Anirudh Jatkar : ಜೊತೆಜೊತೆಯಲಿ ತಂಡದೊಂದಿಗೆ ಅನಿರುದ್ಧ | ಏನಿದು ಹೊಸ ವಿಷಯ?

‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಇಡೀ ಕರುನಾಡಿನ ಪ್ರೇಕ್ಷಕರನ್ನು ರಂಜಿಸಿದ ಅನಿರುದ್ಧ ಜತ್ಕರ್ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ ತಂಡದ ಕಲಾವಿದರನ್ನು ಭೇಟಿ ಆಗಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಹೊಂದಿರುವ ಇವರು ನಟನೆ ಮಾತ್ರವಲ್ಲದೇ, ಸಾಮಾಜಿಕ ಕಳಕಳಿ ಮೂಲಕವೂ ಅನಿರುದ್ಧ ಗುರುತಿಸಿಕೊಂಡು ಅಭಿಮಾನಿಗಳ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ.

ಈಗ ಅನಿರುದ್ಧರವರು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಆ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಆದರೆ ಇತ್ತೀಚೆಗೆ ಅವರು ‘ತುಂಬಾ ದಿನಗಳ ನಂತರ ಭೇಟಿ ಮಾಡಿದ ಕ್ಷಣ’ ಎಂದು ಚಂದದ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಏಕಾಏಕಿ ‘ಜೊತೆ ಜೊತೆಯಲಿ’ ಟೀಮ್ ಕಲಾವಿದರೊಂದಿಗೆ ಕಾಣಿಸಿಕೊಂಡಿದ್ದೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಇವರ ಭೇಟಿಗೆ ಕಾರಣ ಏನು ಗೊತ್ತಾ? ಇಲ್ಲಿದೆ ಉತ್ತರ.

ಅಸಲಿ ವಿಷಯ ಏನೆಂದರೆ ಭೇಟಿಯಾಗಲು ಕಾರಣ ಆಗಿದ್ದು ಒಂದು ಶುಭ ಸಮಾರಂಭ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮೀರಾ ಎಂಬ ಪಾತ್ರದ ನಟಿ ಮಾನಸಾ ಮನೋಹ‌ ಅವರ ಸಹೋದರನ ನಿಶ್ಚಿತಾರ್ಥವು ಭಾನುವಾರ (ನ.6)ದಂದು ನೆರವೇರಿತು. ಆ ಶುಭ ಕಾರ್ಯಕ್ಕೆ ಅನೇಕ ಕಲಾವಿದರು ಸಾಕ್ಷಿ ಆಗಿದ್ದರು. ನಟ ಅನಿರುದ್ಧ ಮತ್ತು ಅವರ ಪತ್ನಿ ಕೀರ್ತಿ ಕೂಡ ಈ ಸಮಾರಂಭದಲ್ಲಿ ಭಾಗಿ ಆಗಿದ್ದೂ, ಈ ವೇಳೆ ‘ಜೊತೆ ಜೊತೆಯಲಿ’ ತಂಡದ ಕಲಾವಿದರು ಕೂಡ ಹಾಜರಿದ್ದರು. ಆಗ ಎಲ್ಲರೂ ಈ ಗ್ರೂಪ್ ಫೋಟೋಗೆ ಜೊತೆ ಸೇರಿ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಅನಿರುದ್ಧ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇದೀಗ ವೈರಲ್ ಆಗುತ್ತಿದೆ.

ಅಪಾರ ಅಭಿಮಾನಿಗಳನ್ನು ಹೊಂದಿರುವ ಅನಿರುದ್ಧ ಹಾಕಿರುವ ಈ ಪೋಸ್ಟ್ ಗೆ ಹಲವಾರು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ನೀವು ಇಲ್ಲದ ಜೊತೆ ಜೊತೆಯಲಿ ಸೀರಿಯಲ್, ರಾಜನಿಲ್ಲದ ರಾಜ್ಯದಂತೆ’ ಎಂದು ಅಭಿಮಾನಿಯೊಬ್ಬರು ಪ್ರೀತಿ ತೋರಿಸುವ ಮೂಲಕ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ನಿಮ್ಮೆಲ್ಲರನ್ನೂ ಒಂದೇ ಫ್ರೇಮ್‌ನಲ್ಲಿ ನೋಡಿ ನಮಗೂ ಖುಷಿ ಆಯ್ತು’ ಎಂದು ಕಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನಿರುದ್ಧ ಪರಿಸರದ ಕಾಳಜಿ ಇರುವಂತಹ ಅನೇಕ ಪೋಸ್ಟ್‌ಗಳು, ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಮತ್ತು ನೈರ್ಮಲ್ಯದ ಬಗ್ಗೆ ಆಗಾಗ ಮಾಹಿತಿ ಹಂಚಿಕೊಳ್ಳುತ್ತಾರೆ.

Leave A Reply

Your email address will not be published.