ವಯಸ್ಸಾದಂತೆ ಆರೋಗ್ಯ ಚೆನ್ನಾಗಿರಲು ಇಷ್ಟಿದ್ದರೆ ಸಾಕು!

ವಯಸ್ಸಾದಂತೆ ಸ್ನಾಯುಗಳು ದುರ್ಬಲಗೊಳ್ಳತ್ತದೆ. ಹಾಗಾಗಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ದೈಹಿಕ ಶಕ್ತಿ, ಅಂಗಗಳ ಕಾರ್ಯ ನಿರ್ವಹಣೆ, ಚರ್ಮದ ಸಮಗ್ರತೆ, ರೋಗನಿರೋಧಕ ಶಕ್ತಿ ಮತ್ತು ಗಾಯಗಳ ಗುಣಪಡಿಸುವಿಕೆಗಳಿಗೆ ಸ್ನಾಯುಗಳು ಬಲವಾಗಿರಬೇಕು. ವಯಸ್ಸಾದರೂ ನಿಮ್ಮನ್ನು ಶಕ್ತಿವಂತರಾಗಿರಿಸಲು, ಸ್ನಾಯುವಿನ ಬಲವನ್ನು ವರ್ಧಿಸಲು ಕೆಲವೊಂದು ಮಾರ್ಗಗಳು ಇಲ್ಲಿವೆ.

ದೈಹಿಕ ಚಟುವಟಿಕೆಗಳು:- ತಮ್ಮ ಚಲನಶೀಲತೆ ಮತ್ತು ಶಕ್ತಿಯನ್ನು ಹಾಗೇ ಇರಿಸಿಕೊಳ್ಳಲು, ವಯಸ್ಕರು ದಿನದಲ್ಲಿ ಕನಿಷ್ಠ 30 ನಿಮಿಷಗಳ ಕಾಲವಾದರೂ ವ್ಯಾಯಾಮ ಮಾಡಬೇಕು. 65 ವರ್ಷಕ್ಕಿಂತ ಮೇಲ್ಪಟ್ಟವರು ದಿನದಲ್ಲಿ 20 ರಿಂದ 25 ನಿಮಿಷಗಳಷ್ಟು ವ್ಯಾಯಾಮ ಮಾಡುವುದು ಒಳ್ಳೆಯದು. ನಿಮಗೆ ಯಾವ ರೀತಿಯ ವ್ಯಾಯಾಮಗಳು ಮತ್ತು ಫಿಟ್‌ನೆಸ್ ದಿನಚರಿ ಸೂಕ್ತವಾಗಿರುತ್ತದೆ ಎಂಬುದರ ಕುರಿತು ನಿಮ್ಮ ಆರೋಗ್ಯ ತಜ್ಞರೊಂದಿಗೆ ಮಾತನಾಡಿ.

ಜಡ ಜೀವನಶೈಲಿ:- ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತದೆ. ಪ್ರತಿದಿನ ಕೆಲವು ನಿಮಿಷಗಳ ವ್ಯಾಯಾಮದಿಂದ ನಿಮ್ಮ ದಿನಚರಿಯನ್ನು ಪ್ರಾರಂಭಿಸಬೇಕು. ನಂತರ ಕ್ರಮೇಣವಾಗಿ ತೀವ್ರತೆ ಮತ್ತು ಅವಧಿಯನ್ನು ಹೆಚ್ಚಿಸಬೇಕು.

ಸ್ನಾಯು ಸೆಳೆತ:- ಸಾಮರ್ಥ್ಯ ತರಬೇತಿಯನ್ನು ಅಳವಡಿಸಿಕೊಳ್ಳುವುದರಿಂದ, ಈ ನೋವನ್ನು ನಿವಾರಿಸುತ್ತದೆ. ಅಲ್ಲದೆ ಇದು 10-20 ವರ್ಷಗಳ ಪುನರ್ಯೌವನಗೊಳಿಸುವಿಕೆಗೆ ಸಮಾನವಾಗಿದೆ.

ವಾಕಿಂಗ್, ಈಜು ಸೈಕ್ಲಿಂಗ್ ಮತ್ತು ಯೋಗದಿಂದ ನಮ್ಯತೆ, ಶಕ್ತಿ ಮತ್ತು ಸಮತೋಲನ ಹೆಚ್ಚುತ್ತದೆ. ಪೌಷ್ಟಿಕಾಂಶದಲ್ಲಿನ ಅಸಮತೋಲನ, ವ್ಯಾಯಾಮದ ಕೊರತೆ ಮತ್ತು ಜಡ ಜೀವನಶೈಲಿಯು ವಯಸ್ಸಾಗುವಿಕೆಯ ಆಕ್ರಮಣವನ್ನು ಅತೀ ವೇಗಗೊಳಿಸುತ್ತದೆ. ಇದರಿಂದ ನಿಮ್ಮ ಸ್ನಾಯುಗಳನ್ನು ಮತ್ತಷ್ಟು ದುರ್ಬಲಗೊಳ್ಳುತ್ತದೆ.

