Vegetable Price : ಕುಸಿಯಿತು ತರಕಾರಿ ರೇಟ್ | ಇಂದಿನ ಮಾರುಕಟ್ಟೆ ದರ ಇಲ್ಲಿದೆ

ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ ಆದರೆ ತರಕಾರಿಯ ಬೆಲೆ ಹಬ್ಬದ ಸಮಯದಲ್ಲಿ ಕೈಗೆಟುಕದ ದರದಲ್ಲಿ ಇತ್ತು.ಈಗಾಗಲೇ ನವರಾತ್ರಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿಗಳ ಬೆಲೆಯಲ್ಲಿ ಕಲಬುರಗಿಯಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ. ಬದನೆಕಾಯಿ, ಮೆಣಸಿಕಾಯಿ ಹೊರತುಪಡಿಸಿದರೆ ಬಹುತೇಕ ತರಕಾರಿ ದರ ಇಳಿಮುಖವಾಗಿದೆ.

ತರಕಾರಿ ಪ್ರಿಯರಿಗೆ ಇದೊಂದು ಸಿಹಿ ಸುದ್ದಿ ಆಗಿದೆ. ಹಬ್ಬ ಹರಿದಿನಗಳು ಬಂದ್ರೆ ತರಕಾರಿ ಬೆಲೆ ಗಗನಕೇರಿಬಿಡುತ್ತದೆ. ದುಬಾರಿ ರೇಟ್ ಗ್ರಾಹಕರನ್ನ ನಿಬ್ಬೆರಗಾಗಿಸುತ್ತದೆ. ಹಬ್ಬ ಮುಗಿಯುತ್ತಿದ್ದಂತೆ ಕಲಬುರಗಿಯಲ್ಲಿ ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ.

ಈ ವಾರದ ಟೊಮೆಟೊ ಪ್ರತಿ ಕೆ.ಜಿಗೆ ರೂ.25ರಿಂದ 30ರವರೆಗೆ ಮಾರಾಟವಾಗುತ್ತಿದೆ. ಆಲೂಗಡ್ಡೆ , ಈರುಳ್ಳಿ ರೂ.35–40 ಇದ್ದರೆ. ಬೆಂಡೆಕಾಯಿ ಪ್ರತಿ ಕೆ.ಜಿಗೆ ರೂ.50ರಿಂದ ರೂ.60 ರಂತೆ ಮಾರಾಟವಾಗುತ್ತಿವೆ. ಬೀನ್ಸ್ ಕೂಡ ರೂ.80 ಇದೆ. ಹೂಕೋಸು ರೂ.60 ಕೆ.ಜಿ ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು ಬದನೆಕಾಯಿ, ಮೆಣಸಿನಕಾಯಿ, ದೊಣ್ಣಮೆಣಸಿನಕಾಯಿ, ಚವಳೆಕಾಯಿ, ಎಲೆಕೋಸು, ಈರುಳ್ಳಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದೆ. ಈ ತರಕಾರಿಗಳಲ್ಲಿ ಯಾವುದೇ ದರ ಕಡಿಮೆಯಾಗಿಲ್ಲ.

ಕಲಬುರಗಿಯ ತರಕಾರಿ ಮಾರ್ಕೆಟ್ ದರ ಪಟ್ಟಿ
ತರಕಾರಿಯ ಹೆಸರು ಪ್ರತಿ ಕೆಜಿಗೆ ದರ ( ರೂ.ಗಳಲ್ಲಿ)
ಈರುಳ್ಳಿ 30-35
ಟೊಮ್ಯಾಟೊ 25-30
ಬದನೆಕಾಯಿ 50-60
ಆಲೂಗಡ್ಡೆ 30-35
ಮೆಣಸಿನಕಾಯಿ 60-70
ಬೆಂಡೆಕಾಯಿ 50-60

ಈ ತರಕಾರಿಗಳ ಬೆಲೆಯನ್ನೂ ಒಮ್ಮೆ ಗಮನಿಸಿ
ತರಕಾರಿಯ ಹೆಸರು ಪ್ರತಿ ಕೆಜಿಗೆ ದರ ( ರೂ.ಗಳಲ್ಲಿ)
ದೊಡ್ಡಮೆಣಸಿನಕಾಯಿ 50-55
ಚವಳೆಕಾಯಿ 40-50
ಬೀನ್ಸ್ 80-85
ಹೀರೆಕಾಯಿ 40-50
ಎಲೆಕೋಸು 40-50
ಸೌತೆಕಾಯಿ 40-50
ಗಜ್ಜರಿ 40-50
ಹೂಕೋಸು 60-70

ಪಾಲಕ್‌, ರಾಜಗಿರಿ ರೂ. 10ಗೆ ಒಂದು ಕಟ್ಟು, ರೂ. 20 ಕ್ಕೆ 3 ಕಟ್ಟು ಸೊಪ್ಪಿನಂತೆ ದರ ನಿಗದಿ. ಕೊತ್ತಂಬರಿ ರೂ.20–25 ಒಂದು ಕಟ್ಟು, ಪುದೀನಾ ರೂ. 15 ಒಂದು ಕಟ್ಟಿನಂತೆ ದರ ನಿಗದಿ ಮಾಡಲಾಗಿದೆ.

Leave A Reply

Your email address will not be published.