ಅಬ್ಬಾ ಅದೃಷ್ಟವೋ ಅದೃಷ್ಟ | ಒಂದೇ ಕುಟುಂಬದ ಮೂವರಿಗೆ ಒಂದೇ ದಿನದಲ್ಲಿ ಹೊಡೆಯಿತು ಲಾಟರಿ| ಎಷ್ಟು ಮೊತ್ತ ಗೊತ್ತೇ?

ಯಾವಾಗ ಯಾರಿಗೆ ಹೇಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯುತ್ತಾಳೆ ಎಂದು ಹೇಳಲಾಗದು . ಅದೃಷ್ಟ ಅಂದರೆ ಇದಪ್ಪಾ!!! ಮನೆಯ ಒಬ್ಬರಿಗೆ ಲಕ್ಷಿ ಒಲಿಯುವುದು ಸಹಜ.. ಆದರೆ ಮನೆಯವ ಮೂವರಿಗೂ ಕೂಡ ಅದೃಷ್ಟದ ಬಾಗಿಲು ತೆರೆದಿದ್ದು, ಲಕ್ಷಿ ಕೈ ಹಿಡಿದಿದ್ದಾಳೆ.

ಕರ್ನಾಟಕದಲ್ಲಿ ಲಾಟರಿ ನಿಷೇಧವಿದ್ದು, ಭಾರತದ ಹಲವು ರಾಜ್ಯಗಳಲ್ಲೂ ಲಾಟರಿಯನ್ನು ನಿಷೇಧಿಸಲಾಗಿದೆ. ಲೋಟೋದಂಥ ಆನ್‌ಲೈನ್ ಜೂಜಾಟಕ್ಕೂ ಕೂಡ ಅನುಮತಿ ಇಲ್ಲ. ಆದರೆ ಈ ಲಾಟರಿ ಕಹಾನಿ ನಡೆದದ್ದು ಅಮೆರಿಕದಲ್ಲಿ!!

ಲಾಟರಿ ಒಂದು ಜೂಜಾಟದಂತೆ, ಅದೃಷ್ಟದ ಮೇಲೆ ನಿಂತಿರುವ ಆಟವಾಗಿದ್ದು, ಲಾಟರಿ ಆಡಿ ಗೆದ್ದವರು ವಿರಳವಾಗಿದ್ದರೂ ಕೂಡ ಗೆದ್ದವರನ್ನು ಮಾತ್ರ ಹೈಲೈಟ್ ಮಾಡಲಾಗುವುದರಿಂದ ಜನರು ಲಾಟರಿ ಕಡೆಗೆ ಸಹಜವಾಗಿ ಆಕರ್ಷಿತರಾಗುತ್ತಾರೆ. ಜೊತೆಗೆ, ಮುಂದೊಂದು ದಿನ ಜಾಕ್‌ಪಾಟ್ ಹೊಡೆದು ನಮ್ಮೆಲ್ಲ ಕಷ್ಟದ ದಿನಗಳು ಅಂತ್ಯ ಕಾಣುತ್ತವೆ ಎಂಬ ಭರವಸೆಯಿಂದ ಲಾಟರಿ ಹಣ ಹೂಡಿಕೆ ಮಾಡಿ ಮನೆ ಮಠ ಕಳೆದುಕೊಂಡ ಅನೇಕ ನಿದರ್ಶನಗಳಿವೆ.

ಆದರೆ ಒಂದೇ ಕುಟುಂಬದ ಮೂವರಿಗೆ ಸಮಾನವಾಗಿ ಅದೃಷ್ಟಲಕ್ಷ್ಮೀ ಒಲಿಯುತ್ತಾಳೆ ಎಂದರೆ ಅಚ್ಚರಿಯಾಗಬಹುದು!…

ಹೌದು!! ಅಮೆರಿಕದ ಒಂದೇ ಕುಟುಂಬದ ಮೂವರು ವ್ಯಕ್ತಿಗಳಿಗೆ ಅದೇ ಲಾಟರಿ ಕಂಪನಿಯ ಅದೇ ದಿನದ ಲಕಿ ಡ್ರಾ, ಅದೇ ನಂಬರ್, ಅದೇ ಮೊತ್ತದ ಬಹುಮಾನವನ್ನು ಪಡೆದಿರುವ ವಿಶೇಷ ಅಪರೂಪದ ಘಟನೆ ನಡೆದಿದೆ.

