ಹೋಟೆಲ್ ಗಳಲ್ಲಿ ಬಿಳಿ ಬೆಡ್ ಶೀಟ್ ಯಾಕೆ ಬಳಸುತ್ತಾರೆ?

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಹಾಸಿಗೆಯ ಮೇಲೆ ಬಿಳಿ ಬೆಡ್ ಸ್ಪ್ರೆಡ್ / ಬಿಳಿ ಚಾದರವನ್ನು ಹಾಸುತ್ತಾರೆ. ವರ್ಣರಂಜಿತವಾದ ಬೆಡ್ ಸ್ಪ್ರೆಡ್ ಇರುವುದಿಲ್ಲ. ಇದರ ಕಾರಣಗಳೇನು ಅಂತ ನಿಮ್ಗೆ ಗೊತ್ತಾ?

ಶುಭ್ರಗೊಳಿಸಲು ಸುಲಭ
ಹೌದು. ಸಾಮಾನ್ಯವಾಗಿ ಬಿಳಿ ಬಟ್ಟೆಯನ್ನು ಒಗೆಯಲು, ಅದನ್ನು ಶುಭ್ರಮಾಡಲು ಕಷ್ಟ ಎಂದು ಜನರು ಅಂದುಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಬಿಳಿ ಬಟ್ಟೆಯನ್ನು ಆದಷ್ಟು ಸುಲಭವಾಗಿ ಕ್ಲೀನ್ ಮಾಡಬಹುದಾಗಿದೆ. ಕಲರ್ ಬೆಡ್ ಸ್ಪ್ರೆಡ್ ಇದ್ದರೇ ಅದಕ್ಕೆ ನೀಲಿ ಹಾಕಲು ಕಷ್ಟ. ಹಾಕಿದರು ಬಣ್ಣ ಬಿಡುತ್ತದೆ. ಹೀಗಾಗಿ ಬಿಳಿ ಬಟ್ಟೆಯಲ್ಲಿ ಎಲ್ಲಿ ಕಲೆಯಿದೆ ಎಂದು ತಕ್ಷಣ ಪತ್ತೆ ಹಚ್ಚಿ ಎಲ್ಲಾ ರೀತಿಯ ಕಲೆಗಳನ್ನು ಮಾಯಮಾಡಬಹುದು.

ಚಾದರವನ್ನು ಹಾಕುವ ಅಭ್ಯಾಸ ಯಾವಾಗಲೂ ಇರಲಿಲ್ಲ ಮತ್ತು ಅದು 90 ರ ದಶಕದ ನಂತರ ಪ್ರಾರಂಭವಾಯಿತು. 1990 ರ ಮೊದಲು, ಹೋಟೆಲ್ ಕೋಣೆಗಳ ಬೆಡ್‌ಶೀಟ್‌ಗಳ ಅವ್ಯವಸ್ಥೆಯನ್ನು ಮರೆಮಾಡಲು ಬಣ್ಣದ ಬೆಡ್​ಶೀಟ್​ಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು, ಆದರೆ 90 ರ ದಶಕದಲ್ಲಿ ಪಾಶ್ಚಿಮಾತ್ಯ ಹೋಟೆಲ್ ವಿನ್ಯಾಸಕರು ಕೋಣೆಗೆ ಐಷಾರಾಮಿ ನೋಟವನ್ನು ನೀಡಲು ಬಿಳಿ ಚಾದರವನ್ನು ಹಾಕಲು ಪ್ರಾರಂಭಿಸಿದರು.

ದೊಡ್ಡದಾಗಿ ಕಾಣುತ್ತದೆ
ನಿಜ. ಕೋಣೆ ತುಂಬಾ ಐಶಾರಾಮಿಯಂತೆ ಕಾಣುತ್ತದೆ. ಇದರ ಜೊತೆಗೆ ದೊಡ್ಡದಾಗಿ ಕಾಣುತ್ತದೆ. ಬಿಳಿ ಬಣ್ಣದ ಬಟ್ಟೆಯೂ ತುಂಬಾ ಶುಭ್ರವಾಗಿ ಕಾಣುತ್ತದೆ. ಆಕರ್ಷಣೆ ಇಂದ ಕಾಣುತ್ತದೆ.
ಹೀಗಾಗಿ ರೂಮ್ ಗಳಲ್ಲಿ ವೈಟ್ ಬಟ್ಟೆ ಹಾಕಿರುತ್ತಾರೆ.

Leave A Reply

Your email address will not be published.