ಮಹಿಳಾ ರೋಗಿಯ ಕೂದಲಿಡಿದೆಳೆದು ಬೆಡ್ ಗೆ ಎಸೆದೇ ಬಿಟ್ಟಳು ನೋಡಿ ಈ ನರ್ಸ್ | ಏನಿದು ಮರ್ಮ? ವೈರಲ್ ಆಯಿತು ವೀಡಿಯೋ !!!

ಡಾಕ್ಟರ್ ಹಾಗೂ ನರ್ಸ್ ಗಳ ಮೇಲೆ ರೋಗಿಗಳಿಗೆ ಭರವಸೆ ತುಂಬಾ ಇರುತ್ತೆ. ಅಕಸ್ಮಾತ್ತಾಗಿ ರೋಗಿಗಳು ತಾಳ್ಮೆ ಕಳೆದುಕೊಂಡು ಮಾತನಾಡಿದರೂ ಅಷ್ಟೇ ತಾಳ್ಮೆಯಿಂದ ಹಾಗೂ ಸಮಾಧಾನದಿಂದ ಡಾಕ್ಟರ್ ಹಾಗೂ ನರ್ಸ್ ಗಳು ನಮ್ಮ ಜೊತೆ ವ್ಯವಹರಿಸುತ್ತಾರೆ.

ಆದರೆ ಇಲ್ಲೊಂದು ಕಡೆ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯನ್ನು ನಡೆಸಿಕೊಂಡ ರೀತಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸೀತಾಪುರ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್‌ನಲ್ಲಿ ನಡೆದ ಗಲಾಟೆಯ ವಿಡಿಯೋ ಕ್ಲಿಪ್ ವೈರಲ್ ಆಗಿದೆ.

ಉತ್ತರ ಪ್ರದೇಶದ (Uttar Pradesh) ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನರ್ಸ್​ ಮಹಿಳೆಯೊಬ್ಬರ ಕೂದಲನ್ನು ಹಿಡಿದು ಹಾಸಿಗೆಯ ಮೇಲೆ ತಳ್ಳಿರುವ ಘಟನೆಯೊಂದು ನಡೆದಿದೆ. ಒಬ್ಬಳು ನರ್ಸ್ ಮಹಿಳಾ ರೋಗಿಯ ಕೂದಲನ್ನು ಹಿಡಿದುಕೊಂಡು ಹಾಸಿಗೆಯ ಕಡೆಗೆ ತಳ್ಳುವುದನ್ನು ಕಾಣಬಹುದು. ಅವಳ ಕೂದಲನ್ನು ಹಿಡಿದೆಳೆದ ನರ್ಸ್​ ಆಕೆಯನ್ನು ಹಾಸಿಗೆ ಮೇಲೆ ತಳ್ಳಿದ್ದಷ್ಟೇ ಅಲ್ಲದೆ ಹಾಸಿಗೆಯ ಇನ್ನೊಂದು ಬದಿಯಲ್ಲಿ ನಿಂತಿರುವ ವ್ಯಕ್ತಿಯ ಸಹಾಯದಿಂದ ಅವಳನ್ನು ಕೆಳಗೆ ಬೀಳಿಸುತ್ತಾರೆ.

ಈ ಘಟನೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆದ ನಂತರ, ಆಸ್ಪತ್ರೆಯ ಅಧಿಕಾರಿಗಳು ಆ ನರ್ಸ್​ ಮಾಡಿರುವ ಕೆಲಸವನ್ನು ಸಮರ್ಥನೆ ಬೇರೆ ಮಾಡಿಕೊಂಡಿದ್ದಾರೆ. ಆ ನರ್ಸ್​ ಆ ರೋಗಿಯ ಜೊತೆ ಯಾವುದೇ ರೀತಿ ಕೆಟ್ಟದಾಗಿ ವರ್ತಿಸಿಲ್ಲ ಎಂದು ಕೂಡಾ ಹೇಳಿದ್ದಾರೆ.

ಈ ರೋಗಿಯನ್ನು ಅಕ್ಟೋಬರ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ರಾತ್ರಿ ಆಕೆಯ ಕುಟುಂಬದ ಸದಸ್ಯರು ಆಸ್ಪತ್ರೆಯಿಂದ ಹೊರಹೋದ ನಂತರ ಆ ಮಹಿಳೆ 12ರಿಂದ 1 ಗಂಟೆಯ ನಡುವೆ ಬಾತ್​ ರೂಮ್ ಬಳಿ ಹೋದರು. ಅಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭ ಮಾಡಿದ್ದರಿಂದ ನರ್ಸ್​ ಆಕೆಯನ್ನು ಎಳೆದುಕೊಂಡು ಹೋಗಿ ಮಲಗಿಸಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಸೀತಾಪುರದ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಕೆ. ಸಿಂಗ್.

ಆ ರೋಗಿ ವಿಚಿತ್ರವಾಗಿ ವರ್ತಿಸಿದ್ದು, ತನ್ನ ಬಳೆಗಳನ್ನು ಒಡೆದು ಬಟ್ಟೆಗಳನ್ನು ಹರಿದುಕೊಳ್ಳಲು ಪ್ರಾರಂಭ ಮಾಡಿದಳು. ಇತರ ಮಹಿಳಾ ರೋಗಿಗಳಲ್ಲಿ ಭಯವನ್ನು ಉಂಟುಮಾಡಿತು. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿ ಅವಳನ್ನು ತಡೆಯಲು ಈ ರೀತಿ ಮಾಡಬೇಕಾಯಿತು. ಆ ರೋಗಿಗೆ ಇಂಜೆಕ್ಷನ್ ನೀಡುವ ಸಲುವಾಗಿ ಆಕೆಯನ್ನು ಎಳೆದು ಹಾಸಿಗೆಯ ಮೇಲೆ ತಳ್ಳಿ ಹಿಡಿದುಕೊಳ್ಳಲಾಯಿತು ಎಂದು ಡಾ. ಸಿಂಗ್ ಹೇಳಿದ್ದಾರೆ.

Leave A Reply

Your email address will not be published.