ಪ್ರೀತಿ ಕುರುಡು ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಆ ಮಾತಿಗೆ ತಕ್ಕಂತೆ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಪ್ರೇಮಿಗಳಿಗೆ ಬಣ್ಣ, ವಯಸ್ಸು, ಹಣ, ಅಂತಸ್ತು, ಜಾತಿ, ಧರ್ಮ ಯಾವುದು ಲೆಕ್ಕಕ್ಕೆ ಇರಲ್ಲ. ಪ್ರೀತಿ ಒಂದೇ ಶಾಶ್ವತ ಅನ್ನೋ ವೇದಾಂತ ಪ್ರೀತಿಸುವವರಿಗೆ.
ಹಾಗೆಯೇ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪಾಕಿಸ್ತಾನ ಮೂಲದ 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ತನ್ನ ಶಿಕ್ಷಕರೊಬ್ಬರನ್ನು ಪ್ರೀತಿಸಿ ಮದುವೆಯಾಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಲ್ಲದೆ ಇಬ್ಬರ ಲವ್ ಸ್ಟೋರಿಯೇ ತುಂಬಾ ರೋಚಕವಾಗಿದೆ.
ವಿದ್ಯಾರ್ಥಿನಿಯ ಹೆಸರು ಜೊಯಾ ನೂರ್ ಮತ್ತು ಶಿಕ್ಷಕನ ಹೆಸರು ಸಾಜಿದ್ ಅಲಿ. ‘ಇಬ್ಬರ ನಡುವೆ 32 ವರ್ಷ ವಯಸ್ಸಿನ ಅಂತರವಿದೆ. ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಜೊಯಾ, ಸಾಜಿದ್ ಪ್ರೀತಿಯ ಬಲೆಯಲ್ಲಿ ಬಿದ್ದು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾಳೆ.
ಪಾಲಕರು ಸೇರಿದಂತೆ ಸಾಕಷ್ಟು ವಿರೋಧದ ನಡುವೆಯೂ ಇಬ್ಬರು ಮದುವೆ ಆಗಿದ್ದಾರೆ. ಇಬ್ಬರು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ, ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಸಂದರ್ಶನದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜೊಯಾ ಸಾಜಿದ್ ಅವರ ವಿಭಿನ್ನ ವ್ಯಕ್ತಿತ್ವವೇ ಅವರ ಪ್ರೀತಿಯ ಬಲೆಯಲ್ಲಿ ಬೀಳಲು ಕಾರಣ ಎಂದಿದ್ದಾರೆ. ಮದುವೆ ಆಗುವ ಬಯಕೆಯನ್ನು ಅವರ ಮುಂದೆ ಪ್ರಸ್ತಾಪ ಮಾಡಿದೆ. ಆದರೆ, ಆರಂಭದಲ್ಲಿ ಅದನ್ನು ನಿರಾಕರಿಸಿದರು.
ನಮ್ಮಿಬ್ಬರ ನಡುವೆ 32 ವರ್ಷ ವಯಸ್ಸಿನ ಅಂತರವಿದೆ. ಹೀಗಾಗಿ ಮದುವೆ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ಇದಾದ ಬಳಿಕ ಒಂದು ವಾರ ಸಮಯ ಕೇಳಿದರು, ಆ ಸಮಯದಲ್ಲಿ ನನ್ನ ಮೇಲೆ ಪ್ರೀತಿಯಾಗಿ ಒಪ್ಪಿಕೊಂಡರು. ಆದರೆ, ಇಬ್ಬರ ಪ್ರೀತಿಗೆ ಎರಡು ಮನೆಯಿಂದ ವಿರೋಧ ಇತ್ತು. ಅಂತಿಮವಾಗಿ ಎಲ್ಲ ವಿರೋಧಗಳನ್ನು ಪಕ್ಕಕ್ಕಿಟ್ಟು ಇಬ್ಬರು ಮದುವೆ ಆದೆವು ಎಂದು ಜೊಯಾ ಹೇಳಿದ್ದಾರೆ.
ಮದುವೆಯ ಬಳಿಕ ಇಬ್ಬರು ಅಮೇಜಾನ್ ಎಫ್‌ಐಎ ತರಬೇತಿಯನ್ನು ಪಡೆದುಕೊಂಡೆವು, ಇದೀಗ ಇಬ್ಬರು ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದೇವೆ. ಬಿ.ಕಾಂ ಅಧ್ಯಯನದಿಂದ ಪಡೆದ ಜ್ಞಾನ ಮತ್ತು ತನ್ನ ಶಿಕ್ಷಕರ ಅನುಭವವನ್ನು ಒಟ್ಟುಗೂಡಿಸಿ ಉತ್ತಮ ಆದಾಯವನ್ನು ಗಳಿಸಲು ಪ್ರಾರಂಭಿಸಿರುವುದಾಗಿ ಜೊಯಾ ತಿಳಿಸಿದರು.
ಪ್ರತಿ ತಿಂಗಳು ಲಕ್ಷಾಂತರ ಸಂಪಾದನೆ ಮಾಡುತ್ತಾ ಇಬ್ಬರು ಸುಖಮಯ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಖುಷಿಯಿಂದ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.