ವೈದ್ಯರು ಅಪರೇಷನ್ ಸಮಯದಲ್ಲಿ ‌ನೀಲಿ ಅಥವಾ ಹಸಿರು ಬಣ್ಣದ ಬಟ್ಟೆ ಏಕೆ ಧರಿಸುತ್ತಾರೆ?

ಆಸ್ಪತ್ರೆಗಳಲ್ಲಿ ವೈದ್ಯರು ಬಿಳಿಬಣ್ಣದ ಕೋಟ್‌ಗಳನ್ನು ಧರಿಸುತ್ತಾರೆ. ಆದರೆ ಆಪರೇಷನ್ ಸಮಯದಲ್ಲಿ ವೈದ್ಯರು ನೀಲಿ ಅಥವಾ ಹಸಿರು ಬಟ್ಟೆಗಳನ್ನು ಬಳಸುವುದನ್ನು ನೋಡಿರಬಹುದು. ಅಲ್ಲದೆ ಹಾಸಿಗೆ, ಬೆಡ್ ಶೀಟ್ ಗಳಲ್ಲೂ ಸಹ ಹಸಿರು ಬಣ್ಣ ಅಥವಾ ಕಡು ನೀಲಿ ಬಣ್ಣದ ಬಟ್ಟೆಯನ್ನೇ ಬಳಸುತ್ತಾರೆ. ಇದೇ ಬಣ್ಣವನ್ನು ಯಾಕೆ ಆಸ್ಪತ್ರೆಯಲ್ಲಿ ಉಪಯೋಗಿಸುತ್ತಾರೆ? ಇದಕ್ಕೆ ಕಾರಣವೇನು ಗೊತ್ತಾ? ಇದಕ್ಕೆಲ್ಲಾ ಇಲ್ಲಿದೆ ಉತ್ತರ.

ರಕ್ತದ ಬಣ್ಣಕ್ಕೆ ನೀಲಿ ಅಥವಾ ಹಸಿರು ಬಣ್ಣವು ವಿರುದ್ಧವಾಗಿದೆ. ಇದರಿಂದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ದೇಹದ ಒಂದು ಹನಿ ರಕ್ತ ಹಾಸಿಗೆಯ ಮೇಲೆ ಅಥವಾ ಬಟ್ಟೆಯ ಮೇಲೆ ಬಿದ್ದರೆ, ಅದು ಬೇಗ ವೈದ್ಯರ ಕಣ್ಣಿಗೆ ಗೋಚರವಾಗುತ್ತದೆ.

ಆದರೆ ಬಿಳಿ ಬಣ್ಣವನ್ನೂ ಬಳಸಬಹುದಲ್ಲಾ ಎಂದು ಪ್ರಶ್ನಿಸಬಹುದು. ಬಿಳಿ ಬಣ್ಣದ ಬಟ್ಟೆ ಮೇಲೆ ರಕ್ತದ ಕಲೆಯಾದ್ರೆ, ನಂತರ ವಾಶ್ ಮಾಡುವಾಗ ಅದು ಹೆಚ್ಚಾಗಿ ಹೋಗುವುದಿಲ್ಲ. ಇದರಿಂದ ಬಿಳಿ ಬಣ್ಣದ ಬಟ್ಟೆಯನ್ನು ಮರು ಬಳಕೆ ಮಾಡಲು ಸಾಧ್ಯವಾಗೋದಿಲ್ಲ. ಆದ್ರೆ, ಹಸಿರು ಅಥವಾ ನೀಲಿ ಬಣ್ಣದ ಬಟ್ಟೆಯಲ್ಲಿ ಅಷ್ಟಾಗಿ ಕೆಂಪು ಬಣ್ಣದ ಕಲೆ ಕಾಣದಿರುವುದರಿಂದ, ಹೆಚ್ಚಾಗಿ ಹಸಿರು ಬಣ್ಣ ಮತ್ತು ನೀಲಿಬಣ್ಣದ ಬಟ್ಟೆಯನ್ನು ಬಳಕೆ ಮಾಡಲಾಗುತ್ತದೆ.

ಈ ಕಾರಣ ಮಾತ್ರವಲ್ಲದೆ ವೈಜ್ಞಾನಿಕವಾದ ಕಾರಣವೂ ಇದೆ. ನೀವು ಬೇರೆ ಬಣ್ಣದ ಬಟ್ಟೆಯನ್ನು ತುಂಬಾ ಹೊತ್ತು ನೋಡಿದರೆ ನಿಮ್ಮ ಕಣ್ಣಿಗೆ ಆಯಾಸ ಆಗುತ್ತದೆ. ಉದಾಹರಣೆಗೆ ನೀವು ಗುಲಾಬಿ ಅಥವಾ ಕೆಂಪು ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ. ಇದು ನಮ್ಮ ಕಣ್ಣನ್ನು ಆಯಾಸಗೊಳಿಸಿದಂತೆ ಮಾಡುತ್ತದೆ.

ಅದೇ ಈ ಹಸಿರು ಬಣ್ಣ ಮತ್ತು ನೀಲಿ ಬಣ್ಣವನ್ನು ಹೆಚ್ಚು ಹೊತ್ತು ನೋಡಿದರೂ ನಿಮ್ಮ ಕಣ್ಣಿಗೆ ಯಾವುದೇ ರೀತಿಯ ಆಯಾಸವಾಗುವುದಿಲ್ಲ. ಈ ಬಣ್ಣವನ್ನು ನೋಡುವುದರಿಂದ ನಮ್ಮ ಮನಸ್ಸು ಶಾಂತವಾಗಿಯೂ ಇರುತ್ತದೆ. ಎಂದು ಸಂಶೋಧನೆಗಳಿಂದ ತಿಳಿದಿದೆ. ಈ ಎಲ್ಲಾ ಕಾರಣಗಳಿಂದ ಹೆಚ್ಚಾಗಿ ವೈದ್ಯರು ಆಸ್ಪತ್ರೆಗಳಲ್ಲಿ ಹಸಿರು ಬಣ್ಣ ಮತ್ತು ನೀಲಿ ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ.

Leave A Reply

Your email address will not be published.