ಅನುಪಮಾ ಗೌಡ ತುಂಬಾ ಬದಲಾಗಿದ್ದಾಳೆ : ನೇಹಾ ಗೌಡ
ಬಿಗ್ ಬಾಸ್ -9 ಕನ್ನಡದ ಅತಿ ದೊಡ್ಡ ಶೋ. ಚೆನ್ನಾಗಿಯೇ ಸಾಗ್ತ ಇದೆ. ಈ ವಾರ ಅನುಪಮಾ ಗೌಡ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದರ ನಡುವೆಯೇ ಒಂದು ಎಲಿಮಿನೇಷನ್ ಕೂಡ ಆಯ್ತು. ನೇಹಾ ಗೌಡ ಮನೆಯಿಂದ ಔಟ್ ಆಗಿದ್ದಾರೆ.ಇವರು ಇದೀಗ ಒಂದು ಸಂದರ್ಶನದಲ್ಲಿ ” ಅನುಪಮಾ ಬದಲಾಗಿದ್ದಾಳೆ” ಎಂದು ಹೇಳಿದ್ದಾರೆ.
ಹೌದು. ಮನೆಯಲ್ಲಿ ತನ್ನನ್ನ ತಾನು ಪ್ರತಿಯೊಂದಕ್ಕೂ ತೊಡಗಿಸಿಕೊಂಡ ನೇಹಾ ಗೌಡ ಎಲಿಮಿನೇಟ್ ಆಗಿದ್ದಾರೆ. ಬೆನ್ನಲ್ಲೇ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ” ಬಿಗ್ ಬಾಸ್ 5 ಕ್ಕಿಂತ ಅನುಪಮಾ ತುಂಬಾ ಚೇಂಜ್ ಆಗಿದ್ದಾಳೆ. ಅಂದ್ರೆ ಪಾಸಿಟಿವ್ ಆಗಿ. ಜೀವನದಲ್ಲಿ ಸೀರಿಯಸ್ ಆಗಿದ್ದಾಳೆ. ಎಲ್ಲವೂ ಸ್ಪೋರ್ಟೀವ್ ಆಗಿ ತಾಗೊತ್ತಾಳೆ. ಈಗ ಮನೆ ಕ್ಯಾಪ್ಟನ್ ಬೇರೆ ಆಗಿದ್ದಾಳೆ. ಸಖತ್ ಆಡ್ತಾಳೆ” ಅಂತ ನೇಹಾ ಗೌಡ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅನುಪಮಾ ಗೌಡ ಮನೆಯವರಿಗೆಲ್ಲರಿಗು ಇಷ್ಟ ಆಗ್ತಾ ಇದ್ದಾಳೆ. ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಜಗಳ ಆಗುತ್ತೆ ನಂತರ ಆಕೆ ಕಾಂಪ್ರಮೈಸ್ ಆಗ್ತಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.