PMJJBY : ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ!

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆಯನ್ನು 2015ರ ಬಜೆಟ್​​ನಲ್ಲಿ ಹಣಕಾಸು ಸಚಿವರು ಘೋಷಿಸಿದ್ದರು. ಕೋಲ್ಕತ್ತಾದಲ್ಲಿ ಅದೇ ವರ್ಷ ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದರು.

18ರಿಂದ 50 ವರ್ಷ ವಯಸ್ಸಿನವರು ಪಿಎಂಜೆಜೆಬಿವೈ ಯೋಜನೆಯಡಿ ಜೀವ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ಜೀವ ವಿಮೆ ಮಾಡಿಸಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕು. ವಾರ್ಷಿಕವಾಗಿ 436 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ ಮತ್ತು ಇದಕ್ಕೆ ಜಿಎಸ್​ಟಿಯಿಂದ ವಿನಾಯಿತಿ ಇದೆ.

12 ತಿಂಗಳ ಅವಧಿಯ ವಿಮೆ ಇದಾಗಿದ್ದು, ಜೂನ್ 1ರಿಂದ ಮೇ 31ರ ವರೆಗಿದೆ. ಸ್ವಯಂ ಪಾವತಿ ವ್ಯವಸ್ಥೆ ಅಳವಡಿಸಿಕೊಂಡರೆ ಪ್ರತಿ ವರ್ಷ 436 ರೂ. ವಿಮೆಗೆ ಮೇ 31ರಂದು ಪಾವತಿಯಾಗುತ್ತದೆ. ಎಲ್ಲ ಬ್ಯಾಂಕ್​ಗಳ ನೆಟ್​ ಬ್ಯಾಂಕಿಂಗ್ ವಿಭಾಗದಲ್ಲಿ ಈ ವಿಮೆ ಮಾಡಿಸಿಕೊಳ್ಳುವ ಅವಕಾಶವಿದೆ.

55 ವರ್ಷ ವಯಸ್ಸಿನವರೆಗೆ ಅಟೋ ರಿನೀವಲ್ ಮಾದಲಗುತ್ತದೆ. ಹಾಗೆಂದು 50 ವರ್ಷ ಮೇಲ್ಪಟ್ಟವರು ಮೊದಲ ಬಾರಿ ಈ ವಿಮೆಗೆ ನೋಂದಣಿ ಮಾಡಿಸಿಕೊಳ್ಳಲಾಗುವುದಿಲ್ಲ. ವಿಮೆ ಮಾಡಿಸಿಕೊಂಡವರು ಮೃತಪಟ್ಟಲ್ಲಿ, ಅವರು ನಾಮನಿರ್ದೇಶನ ಮಾಡಿರುವವರಿಗೆ (ನಾಮಿನಿ) 2 ಲಕ್ಷ ರೂ. ಪರಿಹಾರ ಮೊತ್ತ ದೊರೆಯಲಿದೆ.

ವಿಮೆ ನೋಂದಣಿ ಮಾಡಿಕೊಂಡ 45 ದಿನಗಳ ಮೊದಲು ಅಪಘಾತವನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಸಾವು ಸಂಭವಿಸಿದರೆ ಪರಿಹಾರ ದೊರೆಯುವುದಿಲ್ಲ. 45 ದಿನಗಳ ನಂತರವಾದರೆ ಸಿಗುತ್ತದೆ.

Leave A Reply

Your email address will not be published.