ಗಮನಿಸಿ ಸಾರ್ವಜನಿಕರೇ | ತಿರುಪತಿಯ ದರ್ಶನದ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆ !!! ಏನದು? ಇಲ್ಲಿದೆ ಸಂಪೂರ್ಣ ವಿವರ!

ತಿರುಪತಿ ತಿಮ್ಮಪ್ಪನ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯವಾಗಿದೆ. ಇಲ್ಲಿಗೆ ಸಾವಿರಾರು ಭಕ್ತರು ಬಂದು ವೈಕುಂಠನಾಥನ ದರ್ಶನ ಪಡೆಯುತ್ತಾರೆ. ಇದೀಗ ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಬದಲಾವಣೆ ಮಾಡುವ ಬಗ್ಗೆ ದೇವಸ್ಥಾನವು ನಿರ್ಧರಿಸಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಪ್ರಸ್ತುತ ಮುಂಜಾನೆ 2.30ರಿಂದ ಬೆಳಗ್ಗೆ 8 ಗಂಟೆಯವರೆಗೆ ವಿಐಪಿ ದರ್ಶನವಿದೆ. ಆದರೆ ಕೆಲವು ದಿನ ವಿಐಪಿ ದರ್ಶನ 10 ಗಂಟೆಯ ತನಕವೂ ಸಾಗುತ್ತಿತ್ತು, ಉಚಿತ ದರ್ಶನಕ್ಕೆ ಬರುವ ಭಕ್ತರು ಕಾಯಬೇಕಿತ್ತು.


Ad Widget

ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನವೆಂಬರ್ 1ರಿಂದ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಇನ್ನು ಮುಂದೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕುರಿತಾಗಿ ಸರಣಿ ಸಭೆಗಳನ್ನು ನಡೆಸಲಾಗಿದ್ದು, ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿಯವರು ಉಚಿತ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆಗುವ ತೊಂದರೆ ನಿವಾರಿಸಲು ನವೆಂಬರ್‍ನಿಂದ ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ.

ವಿಐಪಿ ದರ್ಶನ ಮುಗಿಯುವ ತನಕ ಉಚಿತ ದರ್ಶನದ ಭಕ್ತರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್‍ನಲ್ಲಿಯೇ ತಾಸುಗಟ್ಟಲೇ ಕಾಯಬೇಕಿತ್ತು.

ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಟಿಟಿಡಿ ಪ್ರಾಯೋಗಿಕ ಬದಲಾವಣೆ ಮಾಡುತ್ತಿದ್ದೂ , ನವೆಂಬರ್‍ನಿಂದಲೇ ಇದು ಜಾರಿಗೆ ಬರಲಿದೆ. ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಮಯವನ್ನು ನೀಡಲು ಹಾಗೂ ಸರ್ವದರ್ಶನದಲ್ಲಿಯೂ ಕೆಲವು ಬದಲಾವಣೆ ಮಾಡಲು ಟಿಟಿಡಿ ಯು ಯೋಜಿಸುತ್ತಿದೆ.

error: Content is protected !!
Scroll to Top
%d bloggers like this: