Dish TV OTT Offer : ಗಮನಿಸಿ, ಡಿಶ್ ಟಿವಿ ಕಂಪನಿಯಿಂದ ಧಮಾಕ ಆಫರ್ | ಅತಿ ಕಡಿಮೆ ದುಡ್ಡಿಗೆ ಹೆಚ್ಚಿನ ಸಿನಿಮಾ ಲಭ್ಯ!

ಕಾಲ ಎಷ್ಟೇ ಬದಲಾದರೂ ಕೂಡ ಮೊಬೈಲ್ ಎಂಬ ಸಾಧನ ಬಂದರೂ ಕೂಡ ಟಿ. ವಿ ಮುಂದೆ ಕುಳಿತು ಧಾರಾವಾಹಿ ನೋಡುವವರ ಸಂಖ್ಯೆ ಕಡಿಮೆಯಾಗದು. ಆದರೆ, ಈ ನಡುವೆ ದೂರದರ್ಶನಗಳಿಗಿಂತ (Television) ಒಟಿಟಿ ಪ್ಲಾಟ್‌ಫಾರ್ಮ್‌ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಹಾಗಾಗಿ,ಡಿಶ್‌ಟಿವಿ ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಪರಿಚಯಿಸುತ್ತಿದ್ದು, ಡಿಶ್‌ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ಹೊಸ ನಾಲ್ಕು ಒಟಿಟಿ ಬಂಡಲ್ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ.

ಪ್ರಸಿದ್ಧ ಡಿಟಿಹೆಚ್‌ (DTH) ಪ್ರೊವೈಡರ್‌ ಸಂಸ್ಥೆಯಾಗಿರುವ ಡಿಶ್‌ ಟಿವಿ (Dish TV) ತನ್ನದೇ ಆದ ಪ್ಲಾಟ್‌ಫಾರ್ಮ್‌ನಲ್ಲಿ (Platform) ಹೊಸದಾಗಿ ಒಟಿಟಿ (OTT) ಯೋಜನೆಗಳನ್ನು ಪರಿಚಯಿಸುವ ಯೋಜನೆಯನ್ನು ಮಾಡಿಕೊಂಡಿದೆ.

ಒಟಿಟಿ ಪ್ಲಾಟ್‌ಫಾರ್ಮ್‌ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿರುವುದನ್ನು ಡಿಶ್‌ ಟಿವಿ ಗಮನದಲ್ಲಿಟ್ಟುಕೊಂಡು ಡಿಸ್ನಿ + ಹಾಟ್‌ ಸ್ಟಾರ್‌ (Disney+Hotstar), ಝೀ 5 (Zee5) ಮತ್ತು ಲಯನ್ಸ್‌ಗೇಟ್‌ (Lionsgate) ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಗ್ರಾಹಕರಿಗೆ ಬಂಡಲ್‌ ಆಗಿ ನೀಡಲು ಮುಂದಾಗಿದೆ. ಇದರ ಜೊತೆಗೆ ಈ ಸಂಸ್ಥೆ ನಾಲ್ಕು ಹೊಸ ಒಟಿಟಿ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರು ವಾಚೊ (Watcho) ಅಪ್ಲಿಕೇಶನ್ (Application) ಮೂಲಕ ಈ ಹೊಸ ನಾಲ್ಕು ಒಟಿಟಿ ಯೋಜನೆಗಳಿಗೆ ಚಂದಾದಾರರಾಗಬಹುದಾಗಿದೆ.

ಡಿಶ್‌ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ಪರಿಚಯಿಸಿರುವ ಎಲ್ಲಾ ಹೊಸ ನಾಲ್ಕು ಒಟಿಟಿ ಬಂಡಲ್ ಯೋಜನೆಗಳ ಬಗ್ಗೆ ತಿಳಿಯುವುದಾದರೆ:

ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ತರಲಾಗಿರುವ ಹೊಸ OTT ಯೋಜನೆಗಳು:

49 ರೂಪಾಯಿಯ ಬೆಲೆಯ ವಾಚೊ ಮಿರ್ಚಿ ಪ್ಲಾನ್:

ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ತರಲಾಗಿರುವ ಅತ್ಯಂತ ಅಗ್ಗದ ಒಟಿಟಿ ಬಂಡಲ್ ಯೋಜನೆಯೆಂದರೆ ಅದು ವಾಚೊ ಮಿರ್ಚಿ ಪ್ಲಾನ್ . ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ಕೇವಲ 49 ರೂಪಾಯಿ ಹಣ ಪಾವತಿ ಮಾಡಿ ಚಂದಾದಾರರು ಆಗುವ ಅವಕಾಶವನ್ನು ನೀಡಿದೆ. ಡಿಶ್‌ ಟಿವಿ ವಾಚೊ ಒಟಿಟಿ ಪ್ಲಾನ್ಸ್ಡಿಶ್‌ ಟಿವಿ ಕಂಪೆನಿಯ ಸ್ವಂತ ವಾಚೊ ಅಪ್ಲಿಕೇಶನ್ ಹಂಗಾಮಾ ಪ್ಲೇ, ಎಪಿಕ್ ಆನ್, ಓಹೋ ಗುಜರಾತಿ ಮತ್ತು ಕ್ಲಿಕ್‌‌ ಎಂಬ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸಲು ಅನುಮತಿಸುತ್ತದೆ.

