ಭಾರತೀಯರಿಗೆ ಭರ್ಜರಿ ಬಿರಿಯಾನಿ ಊಟ ಬಡಿಸಿದ ಪಾಕ್ ವ್ಯಕ್ತಿ | ಏಕೆಂದು ತಿಳಿದರೆ ನೀವು ಶಹಬ್ಬಾಸ್ ಎನ್ನದೇ ಇರಲ್ಲ!

ಸಾಮಾನ್ಯವಾಗಿ ನಮ್ಮ ದೇಶದಲ್ಲೇ ಇದ್ದು, ಬೇರೆ ದೇಶಕ್ಕೆ ಕಾಲಿಡುವುದೆಂದರೆ ಏನೋ ಒಂದು ರೀತಿಯ ಆತಂಕ ಮನೆ ಮಾಡುವುದು ಸಹಜ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಹುಟ್ಟಿರುತ್ತವೆ. ಆದರೆ ಹೊರ ದೇಶದಲ್ಲಿ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ಆ ಭಯ ಮತ್ತು ಆತಂಕ ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಮಾಯವಾಗುತ್ತವೆ. ಒಂದು ಸುಂದರ ವಾತಾವರಣ ಸೃಷ್ಟಿಯಾಗಿ ಆನಂದದಾಯಕ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

ಅದರಲ್ಲೂ ಭಾರತದಿಂದ (India) ಪಾಕಿಸ್ತಾನಕ್ಕೆ (Pakistan) ಕಾಲಿಟ್ಟಾಗಲಿನ ಸ್ಥಿತಿ ಹೇಳುವುದೇ ಬೇಡ!!! ಎಷ್ಟು ಭಯ, ಆತಂಕ ಸೃಷ್ಟಿಯಾಗಿರುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬವೊಂದು ಪಾಕಿಸ್ತಾನಕ್ಕೆ ಭೇಟಿ ಕೊಟ್ಟಾಗ ಭಯದ ವಾತಾವರಣದಲ್ಲೆ ಇದ್ದರೂ ಎನ್ನಲಾಗಿದ್ದು, ಆದರೆ ಪಾಕಿಸ್ತಾನದಲ್ಲಿ ಕಾರಿನಲ್ಲಿ ಲಿಫ್ಟ್ ಕೇಳಿದ ಬಳಿಕ ಭಯವೆಲ್ಲ ಮಾಯವಾಗಿದೆ.

ಪಾಕಿಸ್ತಾನದ ಸ್ಥಳೀಯ ನಿವಾಸಿಯೊಬ್ಬರು ಭಾರತೀಯ ಕುಟುಂಬವನ್ನು ಆದರದಿಂದ ಸ್ವಾಗತಿಸಿದ್ದು ಜೊತೆಗೆ ಹೈದರಾಬಾದಿ ಬಿರಿಯಾನಿ ಪಾರ್ಟಿ ನೀಡಿ ತಮ್ಮ ಸ್ವಂತ ಬಳಗದವರಂತೆ ಸಂಭ್ರಮ ಪಟ್ಟಿದ್ದಾರೆ.ಈ ಹೃದಯಸ್ಪರ್ಶಿ ಘಟನೆಯನ್ನು ಸೆರೆಹಿಡಿದಿರುವ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿ ಸಂಚಲನ ಮೂಡಿಸಿದೆ.

ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾದ ಈ ವೀಡಿಯೋವು ತಾಹಿರ್ ಖಾನ್ ಎಂಬ ಪಾಕಿಸ್ತಾನಿ ಪ್ರಜೆಯ ಮಾತುಗಳಿಂದ ಪ್ರಾರಂಭವಾಗಿದ್ದು, ಅವರು ಹೈದರಾಬಾದ್ ನ ಕುಟುಂಬಕ್ಕೆ ಲಿಫ್ಟ್ ನೀಡಿದ್ದಾರೆ ಜೊತೆಗೆ ಈ ಕುಟುಂಬವು ಇಸ್ಲಾಮಾಬಾದ್ ನಲ್ಲಿ ನಡೆದ ಅಂತರರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೊರಟಿದ್ದೇವೆ ಎಂದು ತಾಹಿರ್ ಅವರೊಂದಿಗೆ ಹೇಳಿಕೊಂಡಿದ್ದಾರೆ.

