ಜಾನುವಾರು ಸಾಗಾಣಿಕೆಗೆ ಇನ್ನು ಮುಂದೆ ಇದು ಕಡ್ಡಾಯ – ರಾಜ್ಯ ಸರಕಾರ ಆದೇಶ

ಜಾನುವಾರುಗಳನ್ನು ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಇನ್ನು ಮುಂದೆ ಆನ್ಲೈನ್ ಪಾಸ್ ಪರ್ಮಿಟ್ ಇದ್ದರೆ ಮಾತ್ರ ಸಾಧ್ಯ. ಕರ್ನಾಟಕ ಜಾನುವಾರುಗಳ ವಧೆ ತಡೆ ಮತ್ತು ಸಂರಕ್ಷಣೆ (ಜಾನುವಾರುಗಳ ಸಾಗಾಣಿಕೆ) (ತಿದ್ದುಪಡಿ) ನಿಯಮಗಳು, 2022ರ ಕರಡನ್ನು ಸಾರ್ವಜನಿಕ ಪರಿಶೀಲನೆಗಾಗಿ ಸರ್ಕಾರ ಆದೇಶ ಹೊರಡಿಸಿದೆ.

ಜಾನುವಾರುಗಳನ್ನು ಕೃಷಿ ಚಟುವಟಿಕೆಗಳಿಗೆ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಯಾವುದೇ ರೀತಿಯ ಸಾರಿಗೆ ಸಾಧನಗಳಲ್ಲಿ ಸಾಗಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಡೆದ ಆನೈನ್ ಜಾನುವಾರು ಪಾಸ್ ಪರವಾನಗಿ ಇದ್ದರೆ ಮಾತ್ರ ಸಾಗಿಸಲು ಅನುಮತಿ ಎಂದು ಹೊಸ ಕರಡು ನಿಯಮಗಳಲ್ಲಿ ಸರ್ಕಾರ ಹೇಳಿದೆ.

ಹೊಸ ಜಾನುವಾರು ಪಾಸ್ ಪರ್ಮಿಟ್ ವ್ಯವಸ್ಥೆಯು ಸಾರಿಗೆ ಪ್ರಮಾಣಪತ್ರ, ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಸಾಧನಗಳನ್ನು ಒಳಗೊಂಡಿರುತ್ತದೆ.

ಆನ್ಲೈನ್ ಜಾನುವಾರು ಪಾಸ್ ಪರ್ಮಿಟ್‌ನೊಂದಿಗೆ ಜಾನುವಾರುಗಳನ್ನು ಪ್ರಾಮಾಣಿಕ ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಿಸುವಾಗ ಲಘು ವಾಣಿಜ್ಯ ವಾಹನ (ಎಲ್ಸಿವಿ)ಗೆ ಅನ್ವಯವಾಗುವ ಜಿಎಸ್ಟಿ ಮತ್ತು 50 ರೂ ಮತ್ತು ಭಾರಿ ವಾಣಿಜ್ಯ ಮೋಟಾರು (ಎಚ್ಛಿವಿ) ಗೆ ಅನ್ವಯವಾಗುವ ಜಿಎಸ್ಟಿಯನ್ನು ವಾಹನದ ಮಾಲೀಕರು ಪಾವತಿಸಬೇಕು ಎಂದು ಸರ್ಕಾರ ತಿಳಿಸಿದೆ.

ಸ್ಥಳೀಯ 15 ಕಿ.ಮೀ ಪ್ರದೇಶದಲ್ಲಿ ಪ್ರಾಣಿಗಳನ್ನು ಸಾಗಿಸಿದರೆ ಜಾನುವಾರು ಪಾಸ್ ಪರವಾನಗಿಯ ಅಗತ್ಯವಿಲ್ಲ ಎಂದು ಕರಡು ನಿಯಮಗಳು ತಿಳಿಸಿದೆ.

Leave A Reply

Your email address will not be published.