99 ರೂಪಾಯಿಯ ವಾಚೊ ಮಸ್ತಿ ಪ್ಲಾನ್:‌

ಸಾಮಾನ್ಯವಾಗಿ, 99 ರೂಪಾಯಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಚಂದಾದಾರರಾಗಲು ಯಾವ ಪ್ಲಾಟ್ ಫಾರ್ಮ್ ಕೂಡ ಅನುಮತಿ ನೀಡುವುದಿಲ್ಲ. ಆದರೆ ಈ ಡಿಶ್‌ ಟಿವಿಯ ವಾಚೊ ಮಸ್ತಿ ಪ್ಲಾನ್‌ ಝೀ 5 ವನ್ನು ಕಡಿಮೆ ಬೆಲೆಗೆ ಸಬ್‌ಸ್ಕ್ರಿಪ್ಷನ್‌ ಮಾಡುವ ಯೋಜನೆ ನೀಡಿದ್ದು, ಇನ್ನು ಈ ಯೋಜನೆ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಝೀ 5, ವಾಚೊ, ಹೊಯ್ಚೊಯ್, ಹಂಗಾಮಾ ಪ್ಲೇ, ಎಪಿಕ್‌ ಆನ್‌, ಚೌಪಾಲ್, ಓಹೋ ಗುಜರಾತಿ ಮತ್ತು ಕ್ಲಿಕ್ ಇ ರೀತಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸಬಹುದಾಗಿದೆ.

199 ರೂಪಾಯಿಯ ವಾಚೊ ಧಮಾಲ್‌ ಪ್ಲಾನ್:

10 ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಒಟಿಟಿ ಬಂಡಲ್ ಯೋಜನೆ ಇದಾಗಿದ್ದು, ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್, ಝೀ 5, ವಾಚೊ, ಲಯನ್ಸ್‌ಗೇಟ್ ಪ್ಲೇ, ಹೊಯ್ಚೊಯ್, ಹಂಗಾಮಾ ಪ್ಲೇ, ಎಪಿಕ್ ಆನ್, ಚೌಪಾಲ್, ಓಹೋ ಗುಜರಾತಿ ಮತ್ತು ಕ್ಲಿಕ್ ಪ್ಲಾಟ್‌ಫಾರ್ಮ್‌ಗಳ ವೀಕ್ಷಿಸಬಹುದಾಗಿದೆ.

299 ರೂಪಾಯಿಯ ವಾಚೊ ಮ್ಯಾಕ್ಸ್‌ ಪ್ಲಾನ್:

ಡಿಶ್‌ ಟಿವಿ ತಂದಿರುವ ಅತ್ಯಂತ ದುಬಾರಿ ಒಟಿಟಿ ಬಂಡಲ್ ಯೋಜನೆ ಇದಾಗಿದ್ದು, ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಸೋನಿ ಲೈವ್, ಡಿಸ್ನಿ+ ಹಾಟ್‌ಸ್ಟಾರ್, ಝೀ5, ವಾಚೊ, ಲಯನ್ಸ್‌ಗೇಟ್ ಪ್ಲೇ, ಹೊಯ್ಚೊಯ್, ಹಂಗಾಮಾ ಪ್ಲೇ, ಎಪಿಕ್ ಆನ್, ಚೌಪಾಲ್, ಓಹೋ ಗುಜರಾತಿ ಮತ್ತು ಕ್ಲಿಕ್ ಪ್ಲಾಟ್‌ಫಾರ್ಮ್‌ಗಳ ವೀಕ್ಷಣೆ ಮಾಡಲು ಅವಕಾಶವಿದೆ.

ಡಿಶ್‌ ಟಿವಿ ಕಂಪೆನಿ ಈ ಒಟಿಟಿ ಬಂಡಲ್ ಯೋಜನೆಯ ಜೊತೆಗೆ, ವಾಚೊ ಡಿಶ್‌ ಟಿವಿ, ಡಿ2ಹೆಚ್ ಮತ್ತು ಸಿಟಿ ಕೇಬಲ್ ಚಂದಾದಾರರಿಗೆ ಸೀಮಿತ ಅವಧಿಗೆ ವಿಶೇಷ ಆಫರ್‌ನ ಕೊಡುಗೆಯನ್ನು ಸಹ ಪ್ರಾರಂಭಿಸಿದ್ದು, ಈ ಕೊಡುಗೆಯ ಅಡಿಯಲ್ಲಿ ಬಳಕೆದಾರರು ಒಂದು ತಿಂಗಳವರೆಗೆ ಹೊಸ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ಹಾಗೆಯೇ, ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿರುವ ಕಂಟೆಂಟ್ ಅನ್ನು ಮೊಬೈಲ್‌, ಟ್ಯಾಬ್, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಯಲ್ಲಿಯೂ ಸಹ ವೀಕ್ಷಿಸಬಹುದಾಗಿದೆ.

Leave A Reply

Your email address will not be published.