ಈ ಹುಡುಗ ಇರುವುದು 2.3 ಅಡಿ. ಆದರೂ ಆತ ನೂರಡಿ ದೂರಕ್ಕೆ ಎಟುಕುತ್ತಿದ್ದಾನೆ. ಆ ಮಟ್ಟಿಗೆ ಇದೆ ಆತನ ಕಾನ್ಫಿಡೆನ್ಸ್. ಅಂತದ್ದು ಏನಾಯ್ತು ಅಂತ ಕೇಳ್ತಿದ್ದಿರಾ, ಅಂತವರಿಗೆ ಈ ಸುದ್ದಿ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ ಅಜೀಂ ಮನ್ಸೂರಿ ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದ. ಆತನ ‘ಎತ್ತರದ ‘ ಕಾರಣದಿಂದ ಆತನಿಗೆ ಜೋಡಿ ಸಿಗೋದೇ ಕಷ್ಟಕರವಾಗಿತ್ತು. ಹುಡುಗಿ ಹುಡುಗಿ ಹುಡುಕಿ ಸುಸ್ತಾಗಿದ್ದ ಆತ ಕೊನೆಯ ಪ್ರಯತ್ನವೆಂಬಂತೆ ಖುದ್ದು ಮುಖ್ಯಮಂತ್ರಿ ಯವರಿಗೆ ‘ನನಗೊಂದು ಹುಡುಗಿ ಹುಡುಕಿ ಕೊಡಿ’ ಎಂದು ಮನವಿ ಮಾಡಿದ್ದ.
ಅಂತಹಾ ಮನ್ಸೂರಿಗೆ ಈಗ ಆತನ ಕನಸಿನ ಕನ್ಯೆ ಕೊನೆಗೂ ಸಿಕ್ಕಿದ್ದಾಳೆ. ಅದರಂತೆ ಬರುವ ನವೆಂಬರ್ ನಲ್ಲಿ ಆತ ದೊಡ್ಡದಾಗಿ ಸದ್ದು ಮಾಡುತ್ತಾ, ಗ್ರಾಂಡ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಮುಂದಾಗಿದ್ದಾನೆ.
ಕಷ್ಟಪಟ್ಟು ಆತ ತನ್ನ ಸೈಜಿಗೆ ಹೇಳಿ ಮಾಡಿಸಿದ ಹುಡುಗಿ ಫಿಕ್ಸ್ ಮಾಡಿಕೊಂಡಿದ್ದಾನೆ. ಅವತ್ತು ತನಗೆ ಹುಡುಗಿ ಹುಡುಕಿ ಕೊಡಿ ಎಂದು ಮುಖ್ಯಮಂತ್ರಿಯನ್ನೆ ಮನವಿ ಮಾಡಿದ್ದ ಈ ಹುಡುಗ, ಇವತ್ತು ಇನ್ನೂ ಒಂದಷ್ಟು ಹೆಚ್ಚು ದೂರಕ್ಕೆ ಕೈ ಚಾಚಿದ್ದಾನೆ.
ತನ್ನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ಬಯಸಿದ್ದಾನೆ ಈತ. ಅದರಂತೆ ಅವರಿಬ್ಬರಿಗೆ ಅಹ್ವಾನ ಪತ್ರಿಕೆ ನೀಡಲು ದೆಹಲಿಗೆ ಹೊರಡಲಿದ್ದಾರಂತೆ. ಅದಕ್ಕೇ ಆವಾಗ ಹೇಳಿದ್ದು, ಆತನ ಕಾನ್ಫಿಡೆನ್ಸ್ ಲೆವೆಲ್ ಆ ಮಟ್ಟಕ್ಕಿದೆ ಅಂತ.
ಮನ್ಸೂರಿ ತನ್ನ ಮದುವೆಗೆ ಈಗಾಗಲೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಆಗಿದೆ.
ಜೀವನ ಸಂಗಾತಿಯ ಹುಡುಕಾಟದಲ್ಲಿದ್ದ ಮನ್ಸೂರಿ ತನ್ನ ಕನಸಿನ ಹುಡುಗಿಯನ್ನು ಹುಡುಕಲು 2019 ರಲ್ಲಿ ಪ್ರಾರಂಭಿಸಿದ್ದ ಆನಂತರ ಆಟ ತನ್ನ ಹುಡುಗಿಯ ಹುಡುಕಾಟದಲ್ಲಿ ಸಹಾಯ ಮಾಡಲು ಅಂದಿನ ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿದ್ದ. ನಿರಂತರ ಎರಡು ವರ್ಷಗಳ ಹುಡುಕಾಟದ ನಂತರ ಆತನಿಗೆ ಆತನಿಗೆ ‘ಅನುರೂಪ ‘ ವಧು ದೊರೆತಿದ್ದಾಳೆ. ಹಾಪುರ್‌ನ 3 ಅಡಿ ಎತ್ತರದ ಬುಷ್ರಾಳನ್ನು ಮಾರ್ಚ್ 2021 ರಲ್ಲಿ ಆತ ಭೇಟಿಯಾಗಿದ್ದ. ಆಕೆಯೊಂದಿಗೆ ಏಪ್ರಿಲ್ 2021 ರಲ್ಲಿ ಅಜೀಮ್ ಮನ್ಸೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.
ಆದರೆ ಬುಷ್ರಾ ತನ್ನ ಪದವಿ ಪರಿಶಗಳಿಗಾಗಿ ಓದುತ್ತಿದ್ದಳು ಆದುದರಿಂದ ತಾನು ಪದವಿ ಪಡೆದ ನಂತರ ಮಾತ್ರ ಮದುವೆಯಾಗುವುದಾಗಿ ಆಕೆ ತಿಳಿಸಿದ್ದಳು. ಆ ಕಾರಣ ಅವರಿಬ್ಬರ ಮದುವೆ ದಿನಾಂಕ ಮುಂದೂಡಲಾಗಿತ್ತು,
ಈಗ ಬುಶ್ರಾ ಪದವಿ ಶಿಕ್ಷಣ ಪೂರ್ಣಗೊಂಡಿದ್ದು, ಅವರಿಬ್ಬರೂ ನವೆಂಬರ್ 7 ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ, ಸದ್ಯ ಮದುವೆ ತಯಾರಿಯಲ್ಲಿರುವ ಮನ್ಸೂರಿ ಮದುವೆಯಂದು ವಿಶೇಷವಾದ ಶೆರ್ವಾನಿಯಲ್ಲಿ ಮಿಂಚಲಿದ್ದಾನೆ. ಯಾರಿಗೆ ಗೊತ್ತು?: ಹುಡುಗನ ಆತ್ಮವಿಶ್ವಾಸ ನೋಡಿ ಮೋದಿ ಮತ್ತು ಯೋಗಿ ಮದುವೆಗೆ ಬಂದರೂ ಆಶ್ಚರ್ಯವಿಲ್ಲ.