ವಯಸ್ಸಾದಂತೆ ಪೋಷಕಾಂಶಗಳನ್ನು ಹೀರಿಕೊಳ್ಳುವ ಮತ್ತು ಬಳಸಿಕೊಳ್ಳುವ ದೇಹದ ಸಾಮರ್ಥ್ಯವು ಕಡಿಮೆಯಾಗಿದ್ದರೂ, ಪೌಷ್ಟಿಕಾಂಶದ ಅಗತ್ಯವು ಹೆಚ್ಚಾಗುತ್ತದೆ ಎಂದು ಸಂಶೋಧನೆಯು ಸೂಚಿಸುತ್ತದೆ. ನಿಮ್ಮ ಸ್ನಾಯುಗಳ ಆರೋಗ್ಯಕ್ಕಾಗಿ ಸಾಕಷ್ಟು ಪೋಷಣೆ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ.

ಪ್ರೋಟೀನ್:- ಪ್ರೋಟೀನ್ ಭರಿತ ಆಹಾರಗಳು ಧನಾತ್ಮಕ ಸಾರಜನಕ ಸಮತೋಲಿತ ಆಹಾರವನ್ನು ರೂಪಿಸುತ್ತವೆ. ಅವು ವಯಸ್ಸಾದವರಲ್ಲಿ ಶಕ್ತಿಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ವಿಟಮಿನ್ D:- ಇದು ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುವುದರಿಂದ ಅತ್ಯಂತ ಪ್ರಮುಖವಾದ ಸೂಕ್ಷ್ಮ ಪೋಷಕಾಂಶಗಳಲ್ಲಿ ಇದೂ ಒಂದು. ಇದು ಸ್ನಾಯುವಿನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ, ಇಳಿವಯಸ್ಸಿನವರಲ್ಲಿ ಅಸಮತೋಲನದಿಂದಾಗಿ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ D ಯು ಪ್ರಾಥಮಿಕ ಮತ್ತು ನೈಸರ್ಗಿಕವಾಗಿ ನಮಗೆ ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಿಕೆಯಿಂದ ಲಭ್ಯವಾಗುತ್ತದೆ.

ವಿಟಮಿನ್ E:- ವಿಟಮಿನ್ E ಒಂದು ಉತ್ಕರ್ಷಣ ನಿರೋಧಕವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇವುಗಳು ಒಣಬೀಜ, ಬಾದಾಮಿ, ಸೂರ್ಯಕಾಂತಿ ಬೀಜಗಳು, ಕಡಲೆಬೀಜ, ಆವಕಾಡೊ, ಗೋಡಂಬಿ ಮತ್ತು ಬೆರಿಗಳಲ್ಲಿ ಇರುತ್ತದೆ. ಆಹಾರಗಳನ್ನು ಸೇವಿಸುವುದರಿಂದ ದೇಹದ ಸೂಕ್ಷ್ಮ ಪೋಷಕಾಂಶದ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ.

ಒಮೆಗಾ-3:- ಕೊಬ್ಬಿನ ಆಮ್ಲಗಳು, ವಿಟಮಿನ್ C, ವಿಟಮಿನ್ B6, ಸತು ಮತ್ತು ಫೋಲೇಟ್‌ನಂತಹ ಇತರ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಿಕೊಳ್ಳುವುದು ದೇಹದ ಆರೋಗ್ಯಕರ ವಯಸ್ಸಾಗುವಿಕೆಗೆ ಅವಶ್ಯಕವಾಗಿದೆ.

ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮವನ್ನು ಅಳವಡಿಸಿಕೊಳ್ಳುವ ಜನರು, ದೀರ್ಘ ಕಾಲ ಆರೋಗ್ಯವಾಗಿರುತ್ತಾರೆ ಮತ್ತು ಬಲವಾದ ಸ್ನಾಯುಗಳನ್ನು ಹೊಂದಿರುತ್ತಾರೆ ಎಂದು ಪೋಷಣೆಯ ಕುರಿತಾದ ಸಂಶೋಧನೆಗಳು ಮತ್ತು ವರದಿಗಳು ಖಚಿತಪಡಿಸುತ್ತದೆ.

Leave A Reply

Your email address will not be published.