ಭಾರತದವರು ಅಂತ ಹೇಳಿದ ತಕ್ಷಣ ಅವರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ತಮ್ಮೊಂದಿಗೆ ಊಟ ಮಾಡಬೇಕೆಂದು ತಾಹಿರ್ ಒತ್ತಾಯಿಸಿದ್ದು, ಈ ಕ್ಲಿಪ್ ನಲ್ಲಿ ಕುಟುಂಬವು ತಾಹಿರ್ ಅವರೊಂದಿಗೆ ಹೈದರಾಬಾದಿ ಬಿರಿಯಾನಿಯನ್ನು ತಿನ್ನುವುದನ್ನು ಮತ್ತು ನೆರೆಯ ದೇಶದಲ್ಲಿ ತಮ್ಮ ಆಹ್ಲಾದಕರ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದು.

“ನನ್ನ ಭಾರತೀಯ ಸ್ನೇಹಿತರು ಈ ವೀಡಿಯೋವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಇಸ್ಲಾಮಾಬಾದ್ ನಲ್ಲಿ ತನ್ನ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಬಗ್ಗೆ ಭಾರತೀಯ ಕುಟುಂಬವು ಹೇಳಿಕೊಂಡಿದೆ. ಈ ಸಂದರ್ಭದಲ್ಲಿ ಭಾರತೀಯ ಕುಟುಂಬವು ಪಾಕಿಸ್ತಾನದ ತಾಹಿರ್ ಖಾನ್ ಅವರನ್ನು ಭೇಟಿಯಾಗಿದ್ದು, ಅವರಿಗೆ ಲಿಫ್ಟ್ ಕೇಳಿದ್ದಾರೆ. ಈ ಕುಟುಂಬ ತಮ್ಮ ಸುಂದರ ಅನುಭವವನ್ನು ಈ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜವಾದ ಪಾಕಿಸ್ತಾನ” ಎಂದು ವೀಡಿಯೋದಲ್ಲಿ ಬರೆದುಕೊಂಡಿದ್ದಾರೆ.

“ನಮಗೆ ವಿರಾಟ್ ಕೊಹ್ಲಿಯನ್ನು ನೀಡಿ, ನೀವು ಟ್ರೋಫಿಯನ್ನು ತೆಗೆದುಕೊಳ್ಳಬಹುದು” ಎಂದು ಅಲ್ಲಿ ನಿರೂಪಕರು ತಮಾಷೆ ಮಾಡುತ್ತಿರುವುದನ್ನು ಸಹ ಈ ವೀಡಿಯೋದಲ್ಲಿ ಕೇಳಬಹುದಾಗಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡವು ಟ್ವೆಂಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಪಂದ್ಯಗಳಲ್ಲಿ ಆಡಲಿವೆ. ಮುಂದಿನ ಕ್ಲಿಪ್ ನಲ್ಲಿ ತನ್ನ ಟೆನಿಸ್ ಪಂದ್ಯವನ್ನು ಆಡಲಿರುವ ಹುಡುಗಿಯರು ಇಂತಹ ಹೃದಯಸ್ಪರ್ಶಿ ಸ್ವಾಗತವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಪಾಕಿಸ್ತಾನದ ಜನರ ಆತಿಥ್ಯವನ್ನು ತುಂಬಾನೇ ಇಷ್ಟಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

ಏನೇ ಆಗಲಿ.. ಪಾಕಿಸ್ತಾನದಲ್ಲಿಯೂ ಕೂಡ ಭಾರತೀಯ ಪ್ರಜೆಗೆ ಆದರ, ಅಥಿತ್ಯ ಸಿಗುವುದು ಅಪರೂಪ ಎನ್ನಬಹುದು. ಈ ಕ್ಲಿಪ್ ಗಳು ಟ್ವಿಟ್ಟರ್ ನಲ್ಲಿ ಹಲವಾರು ಮಂದಿ ವೀಕ್ಷಿಸಿದ್ದು, ಎಲ್ಲೆಡೆ ಪಾಕ್ ಮಂದಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬ್ ನಲ್ಲಿ ಹಲವಾರು ಬ್ಲಾಗ್ ಗಳನ್ನು ನೋಡಿದ್ದೇನೆ. ಅವುಗಳಲ್ಲಿ ಪ್ರತಿಯೊಬ್ಬರೂ ಪಾಕಿಸ್ತಾನದ ಜನರ ಆತಿಥ್ಯವನ್ನು ಶ್ಲಾಘಿಸಿದ್ದಾರೆ” ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Leave A Reply

Your email address will not be published.