ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ ಬಾಲಕನೋರ್ವ ಬರೆದ ಕವನ| ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್!

ಶಾಲೆ ಎಂಬುದು ನೂರಾರು ಕನಸುಗಳ ರೂಪಿಸುವ ಸುಂದರ ಹೂದೋಟ. ಶಾಲೆಗಳಲ್ಲಿ ಪಾಠ ಕೇಳುತ್ತಾ ಬೋರ್ ಆದಾಗ ಚಿತ್ರ ಬಿಡಿಸುವ, ಮಾತಾಡುವ ,ಕವನ ಬರೆಯುವ ಇಲ್ಲವೆ ಏನನ್ನೋ ಗೀಚುವ ಹವ್ಯಾಸ ಹೆಚ್ಚಿನ ಮಕ್ಕಳಿಗಿರುತ್ತದೆ.

ಅದರಲ್ಲೂ ಕೋವಿಡ್​ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ತರಗತಿಗಳನ್ನು ಆನ್ಲೈನ್ನಲ್ಲಿ ಆರಂಭಿಸಿದ ಬಳಿಕ, ಪುಟ್ಟ ಮಕ್ಕಳು ಗಂಟೆಗಟ್ಟಲೆ ಏಕಾಗ್ರಚಿತ್ತದಿಂದ ಸ್ಕ್ರೀನ್​ ಮುಂದೆ ಕುಳಿತುಕೊಳ್ಳವುದು ಬಹಳೇ ತ್ರಾಸದಯಕ ವಿಚಾರವಾಗಿ ಪರಿಣಮಿಸಿತ್ತು.

ಸಾಕಷ್ಟು ಮಕ್ಕಳು ವಿಡಿಯೋ ಆಫ್​ ಮಾಡಿ ಮಲಗಿಕೊಂಡಿದ್ದು ಕೂಡ ಇದೆ. ಈ ನಡುವೆ ರಸ್ತೆಗೆ ಬಂದು ಆಟವಾಡಿ ಕೆಲ ಮಕ್ಕಳು ಕಾಲ ಕಳೆದರೆ, ಇನ್ನೊಂದು ವಿಂಡೋನಲ್ಲಿ ಆನ್​ಲೈನ್​ ಗೇಮ್​ ಆಡುತ್ತಾ, ಮತ್ತೊಂದು ಸ್ಕ್ರೀನ್ ನಲ್ಲಿ ಕ್ರಿಕೆಟ್ ನೋಡಿದವರಿರಬಹುದು.

ಇಷ್ಟೇ ಯಾಕೆ ಕಾರ್ಟೂನ್​ ನೋಡಿಯೋ ಇಲ್ಲವೇ ಹಾಳೆಗಳ ಮೇಲೆ ಏನೇನೋ ಗೀಚಿದ್ದು ಕೂಡ ಇದೆ.

ಅರೇ!!! ಈ ವಿಚಾರ ಏಕೆ ಪ್ರಸ್ತಾಪ ಮಾಡುತ್ತಿದ್ದೇವೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು… ನಾಲ್ಕನೇ ತರಗತಿಯ ವಿದ್ಯಾರ್ಥಿ ಬರೆದಿರುವ ಕವನ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

ಶಾಲೆಯ ಒಳಗೆ ಮಕ್ಕಳು ಬಂಧಿಯಾಗಿ ಆಲೋಚನೆಗಳ ಮೂಲಕ ಸುಪ್ತ ವಾಗಿರುವ ಕಲೆ, ಪ್ರತಿಭೆಗಳನ್ನು ಅನಾವರಣಗೊಳಿಸಲು ದೈಹಿಕ ಚಟುವಟಿಕೆ, ಆಟಗಳನ್ನು ಪ್ರೋತ್ಸಾಹ ಮಾಡುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಆನ್​ಲೈನ್​ ಕ್ಲಾಸ್​ ನಡೆಯುತ್ತಿರುವಾಗ, ನಾಲ್ಕನೇ ಕ್ಲಾಸ್​ ಓದುತ್ತಿರುವ ಮಗು ಕವನ ರಚಿಸಿದ್ದು, ಆ ಮಗುವಿನ ಅಮ್ಮ ಒಟ್ಟು ನಾಲ್ಕು ಕವನಗಳನ್ನು ಟ್ವೀಟ್​ ಮಾಡಿದ್ದಾರೆ.

https://twitter.com/grubreport/status/1585021829374439424?ref_src=twsrc%5Etfw%7Ctwcamp%5Etweetembed%7Ctwterm%5E1585021829374439424%7Ctwgr%5Eeb15611f050e2662742dc0741a46c35db4403d1a%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fwoman-shares-poems-written-by-son-during-online-classes-in-pandemic-see-viral-post-skvd-au35-461100.html

ಈ ಪೋಸ್ಟ್​ ಅನ್ನು 1,37,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. StePHANTOM ಎಂಬ ಅಕೌಂಟಿನಲ್ಲಿ ಈ ಪೋಸ್ಟ್​ ಓದಬಹುದಾಗಿದೆ.