ಈ ಮೂವರಿಗೂ ಮೇರಿಲ್ಯಾಂಡ್ ಲಾಟರಿ ಡ್ರಾನಿಂದ 41 ಲಕ್ಷ ರೂಪಾಯಿಯ ನಗದು ಬಹುಮಾನ ದೊರೆತಿದೆ. ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಕುಟುಂಬದವರ ಅದೃಷ್ಟದ ಅಚ್ಚರಿಯ ಕಹಾನಿ..

ಕುಟುಂಬದ ಮೂವರಿಗೂ ಪರಸ್ಪರ ಲಾಟರಿ ಡ್ರಾ ಪ್ರಕಟ ಆಗುವವರೆಗೂ ತಮ್ಮ ಕುಟುಂಬದ ಇತರರಿಗೂ ತನ್ನಂತೆಯೇ ಬಂಪರ್ ಆಫರ್ ನಂತೆ ಅದೃಷ್ಟ ಕೈ ಹಿಡಿದಿದೆ ಎಂಬ ವಿಚಾರ ಗೊತ್ತೇ ಇರಲಿಲ್ಲ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ.

ಈ ಕುಟುಂಬದ ಹಿರಿಯ ಸದಸ್ಯ 61 ವರ್ಷದ ವ್ಯಕ್ತಿ ಅಕ್ಟೋಬರ್ 13ರಂದು ಹ್ಯಾಂಪ್‌ಸ್ಟೆಡ್ ಪಟ್ಟಣದಲ್ಲಿ ಮೇರಿಲ್ಯಾಂಡ್ ಲಾಟರಿ ಟಿಕೆಟ್ ಖರೀದಿಸಿದ್ದಾರೆ.

ಇವರ 31 ವರ್ಷದ ಮಗ ಮತ್ತು 28 ವರ್ಷದ ಮಗಳು ಬೇರೆ ಬೇರೆ ದಿನಗಳಲ್ಲಿ ಅದೇ ಲಾಟರಿ ಅಂಗಡಿಯಲ್ಲಿ ಅದೇ ಮುಖಬೆಲೆಯ ಲಾಟರಿಯನ್ನು ಖರೀದಿ ಮಾಡಿದ್ದಾರೆ. ಆದರೆ, ಈ ವಿಚಾರದ ಕುರಿತಾಗಿ ಪರಸ್ಪರರಿಗೆ ಈ ಮಾಹಿತಿ ತಿಳಿದಿರಲಿಲ್ಲ.

ಕಾಕತಾಳೀಯವೆಂದರೆ ಮೂವರಿಗೂ ಕೂಡ ಏಕರೀತಿಯ ನಂಬರ್ ಕಾಂಬಿನೇಶನ್ ಇರುವ ಲಾಟರಿಯೇ ದೊರೆತಿದೆ. ಅಕ್ಟೋಬರ್ 13ರಂದು ಡ್ರಾ ನಡೆದಾಗ ಇದೇ ಕಾಂಬಿನೇಶನ್‌ಗೆ ಬಹುಮಾನ ದೊರೆತಿದ್ದು. ಆಗಲೇ, ಮನೆಯ ಉಳಿದ ತಮ್ಮ ಕುಟುಂಬದ ಇತರ ಇಬ್ಬರು ಸದಸ್ಯರಿಗೂ ಇದೇ ಲಾಟರಿ ಬಹುಮಾನ ಎಂಬ ವಿಚಾರ ಬಹಿರಂಗವಾಗಿದೆ.

ಲಾಟರಿ ಗೆದ್ದ ಈ ಕುಟುಂಬದವರಲ್ಲಿ ಒಬ್ಬರು ಬಹುಮಾನದ ಹಣದಲ್ಲಿ ‍ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಆಲೋಚನೆಯಲ್ಲಿದ್ದಾರೆ. ಮತ್ತೊಬ್ಬರು ಹೊಸ ಮನೆಯನ್ನು ಖರೀದಿಸುವ ಇರಾದೆ ಇಟ್ಟುಕೊಂಡಿದ್ದಾರೆ.

Leave A Reply

Your email address will not be published.