PUC ವಿದ್ಯಾರ್ಥಿಗಳೇ ಗಮನಿಸಿ : ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ರೂ.20ಸಾವಿರ ಸ್ಕಾಲರ್ಶಿಪ್ ಪಡೆಯಿರಿ!!!

ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮುಂದುವರೆಸಲು ಸಹಾಯ ಮಾಡುವ ಉದ್ದೇಶದಿಂದ ವಹಾನಿ ವಿದ್ಯಾರ್ಥಿವೇತನವನ್ನು ಟ್ರಸ್ಟ್‌ ಮೂಲಕ ನೀಡಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ವಹಾನಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಈ ವಿದ್ಯಾರ್ಥಿವೇತನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 01, 2022 ಕೊನೆಯ ದಿನವಾಗಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಬಹುದು.

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ವಸತಿ ಶುಲ್ಕ, ಲ್ಯಾಪ್‌ಟಾಪ್, ಅಧ್ಯಯನ ಸಾಮಗ್ರಿಗಳಿಗೆ ಸ್ಟೈಫಂಡ್ ಹಾಗೂ ಪ್ರಯಾಣದ ಟಿಕೆಟ್ ವೆಚ್ಚವನ್ನು ನೀಡಲಾಗುತ್ತದೆ.

ದೇಶಾದ್ಯಂತ ಆಯ್ಕೆಯಾದ 30 ರಿಂದ 50 ವಿದ್ಯಾರ್ಥಿಗಳಿಗೆ 20 ಸಾವಿರದ ವರೆಗೆ ಸ್ಕಾಲರ್‌ಶಿಪ್‌ ಕೂಡ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು ಹಾಗೂ ಪ್ರಸ್ತುತ 12ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರಬೇಕು. ಇದಲ್ಲದೆ,10 ಮತ್ತು 11ನೇ ತರಗತಿ ಪರೀಕ್ಷೆಗಳಲ್ಲಿ ಶೇಕಡಾ 85 ರಷ್ಟು ಅಂಕ ಗಳಿಸಿರಬೇಕಾಗಿರುತ್ತದೆ. ಇದರ ಜೊತೆಗೆ ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಹೀಗಿವೆ:

ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, 10 ಮತ್ತು 11ನೇ ತರಗತಿ ಮಾರ್ಕ್ಸ್‌ ಕಾರ್ಡ್‌, ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಜೊತೆಗೆ ಅವರ ಕುಟುಂಬದ ಫೋಟೋ ಹಾಗೂ ಬ್ಯಾಂಕ್‌ ಪಾಸ್‌ಬುಕ್ ಪ್ರತಿ ಬೇಕಾಗಿದೆ.

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಪದವಿಪೂರ್ವ ಹಾಗೂ ಪದವಿ ಕೋರ್ಸ್‌ಗಳಿಗೆ ಸಂಪೂರ್ಣ ಬೋಧನಾ ಶುಲ್ಕವನ್ನು ಮತ್ತು ವಸತಿ ಶುಲ್ಕವನ್ನು ನೀಡಲಾಗುತ್ತದೆ.ಇವುಗಳ ಜೊತೆಗೆ ಲ್ಯಾಪ್‌ಟಾಪ್ ಮತ್ತು ಅಧ್ಯಯನ ಸಾಮಗ್ರಿಗಳಿಗೆ ಸ್ಟೈಫಂಡ್‌ ಮತ್ತು ಪ್ರಯಾಣದ ವೆಚ್ಚವನ್ನು ಪಡೆಯಬಹುದಾಗಿದೆ.

ಕೋರ್ಸ್‌ ಮುಗಿದ ನಂತರ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳು, ವೃತ್ತಿ ಸಲಹೆಗಾರರು ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಕೆಲಸ ಮಾಡುವ ವೃತ್ತಿಪರರ ಮಾರ್ಗದರ್ಶನ, ಕಾರ್ಯಗಾರ, ಇಂಗ್ಲಿಷ್‌ ತರಗತಿ, ಕಂಪ್ಯೂಟರ್ ತರಬೇತಿ ಸೇರಿದಂತೆ ಇನ್ನಿತರ ತರಬೇತಿಯನ್ನು ಕೂಡ ನೀಡಲಾಗುತ್ತದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಬೇಕಾಗಿದ್ದು, ಆಸಕ್ತ ಅಭ್ಯರ್ಥಿಗಳು ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

Leave A Reply

Your email address will not be published.