ಭಾರತದಲ್ಲಿ ಮದುವೆ, ವಿಚ್ಛೇದನ, ದತ್ತು ತೆಗೆದುಕೊಳ್ಳುವಿಕೆ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ಕಾನೂನುಗಳು ಎಲ್ಲಾ ನಾಗರಿಕರಿಗೂ ಒಂದೇ ಆಗಿರಬೇಕು ಎಂದು ‘ ಏಕರೂಪ ನಾಗರಿಕ ಸಂಹಿತೆ’ ಯನ್ನು ಬಿಜೆಪಿ ಪ್ರಸ್ತಾಪ ಮಾಡಿದೆ. ಈ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿಯು ಹೌಹಾರಿದ್ದಾರೆ.
ಗುಜರಾತ್ ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಗಳಿಸಲು ಬಿಜೆಪಿ ಇದೀಗ ಏಕರೂಪ ನಾಗರಿಕ ಸಂಹಿತೆಯ ವಿಚಾರವನ್ನು ಪ್ರಸ್ತಾಪ ಮಾಡಿದೆ.
ಗುಜರಾತ್ ನ ಬಸಸ್ಕಾಂತ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, “ಏಕರೂಪ ನಾಗರಿಕ ಸಂಹಿತೆ ಸ್ವಯಂ ಪ್ರೇರಿತವಾಗಿರಬೇಕು ವಿನಃ ಕಡ್ಡಾಯವಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದು ನಿಜವಲ್ಲವೇ?
ಆದರೆ, ಬಿಜೆಪಿಯು ತನ್ನ ಹಿಂದುತ್ವದ ಅಜೆಂಡಾದೊಂದಿಗೆ ಮುಂದುವರಿಯಲು ಬಯಸುತ್ತದೆ. ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಅಗತ್ಯವಾದದ್ದೇನು ಅಲ್ಲ ಹಾಗೂ ಅಪೇಕ್ಷಿತವೂ ಅಲ್ಲ ಎಂದು 2018ರಲ್ಲಿ ಕಾನೂನು ಆಯೋಗ ಹೇಳಿದೆ. ಮುಸ್ಲಿಮನಿಗೆ ಮದುವೆ ಒಂದು ಒಪ್ಪಂದ, ಹಿಂದೂಗಳಿಗೆ ಅದು ಶಾಶ್ವತವಾಗಿ ಬದುಕುವುದು.
ಇದು ಭಾರತದ ಬಹುತ್ವವಾಗಿದೆ. ಯುಸಿಸಿಯನ್ನು ಜಾರಿಗೊಳಿಸುವ ಮೂಲಕ ಯಾರಾದರೂ ಆರ್ಟಿಕಲ್ 29 ರ ವಿರುದ್ಧ ಕಾನೂನನ್ನು ಮಾಡಬಹುದೇ?” ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಅವಿಭಜಿತ ಕುಟುಂಬದ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಯ ಪ್ರಯೋಜನದಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಏಕೆ ಹೊರಗಿಡಲಾಗಿದೆ .
ಇಂತಹ ಸೌಲಭ್ಯದಿಂದ ಏಕೆ ದೂರವಿಡಲಾಗಿದೆ ಎಂದು ನಾನು ಪ್ರಧಾನಿಯನ್ನು ಕೇಳಲು ಬಯಸುತ್ತೇನೆ ? ಇದು ಸಮಾನತೆಯಾ? ಸಮಾನತೆಯ ಹಕ್ಕಿಗೆ ವಿರುದ್ಧವಾಗಿಲ್ಲವೇ? ಎಂದು ಹೇಳಿದ್ದಾರೆ.