ವಿದ್ಯಾರ್ಥಿ ಬರೆದಿರುವ ಕವನದ ಒಂದು ಕವಿತೆಯ ಭಾವಾನುವಾದ ಹೀಗಿದೆ. ‘ಕವಿತೆಯ ಬಗ್ಗೆ ನನಗೊಂದು ಕಲ್ಪನೆ ಇತ್ತೇನೋ ಅನ್ನಿಸುತ್ತದೆ. ಆದರೀಗದು ಇಲ್ಲ. ಬಹುಶಃ ಇಲ್ಲೇ ಎಲ್ಲೋ ಮನೆಯ ಸುತ್ತಮುತ್ತಲೂ ಅದು ಅಲೆದಾಡುತ್ತಿರುಬಹುದು’ .

ನಾಲ್ಕನೇ ತರಗತಿಯ ವಿದ್ಯಾರ್ಥಿ ಬರೆದಿರುವ ಕವನ ಓದಿದರೆ ಅಚ್ಚರಿಯಾಗಬಹುದು.. ಇಷ್ಟು ಚಿಕ್ಕ ವಯಸ್ಸಿಗೆ ಮಗುವಿಗೆ ಇರುವ ಪ್ರಬುದ್ಧತೆ ನೋಡುಗರಿಗೆ ಬೆರಗು ಮೂಡಿಸಿದೆ.

‘ಮುಳ್ಳಿನಿಂದ ಕೂಡಿದ ಟೊಂಗೆಯಲ್ಲಿ ಅರಳಿದ ಗುಲಾಬಿಯಂತೆ ನೀವು ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ’. ಈ ಕವನವನ್ನು ತಾಯಂದಿರ ದಿನಕ್ಕೆ ಬರೆದ ಕವಾನವಾಗಿದೆ.

ನೆಟ್ಟಿಗರು ಈ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದು,. ಎಂಥ ಅದ್ಭುತ ಆಲೋಚನೆ, ನಿಜಕ್ಕೂ ಇವನಿಗೆ ಉತ್ತಮ ಭವಿಷ್ಯವಿದೆ ಎಂದು ನೆಟ್ಟಿಗರು ಹೊಗಳಿ ಕೊಂಡಾಡಿದ್ದಾರೆ.

ಒಬ್ಬರು ಸೃಜನಶೀಲ ಜಗತ್ತಿನಲ್ಲಿ ಅವನು ಮುಂದುವರೆಯಲಿ ಎಂದು ಹಾರೈಸಿದರೆ, ಅವನು ಹೀಗೆ ಕವನಗಳಲ್ಲಿ ತನ್ನ ಮನಸ್ಸು ತೊಡಗಿಸಿಕೊಂಡಿದ್ದು ನಿಜಕ್ಕೂ ಅದ್ಬುತ ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಯಸ್ಸಿನಲ್ಲಿ ಯಾವುದೋ ಒಂದು ಅಭಿವ್ಯಕ್ತಿಯಲ್ಲಿ ತೊಡಗಿಕೊಳ್ಳುವುದೆಂದರೆ ಅದೇ ಮಹಾನ್​ ಸಾಧನೆ !! ಇಂದು ಮಕ್ಕಳ ಮನಸ್ಸನ್ನು ಚಂಚಲಗೊಳಿಸುವ ವಿಷಯಗಳ ನಡುವೆ ಒಳ್ಳೆಯ ಹವ್ಯಾಸ ಬೆಳೆಸಿಕೊಂಡಿದ್ದು ಒಳ್ಳೆಯ ವಿಚಾರ ಎಂದು ಮತ್ತೊಬ್ಬರು ವಿಮರ್ಶೆ ಮಾಡಿದ್ದಾರೆ.

ಏನೇ ಆಗಲಿ..ಉತ್ತಮ ಹವ್ಯಾಸ ಗಳನ್ನು ಮಕ್ಕಳು ರೂಡಿಸಿಕೊಂಡಾಗ ಅದನ್ನು ಪ್ರೋತ್ಸಾಹ ನೀಡಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲು ಪೋಷಕರು ಹಾಗೂ ಶಿಕ್ಷಕರು ಸಹಕಾರ ನೀಡಬೇಕಾಗಿದೆ..

Leave A Reply

Your email address will not be published.