ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಪು ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಪು ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದೊಂದಿಗೆ ಒಡಿಯೂರು ಗುರುದೇವ ಕಲ್ಯಾಣ ಮಂಟಪ ಕನ್ಯಾನದಲ್ಲಿ ಆದಿತ್ಯವಾರದಂದು ನಡೆಯಿತು. ಕಾರ್ಯಕ್ರಮವೂ ಶ್ರೀ ಸತ್ಯನಾರಾಯಣ ಪೂಜೆ ಯೊಂದಿಗೆ ಪ್ರಾರಂಭಗೊಂಡು ಶ್ರೀ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮಿಜಿ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಯೋಜನೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಾಶಯಗಳನ್ನು ತಿಳಿಸಿ ಆಶೀರ್ವದಿಸಿದರು.

ಶ್ರೀ ಸತ್ಯನಾರಾಯಣ ಭಟ್ ಆಡಳಿತ ಮೋಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪದ್ಯಾಣ ಇವರು ಧಾರ್ಮಿಕ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ದ.ಕ ಜಿಲ್ಲೆ. ಯೋಜನೆಯ ಮಾಹಿತಿ,ಕಾರ್ಯವೈಖರಿ, ಸೌಲಭ್ಯಗಳ ಮಾಹಿತಿಯೊಂದಿಗೆ ಅತಿಥಿ ನುಡಿಗಳನ್ನಾಡಿದರು. ವಲಯದ ಮೇಲ್ವಿಚಾರಕರಾದ ಶ್ರೀ ಜಗದೀಶ್ ಅವರು ವಲಯದ ಸಾಧನೆ ವರದಿ ಮಂಡಿಸಿದರು. ಶ್ರೀ ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು, ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಅಬ್ದುಲ್ ರಹಿಮಾನ್ ಅಧ್ಯಕ್ಷರು ಗ್ರಾಮ ಪಂಚಾಯತು ಕನ್ಯಾನ ಇವರು ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ರಘುರಾಮ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತು ಕನ್ಯಾನ, ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ , ಗೌರವ ಉಪಸ್ಥಿತರಿದ್ದರು. ವಲಯಧ್ಯಕ್ಷರಾದ ಶ್ರೀ ಜಯಾನಂದ ಕಣಿಯೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದರು. ವಲಯದ ಎಲ್ಲಾ ಒಕ್ಕೂಟದ ಸೇವಾ
ಪ್ರತಿನಿಧಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಶ್ರೀ ಚೆನ್ನಪ್ಪ ಗೌಡ ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ತಾಲೂಕು ಸ್ವಾಗತಿಸಿ,ಸ್ಧಳೀಯ ಸೇವಾ ಪ್ರತಿನಿಧಿ ಪವಿತ್ರ ಧನ್ಯವಾದ ತಿಳಿಸಿ, ಬೇಡಗುಡ್ಡೆ ಒಕ್ಕೂಟದ ಕಾರ್ಯದರ್ಶಿ, ಅಧ್ಯಾಪಕರಾದ ಶ್ರೀ ರಘನಾಥ್
ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ, ಪ್ರಗತಿಪರ ಕೃಷಿಕ ಶರಣ್ ರೈ ಕೇಪು ,ಹಿರಿಯ ನಾಟಿ ವೈದ್ಯೆ ಪ್ರಸೂತಿ ತಜ್ಞೆ ಶ್ರೀಮತಿ ಲಕ್ಷ್ಮೀ ಬೇಡಗುಡ್ಡೆ ಇವರ ಸಾಧನೆಯನ್ನು ಗುರುತಿಸಿ ಗೌರವಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮ ಮುಕ್ತಾಯ ಹಂತವಾಗಿ ಸಭಾಕಾರ್ಯಕ್ರಮ ಮುಗಿದ ಕೂಡಲೇ ವಲಯದ ಎಲ್ಲಾ ಒಕ್ಕೂಟದ ಸದಸ್ಯರಿಂದ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ನಡೆಸಲಾಯಿತು.

Leave A Reply

Your email address will not be published.