Pm kisan : ಪಿಎಂ ಕಿಸಾನ್ ಪಿಂಚಣಿ ಯೋಜನೆ – 200 ರೂಪಾಯಿ ಹೂಡಿಕೆ ಮಾಡಿ 3 ಸಾವಿರ ಪಿಂಚಣಿ ಗಳಿಸಿ!!!

ಸರ್ಕಾರ ರಾಜ್ಯದ ಜನತೆಗೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದು ಸಹಕರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಹೀಗೆ ಪ್ರತಿ ಕ್ಷೇತ್ರದಲ್ಲಿ ತೊಡಗಿರುವ ಸಾಮಾನ್ಯ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೆಜ್ ರೂಪಿಸಿ ಆರ್ಥಿಕ ನೆರವಿನ ಜೊತೆಗೆ ಅರ್ಹತೆಯನ್ನು ಆಧರಿಸಿ ಸಾಲ ಮನ್ನಾ ಮಾಡಲು ಅನುವು ಮಾಡಿಕೊಟ್ಟಿದೆ.

ಈ ನಡುವೆ Pm kisan ರೈತರು ಕಿಸಾನ್‌ ಪಿಂಚಣಿ ಯೋಜನೆಯ 200 ರೂಪಾಯಿಯನ್ನು ಹೂಡಿಕೆ ಮಾಡುವ ಮೂಲಕ ತಮ್ಮ ವೃದ್ಧಾಪ್ಯವನ್ನು ಆರ್ಥಿಕ ಭದ್ರತೆಯ ಮೂಲಕ ನಡೆಸಲು ನೆರವಾಗಿದ್ದು, ಈ ಯೋಜನೆಯಿಂದ ರೈತರಿಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಈ ಯೋಜನೆಯ ಮೂಲಕ ಆರ್ಥಿಕ ದುರ್ಬಲ ವರ್ಗದವರು ಅಥವಾ ಆರ್ಥಿಕವಾಗಿ ಹಿಂದುಳಿದವರು ಆದಾಯದ ಜೊತೆಗೆ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ (https://maandhan.in/) ಮಾಂಧನ್ ಯೋಜನೆ ಯೋಜನೆಯನ್ನು ಪರಿಚಯಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಸುಲಭವಾಗಿ ಹೂಡಿಕೆ ಮಾಡುವ ವಾತಾವರಣ ಕಲ್ಪಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

https://maandhan ಅಲ್ಲದೇ ಈ ಯೋಜನೆಯನ್ನೂ ಹೊಂದಿರುವ ರೈತರಿಗೆ ಸರ್ಕಾರ ಅನೇಕ ಪ್ರಯೋಜನಗಳ ಮೂಲಕ ನೆರವಾಗುತ್ತಿದೆ.

ಈ ಯೋಜನೆಯಲ್ಲಿ ರೈತರು ತಮ್ಮ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದಾಗಿದ್ದು, ಇದಕ್ಕಾಗಿ ಸರ್ಕಾರವು ಕೆಲವು ಮಾನದಂಡಗಳನ್ನು ಕೂಡ ನಿಗದಿಪಡಿಸಿದೆ.

ಈ ಯೋಜನೆಯಲ್ಲಿನ 18 ವರ್ಷ ವಯಸ್ಸಿನ ರೈತರು ಪ್ರತಿ ತಿಂಗಳು 22 ರೂ.ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದೆ. ಅಲ್ಲದೆ, 30 ವರ್ಷದ ನಂತರ ರೈತರು 110 ರೂ. ಹೂಡಿಕೆ ಮಾಡಬಹುದಾಗಿದ್ದು, 40 ವರ್ಷ ಮೇಲ್ಪಟ್ಟ ರೈತರು 200 ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.

ಈ ಯೋಜನೆಗೆ ಅಗತ್ಯವಾದ ದಾಖಲೆಗಳು ಹೀಗಿವೆ:

ಆಧಾರ್ ಕಾರ್ಡ್,ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಕೃಷಿ ಪತ್ರದ ವಿವರ , ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ಮೊಬೈಲ್‌ ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ವಿವರ.

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರು ಅವರ ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC)ವನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೇ ರೈತರು ಮನೆಯಲ್ಲಿ ಕುಳಿತು ಪಿಎಂ ಕಿಸಾನ್ ಮಾಂಧನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕೂಡ ಕಲ್ಪಿಸಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಮಾಂಧನ್ ಯೋಜನೆಯ ಪ್ರಯೋಜನವನ್ನು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರು ಪಡೆಯಬಹುದಾಗಿದೆ. ಅಲ್ಲದೇ ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಕೂಡ ಈ ಯೋಜನೆಯ ಸದುಪಯೋಗ ಪಡಿಸಿಕೊಂಡು ಲಾಭ ಗಳಿಸಬಹುದು.

ಆದರೆ, ಈ ಯೋಜನೆಯ ಪ್ರಯೋಜನವನ್ನು ಪಡೆಯಲು, 18 ರಿಂದ 40 ವರ್ಷ ವಯಸ್ಸಿನೊಳಗೆ ಅರ್ಜಿ ಸಲ್ಲಿಸಬೇಕಾಗಿದೆ . ಇದಲ್ಲದೆ, ಕಿಸಾನ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣದ ಲಾಭವನ್ನು ರೈತರಿಗೆ ಅವರ 60 ವರ್ಷಗಳ ನಂತರ ಮಾತ್ರ ನೀಡಲಾಗುತ್ತದೆ.

ಇದರಲ್ಲಿ ಪ್ರತಿ ತಿಂಗಳು 3 ಸಾವಿರ ಪಿಂಚಣಿ ನೀಡಲಾಗಲಿದ್ದು, ರೈತರು ತಮ್ಮ ವೃದ್ಧಾಪ್ಯದ ಸಮಯದಲ್ಲಿ ವರ್ಷಕ್ಕೆ 36 ಸಾವಿರ ರೂ ಸಿಗಲಿದೆ.

ಈ ಯೋಜನೆಯ ಮತ್ತೊಂದು ವೈಶಿಷ್ಟ್ಯವೆಂದರೆ ರೈತರು ಅಕಾಲಿಕವಾಗಿ ಮರಣವನ್ನಪ್ಪಿದ್ದರೆ, ಅವರ ಹೂಡಿಕೆಯ ಹಣವನ್ನು ಅವರ ಕುಟುಂಬದವರಿಗೆ ನೀಡಲಾಗುತ್ತದೆ. ಆದರೆ ಇಲ್ಲಿ ರೈತನ ಕುಟುಂಬದವರಿಗೆ ಪ್ರತಿ ತಿಂಗಳು ಕೇವಲ 15 ಸಾವಿರ ಪಿಂಚಣಿ ನೀಡಲಾಗುತ್ತದೆ.

Leave A Reply

Your email address will not be published.