರುವ ಚಿತ್ರಣವನ್ನು ಸಂಪೂರ್ಣ ಬದಲಾಯಿಸುವ ಸಾಧ್ಯತೆ ಇದೆ.
ಒಟಿಟಿ ಸೀಸನ್‌ನಲ್ಲಿ ಕೊನೆಯ ದಿನದ ವರೆಗೆ ಸ್ಪರ್ಧಿಯಲ್ಲಿದ್ದ ಸೋನು ಗೌಡ ಅನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಕರೆಸಿಕೊಳ್ಳುವ ಕುರಿತು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಇವರ ಜೊತೆಗೆ ಮತ್ತೊಬ್ಬ ಮಾಜಿ ಬಿಗ್‌ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ಕೂಡ ಮನೆಯ ಒಳಗೆ ಕಳಿಸಲು ಬಿಗ್‌ಬಾಸ್ ಆಯೋಜಕರು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ .
ಒಟಿಟಿ ಬಿಗ್‌ಬಾಸ್ ಸೀಸನ್‌ನಲ್ಲಿ ಭಾಗವಹಿಸಿದ್ದ ಸೋನು ಗೌಡ, ರಾಕೇಶ್ ಅಡಿಗ ಜೊತೆ ಉತ್ತಮ ಗೆಳೆತನ ಹೊಂದಿದ್ದು, ಇಬ್ಬರೂ ಬಹಳ ಆಪ್ತವಾಗಿದ್ದರು. ಸೋನು ಗೌಡಗೆ ರಾಕೇಶ್ ಮೇಲೆ ಪ್ರೇಮ ಅನುರಾಗದ ಭಾವಗಳು ಇತ್ತು ಆದರೆ, ರಾಕೇಶ್ ರವರು ಸೋನು ಅವರನ್ನು ಸ್ನೇಹಿತೆಯಾಗಿ ನೋಡಿದ್ದಾರೆ. ಸದ್ಯ ರಾಕೇಶ್ ಹಾಗೂ ಅಮೂಲ್ಯ ಗೌಡ ನಡುವೆ ಆಪ್ತತೆ ಇದ್ದು, ಸೋನು ಗೌಡ ಮನೆ ಪ್ರವೇಶಿಸಿದರೆ ರಾಕೇಶ್ ಹಾಗೂ ಅಮೂಲ್ಯ ಗೌಡ ನಡುವಿನ ಈಕ್ವೇಶನ್ ಬದಲಾಗಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿದ್ದವರು, ಅದರಲ್ಲಿಯೂ ಪ್ರಶಾಂತ್ ಸಂಬರ್ಗಿಯವರನ್ನು ಬಿಗ್‌ಬಾಸ್‌ನ ಒಳಗೆ ಹಾಗೂ ಹೊರಗೂ ವಿರೋಧಿಸುತ್ತಿದ್ದವರು. ಈಗ ಬಿಗ್ಬಾಸ್ ಮನೆ ಒಳ ಪ್ರವೇಶಿಸಿದರೆ ಪ್ರಶಾಂತ್ ಸಂಬರ್ಗಿಗೆ ಸಂಕಷ್ಟ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಇವರಿಬ್ಬರ ಜುಗಲ್ ಬಂಧಿ ಪ್ರೇಕ್ಷಕರಿಗೆ ಖುಷಿ ನೀಡುವ ನಿರೀಕ್ಷೆ ಇದೆ.
ಅದರಲ್ಲಿ ಕೂಡ ಈ ವಾರದ ಮನೆಯ ವಾತಾವರಣ ಗಮನಿಸಿದರೆ, ಈ ವಾರ ರೂಪೇಶ್ ರಾಜಣ್ಣಗೆ ಕಳಪೆ ಸ್ಪರ್ಧಿ ಎಂಬ ಪಟ್ಟ ಬರುವ ಸಾಧ್ಯತೆಯೂ ಇದೆ. ಈ ವಾರ ಹಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ ಮನೆಯಿಂದ ಹೊರ ಬೀಳುವ ಸ್ಪರ್ಧಿ ಯಾರು ಎಂಬ ಕೌತುಕ ಹಲವರಲ್ಲಿ ಮನೆ ಮಾಡಿದೆ.