Book Air 13 laptop : ಲ್ಯಾಪ್‌ಟಾಪ್ ಡಿಸ್‌ಪ್ಲೇಯನ್ನು 360 ಡಿಗ್ರಿವರೆಗೆ ತಿರುಗಿಸುವ ಹೊಸ ಫೀಚರ್ | ಶಿಯೋಮಿ ಪರಿಚಯಿಸಿದೆ ಹೊಸ ಲ್ಯಾಪ್‌ಟಾಪ್!!!

ಶಿಯೋಮಿಯು ಟೆಕ್‌ ವಲಯದಲ್ಲಿ ಸ್ಮಾರ್ಟ್‌ಗ್ಯಾಜೆಟ್‌ಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಶಿಯೋಮಿ ಸ್ಮಾರ್ಟ್‌ಫೋನ್‌ (Xiaomi Smartphone) ತಯಾರಿಕೆಯಲ್ಲಿ ಬಹಳಷ್ಟು ಉನ್ನತ ಮಟ್ಟದಲ್ಲಿರುವ ಕಂಪೆನಿಯಾಗಿದೆ.

ಇದರ ನಡುವೆ ರೆಡ್ಮಿ ನೋಟ್ 12 ಸರಣಿ ಗ್ಯಾಜೆಟ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಇದರಲ್ಲಿ, ರೆಡ್ಮಿ ನೋಟ್ 12 5G, ನೋಟ್ 12 ಪ್ರೊ 5G, ನೋಟ್ 12 ಪ್ರೊ+ 5G ಮತ್ತು ನೋಟ್ 12 ಎಕ್ಸ್ಪ್ಲೋರರ್ ಆವೃತ್ತಿ ಸಹ ಸೇರಿವೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೀಡಿಯಾಟೆಕ್‌ ಡೈಮೆನ್ಸಿಟಿ 1080 SoC ನಲ್ಲಿ ಕಾರ್ಯನಿರ್ವಹಿಸಲಿವೆ.

ಇದರ ನಡುವೆ ಶಿಯೋಮಿ ‘ಬುಕ್ ಏರ್ 13’ ಎಂಬ ಹೊಸ ಲ್ಯಾಪ್‌ಟಾಪ್ ಅನ್ನು ಸಹ ಲಾಂಚ್‌ ಮಾಡಿದೆ. ಹೊಸ ಶಿಯೋಮಿ ಲ್ಯಾಪ್‌ಟಾಪ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಡಿಸ್‌ಪ್ಲೇಯನ್ನು ಸುಮಾರು 360 ಡಿಗ್ರಿವರೆಗೆ ತಿರುಗಿಸಲು ಅನುಕೂಲಕರವಾದ ರಚನೆ ಪಡೆದಿದೆ.

ಇದರ ವೈಶಿಷ್ಟ್ಯಗಳ ಬಗ್ಗೆ ಗಮನಿಸಿದರೆ, ಈ ಲ್ಯಾಪ್‌ಟಾಪ್‌ i7-1250U CPU ಹಾಗೂ i5-1230U ನ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಇಂಟೆಲ್‌ನ 12 ನೇ ತಲೆಮಾರಿನ ಸಿಪಿಯುಗಳ ಬಲದ ಜೊತೆಗೆ ಇಂಟೆಲ್ ಐರಿಶ್ Xe ಜಿಪಿಯು ಆಯ್ಕೆ ಇದರಲ್ಲಿದೆ. ಇನ್ನು 16GB RAM ಹಾಗೂ 512GB ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಈ ಲ್ಯಾಪ್‌ಟಾಪ್ ವಿಂಡೋಸ್ 11 ಅನ್ನು ರನ್ ಮಾಡುತ್ತದೆ.

ಬುಕ್ ಏರ್ 13 ಪ್ರಸ್ತುತ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದೆ. ಲ್ಯಾಪ್‌ಟಾಪ್‌ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯ ಇದ್ದು, ಇದರಲ್ಲಿ ಬುಕ್ ಏರ್ 13 ಕೋರ್ i5-1230U ವೇರಿಯಂಟ್‌ಗೆ CNY 4999 ಅಂದರೆ ಭಾರತದಲ್ಲಿ ಸುಮಾರು 57,000ರೂ. ಗಳಾಗಿವೆ.

ಹಾಗೆಯೆ ಕೋರ್ i7-1250U CPU ವೇರಿಯಂಟ್‌ಗೆ CNY 5599 ಅಂದರೆ 63,800ರೂ. ಗಳು ಆಗಿದೆ. ಶಿಯೋಮಿ ಬುಕ್ ಏರ್ 13 ಲ್ಯಾಪ್‌ಟಾಪ್ 58.3WHr ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 65W ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.

ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಥಂಡರ್‌ಬೋಲ್ಟ್ 4 ಪೋರ್ಟ್‌, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ವೈಫೈ-6E ,ಬ್ಲೂಟೂತ್ 5.2 ಆವೃತ್ತಿ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ.

ಈ ಲ್ಯಾಪ್‌ಟಾಪ್ 8MP ವೆಬ್‌ಕ್ಯಾಮ್ ಅನ್ನು ಹೊಂದಿದ್ದು, ಎರಡು ಮೈಕ್ರೊಫೋನ್‌ಗಳು ಮತ್ತು ದೊಡ್ಡ ಗಾಜಿನ ಟಚ್‌ಪ್ಯಾಡ್‌ನೊಂದಿಗೆ ಪ್ಯಾಕ್‌ ಆಗಿದೆ. ಕೀಬೋರ್ಡ್ ಬ್ಯಾಕ್‌ಲಿಟ್ ಫೀಚರ್ಸ್‌ ಹೊಂದಿದ್ದು, ಪವರ್ ಬಟನ್ ಸುತ್ತಲೂ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನೂ ಸಹ ನೀಡಲಾಗಿದೆ.

ಇನ್ನುಳಿದಂತೆ ಈ ಲ್ಯಾಪ್‌ಟಾಪ್ 1.2 ಕೆಜಿ ತೂಕ ಹೊಂದಿದ್ದು, 12 ಮಿಮೀ ದಪ್ಪ ಇದೆ. ಈ ಬುಕ್ ಏರ್ 13 ಲ್ಯಾಪ್‌ಟಾಪ್ 13.3 ಇಂಚಿನ E4 OLED ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 2880 x 1800 ಪಿಕ್ಸೆಲ್ ರೆಸಲ್ಯೂಶನ್ ನೀಡುತ್ತದೆ.

ಹಾಗೆಯೇ 16:10 ಆಕಾರ ಅನುಪಾತದ ಜೊತೆಗೆ 600nits ಬ್ರೈಟ್‌ನೆಸ್ ಫೀಚರ್ಸ್‌, ಪ್ರಮಾಣಿತ 60Hz ರಿಫ್ರೆಶ್ ರೇಟ್‌ ಫೀಚರ್ಸ್‌ ಪಡೆದಿದೆ. ಇದರೊಂದಿಗೆ ಈ ಡಿಸ್‌ಪ್ಲೇ ಟಚ್‌ ಸ್ಕ್ರೀನ್‌ ಫೀಚರ್ಸ್‌ ಪಡೆದಿದ್ದು, ಡಾಲ್ಬಿ ವಿಷನ್‌ಗೆ ಸಪೋರ್ಟ್‌ ಮಾಡುವುದರ ಜೊತೆಗೆ ತೆಳುವಾದ ಬೆಜೆಲ್‌ಗಳಿಂದ ಆವೃತವಾಗಿದೆ.

Leave A Reply

Your email address will not be published.