ನಿದ್ದೆ ಸರಿಯಾಗಿ ಮಾಡದವರಿಗೆ ಮಕ್ಕಳಾಗುವುದಿಲ್ಲವೇ? ಇದು ಎಷ್ಟು ನಿಜ?

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಹುತೇಕ ಮಂದಿಗೆ ಮಕ್ಕಳಾಗದ ವಿಚಾರದಲ್ಲಿ ಸಮಸ್ಯೆಗಳು ಕಾಡುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ನಿದ್ದೆಯೇ ? ಈ ಬಗ್ಗೆ ಚರ್ಚಿಸುವುದಾದರೆ, ಪುರುಷರು ಸರಿಯಾಗಿ ನಿದ್ದೆ ಮಾಡದೆ ಇದ್ದರೂ ಈ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗಿದೆ.

ನಿದ್ದೆ ಎಷ್ಟು ಮುಖ್ಯವೆಂದು ನಮಗೆಲ್ಲರಿಗೂ ತಿಳಿದಿದೆ. ಒಬ್ಬ ವ್ಯಕ್ತಿ ಆರೋಗ್ಯಕರವಾಗಿ ಎಲ್ಲಾ ಆಯಾಮದಲ್ಲೂ ನೆಮ್ಮದಿಯಾಗಿರಲು ನಿದ್ದೆ ಬೇಕು. ಪ್ರತಿಯೊಬ್ಬ ಮನುಷ್ಯ ಅಂದಾಜು ಪ್ರತಿದಿನ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಬೇಕು.

ಅದರಲ್ಲಂತೂ ಪುರುಣರು ನಿದ್ರೆ ಮಾಡದೇ ಇದ್ದರೆ ಹಲವಾರು ಸಮಸ್ಯೆ ಉಂಟಾಗುತ್ತದೆ. ಪುರುಷರಿಗೆ ಲೈಂಗಿಕ ವಿಷಯದಲ್ಲಿ ಆಸಕ್ತಿ ಕಡಿಮೆಯಾಗುವುದು, ಉದ್ರೇಕ ಇಲ್ಲದೆ ಆಗುವುದು, ಪುರುಷರಲ್ಲಿ ನಪುಂಸಕತ್ವ, ಶೀಘ್ರ ಸ್ಖಲನ ಇವೆಲ್ಲವೂ ಸಹ ಎದುರಾಗುವುದು ಎಂಬುವುದು ತಜ್ಞ ವೈದ್ಯರ ಸಲಹೆ.

ಆರೋಗ್ಯ ತಜ್ಞರು ಹೇಳುವ ಹಾಗೆ ಉತ್ತಮ ಗುಣಮಟ್ಟದ ನಿದ್ರೆ ಮಾಡುವುದರಿಂದ ಪುರುಷರ ದೇಹದಲ್ಲಿ ಟೆಸ್ಟೋಸ್ಟಿರೋನ್ ಗುಣಮಟ್ಟ ಹೆಚ್ಚಾಗುತ್ತದೆ. ಅದರಲ್ಲೂ ಯಾರು ಗಾಢವಾಗಿ ನಿದ್ರೆ ಮಾಡುತ್ತಾರೆ ಅವರಿಗೆ ಈ ಹಾರ್ಮೋನ್ ಹೆಚ್ಚು ಉತ್ಪತ್ತಿ ಕಾಣುತ್ತದೆ. ಇದು ಪುರುಷರ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಮುಖ್ಯವಾಗಿ ಪುರುಷರಿಗೆ ಶಿಶ್ನದ ನಿಮಿರುವಿಕೆಯಲ್ಲಿ ಸಹಾಯ ಮಾಡುತ್ತದೆ.

ಯಾರು ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡುವುದಿಲ್ಲ ಅವರಿಗೆ ಮಾನಸಿಕ ಸ್ಥಿತಿ ಹದಗೆಟ್ಟಿರುತ್ತದೆ. ಜೊತೆಗೆ ಲೈಂಗಿಕವಾಗಿ ಸಹ ಹೆಚ್ಚು ಚುರುಕುತನವನ್ನು ಹೊಂದಲು ಸಾಧ್ಯವಿರುವುದಿಲ್ಲ. ಯಾರು ಸರಿಯಾಗಿ ನಿದ್ರೆ ಮಾಡುವುದಿಲ್ಲ ಅವರಲ್ಲಿ ಟೆಸ್ಟೋಸ್ಟಿರೋನ್ ಗಣನೀಯವಾಗಿ ಶೇಕಡ 70% ಕಡಿಮೆಯಾಗುತ್ತದೆ. ವೀರ್ಯಾಣುಗಳು ಸರಿಯಾಗಿ ಬಿಡುಗಡೆ ಕೂಡ ಆಗುವುದಿಲ್ಲ. ಇದರಿಂದ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಒಂದು ವೇಳೆ ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಮ್ಮ ಸಂಗಾತಿಯ ಜೊತೆ ಉತ್ತಮ ಲೈಂಗಿಕ ಭಾಂದವ್ಯವನ್ನು ಹೊಂದಲು ಸಾಧ್ಯವಾಗದೆ ಹೋದರೆ, ಮೊದಲು ನಿಮ್ಮ ನಿದ್ರೆಯ ಗುಣಮಟ್ಟವನ್ನು ಆದಷ್ಟು ಬೇಗ ಹೆಚ್ಚಿಸಿಕೊಳ್ಳಿ. ಇದರಿಂದ ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ ಹಾಗೂ ನಿಮ್ಮ ಲೈಂಗಿಕ ಜೀವನವು ಸುಧಾರಿಸುತ್ತದೆ.

Leave A Reply

Your email address will not be published.